Get Updates
Get notified of breaking news, exclusive insights, and must-see stories!

ರಾಮಕೃಷ್ಣ ಹೆಗಡೆ ಹುಟ್ಟುಹಬ್ಬಕ್ಕೆ ದೇವೇಗೌಡರಿಗೂ ಬುಲಾವು

ಬೆಂಗಳೂರು :ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ 75 ವರ್ಷ ತುಂಬಲಿರುವ ಸಂದರ್ಭದಲ್ಲಿ , ಅವರನ್ನು ಸಾರ್ವಜನಿಕವಾಗಿ ಅಭಿನಂದಿಸಲು ರಾಮಕೃಷ್ಣ ಹೆಗಡೆ ಅಭಿನಂದನಾ ಸಮಿತಿ ಸಜ್ಜಾಗುತ್ತಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಗಸ್ಟ್‌ 29ರಂದು ಬೆಳಗ್ಗೆ 10 ಗಂಟೆಗೆ ಈ ಅಭಿನಂದನಾ ಸಮಾರಂಭವನ್ನು ಮಾಜಿ ಪ್ರಧಾನಿ ಚಂದ್ರಶೇಖರ್‌ ಉದ್ಘಾಟಿಸಲಿದ್ದಾರೆ ಎಂದು ಸಮಿತಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ವಿ.ಎಸ್‌.ಕೃಷ್ಣ ಅಯ್ಯರ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಪ್ರಧಾನಿ ದೇವೇಗೌಡ ಅವರಿಗೂ ಆಮಂತ್ರಣ ಪತ್ರ ನೀಡಲಾಗಿದೆ. ಆದರೆ ಅವರಿಂದ ಇನ್ನೂ ಉತ್ತರ ದೊರೆತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಸಮಿತಿ ಸದಸ್ಯ ಸಿ.ಭೈರೇಗೌಡ ಹೇಳಿದರು.

ಹೆಗಡೆ ಅವರ 5 ದಶಕಗಳ ರಾಜಕೀಯ ಜೀವನದ ಉತ್ತಮ ಭಾವಚಿತ್ರಗಳ ಚಿತ್ರ ಸಂಪುಟ ಸೇರಿದಂತೆ 5 ಸಂಪುಟಗಳ ಹೊತ್ತಗೆಯನ್ನು ಬಿಡುಗಡೆ ಮಾಡಲಾಗುವುದು. ಇದರಲ್ಲಿ ಹೆಗಡೆ ಅವರ ಲೇಖನಗಳು ಹಾಗೂ ಉಲ್ಲೇಖಾರ್ಹ ಭಾಷಣಗಳೂ ಅಡಕವಾಗಿರುತ್ತವೆ. ಅಭಿನಂದನಾ ಗ್ರಂಥವನ್ನೂ ಸದ್ಯದಲ್ಲೇ ಪ್ರಕಟಿಸಲು ನಿರ್ಧರಿಸಲಾಗಿದೆ. ಹೆಗಡೆ ಅವರ ಬಗ್ಗೆ ಲೇಖನ ಅಥವಾ ಭಾವ ಚಿತ್ರ ಕಳುಹಿಸುವವರು 2209522 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

ಹೆಗಡೆ ಅವರನ್ನು ಅಭಿನಂದಿಸುವವರು : ಮಾಜಿ ಪ್ರಧಾನಿಗಳಾದ ಐ.ಕೆ.ಗುಜ್ರಾಲ್‌ ಹಾಗೂ ವಿ.ಪಿ.ಸಿಂಗ್‌, ಕೇಂದ್ರ ಸಚಿವರಾದ ಜಸ್ವಂತ್‌ ಸಿಂಗ್‌, ವೆಂಕಯ್ಯನಾಯ್ಡು, ರಾಮ್‌ ವಿಲಾಸ್‌ ಪಾಸ್ವಾನ್‌, ಶರದ್‌ ಯಾದವ್‌, ಸುಷ್ಮಾ ಸ್ವರಾಜ್‌, ಮನೇಕಾ ಗಾಂಧಿ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಜಮ್ಮು- ಕಾಶ್ಮೀರ ಮುಖ್ಯಮಂತ್ರಿ ಫರೂಕ್‌ ಅಬ್ದುಲ್ಲಾ, ಒರಿಸ್ಸಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ಸಂಸತ್‌ ಸದಸ್ಯರಾದ ರಾಮ್‌ ಜೇಠ್ಮಲಾನಿ, ಶರದ್‌ ಪವಾರ್‌, ಸಿ.ಕೆ.ಜಾಫರ್‌ ಷರೀಫ್‌, ಚೋ.ರಾಮಸ್ವಾಮಿ, ಮಾಜಿ ಮುಖ್ಯಮಂತ್ರಿ ಎಸ್‌.ಆರ್‌.ಬೊಮ್ಮಾಯಿ, ಡಾ.ಯು.ಆರ್‌.ಅನಂತಮೂರ್ತಿ, ಎಂ.ಜೆ.ಅಕ್ಬರ್‌, ಡಾ.ಕರಣ್‌ ಸಿಂಗ್‌, ಎಂ.ವಿ.ಕಾಮತ್‌.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+