ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್‌ ಅಂತ್ಯಕ್ಕೆ ಬೆಂಗಳೂರಿನ 6 ರಸ್ತೆಗಳಲ್ಲಿ ಏಕಮುಖ ಸಂಚಾರ ಜಾರಿ

By Staff
|
Google Oneindia Kannada News

ಬೆಂಗಳೂರು : ನಗರದ ಶೇಷಾದ್ರಿ ರಸ್ತೆ ಸೇರಿದಂತೆ ಆರು ರಸ್ತೆಗಳನ್ನು ಆಗಸ್ಟ್‌ ಕೊನೆಯ ವೇಳೆಗೆ ಪ್ರಾಯೋಗಿಕವಾಗಿ ಏಕಮುಖ ಸಂಚಾರ ರಸ್ತೆಗಳನ್ನಾಗಿ ಪರಿವರ್ತಿಸಲಾಗುವುದು. ಈ ವಿಷಯವನ್ನು ಬೆಂಗಳೂರು ವಕೀಲರ ಸಂಘದ ಸಭಾಂಗಣದಲ್ಲಿ ಏಕಮುಖ ಸಂಚಾರ ವ್ಯವಸ್ಥೆಯ ಬಗ್ಗೆ ಸೋಮವಾರ ಮಾತನಾಡುತ್ತಿದ್ದ ನಗರ ಪೊಲೀಸ್‌ ಹೆಚ್ಚುವರಿ ಆಯುಕ್ತ (ಸಂಚಾರ) ಎಂ.ಎನ್‌.ರೆಡ್ಡಿ ತಿಳಿಸಿದರು.

ಶೇಷಾದ್ರಿ ರಸ್ತೆ , ನೃಪತುಂಗ ರಸ್ತೆ , ಪೋಸ್ಟ್‌ ಆಫೀಸ್‌ ರಸ್ತೆ , ಜಿಲ್ಲಾ ಕಚೇರಿ ರಸ್ತೆ , ಆಸ್ಪತ್ರೆ ರಸ್ತೆ ಹಾಗೂ ಕಸ್ತೂರಬಾ ರಸ್ತೆಗಳನ್ನು ಕೇಂದ್ರ ಪ್ರದೇಶ ಸಂಚಾರ ನಿರ್ವಹಣಾ ಯೋಜನೆ ಅಡಿಯಲ್ಲಿ ಏಕಮುಖ ಸಂಚಾರ ರಸ್ತೆಗಳಾಗಿ ಬದಲಿಸಲಾಗುವುದು. ಈ ಬಗ್ಗೆ 10 ದಿನ ಮುಂಚಿತವಾಗಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಗುವುದು ಎಂದು ಅವರು ಹೇಳಿದರು.

ನಗರದ ಸಂಚಾರ ವ್ಯವಸ್ಥೆ ಕುರಿತು ರೆಡ್ಡಿ ಅವರು ಕೆಲವು ಕುತೂಹಲಕಾರಿ ಅಂಶಗಳನ್ನು ಹೇಳಿದರು. ಅವುಗಳೆಂದರೆ-

  • ನಗರದಲ್ಲಿ ಪ್ರತಿವರ್ಷ 1 ಲಕ್ಷ ವಾಹನಗಳು ಹೆಚ್ಚುತ್ತಿದ್ದು , ಪ್ರಸ್ತುತ 16 ರಿಂದ 17 ಲಕ್ಷ ವಾಹನಗಳಿವೆ.
  • ನಗರದ 17 ಲಕ್ಷ ವಾಹನಗಳ ಜೊತೆಗೆ ಹೊರ ಊರಿನಿಂದ ಬರುವ ವಾಹನಗಳೂ ಸೇರಿಕೊಳ್ಳುವುದರಿಂದ ಸಂಚಾರ ವ್ಯವಸ್ಥೆ ಸಂಕೀರ್ಣಗೊಳ್ಳುತ್ತಿದೆ. ವಾಹನಗಳು ಹೀಗೆ ಹೆಚ್ಚುತ್ತಾ ಹೋದಲ್ಲಿ ಮುಂದೇನು ? 1 ವರ್ಷದಿಂದ ಅಧ್ಯಯನ ನಡೆಸಿ, ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ.
  • ಕಳೆದ ಎರಡು ದಶಕಗಳಲ್ಲಿ ಬೆಂಗಳೂರಿನಲ್ಲಿ ರಸ್ತೆಗಳ ಅಗಲೀಕರಣ ನಡೆದಿಲ್ಲ .
  • ನಗರದಲ್ಲಿ 30 ಸಾವಿರ ಜಂಕ್ಷನ್‌ ರಸ್ತೆಗಳಿವೆ. ಪ್ರತಿ 200 ರಿಂದ 300 ಮೀಟರ್‌ಗೊಂದು ರಸ್ತೆ ಜಂಕ್ಷನ್‌ಗಳಿವೆ.
  • ನಗರದಲ್ಲಿ ಸಂಚರಿಸುವ ವಾಹನಗಳ ಸರಾಸರಿ ವೇಗ ಗಂಟೆಗೆ 13 ರಿಂದ 15 ಕಿಮೀ.
  • ನಗರದಲ್ಲಿ 12 ರಿಂದ 15 ಮೇಲುರಸ್ತೆಗಳನ್ನು ನಿರ್ಮಿಸಲಾಗುವುದು.
(ಇನ್ಫೋ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X