ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ತಿಂಗಳಲ್ಲಿ ಬಿ.ಇ.ಎಲ್‌.ನಿಂದ 163.61 ಕೋಟಿ ರು. ವಹಿವಾಟು

By Staff
|
Google Oneindia Kannada News

ಬೆಂಗಳೂರು : ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿ.ಇ.ಎಲ್‌) ಜೂನ್‌ 30ಕ್ಕೆ ಗೊನೆಗಳೊಂಡ ಆರ್ಥಿಕ ವರ್ಷದ ಪ್ರಥಮ ಮೂರು ತಿಂಗಳ ಅವಧಿಯಲ್ಲಿ 163.61 ಕೋಟಿ ರುಪಾಯಿಗಳ ವಹಿವಾಟು ನಡೆಸಿ, ಪ್ರಗತಿಯ ಪಥದಲ್ಲಿ ಸಾಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಬಿಇಎಲ್‌ 130.1 ಕೋಟಿ ರುಪಾಯಿಗಳ ವಹಿವಾಟು ನಡೆಸಿತ್ತು. ಈ ಪ್ರಗತಿಯಿಂದಾಗಿ ಸಂಸ್ಥೆ ತೆರಿಗೆಗೆ ಮುನ್ನ ಗಳಿಸಿರುವ ಲಾಭ 14.59 ಕೋಟಿ ರುಪಾಯಿಗಳಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬಿಇಎಲ್‌ ಗಳಿಸಿರುವ ಲಾಭದ ಮೊತ್ತ 10.10 ಕೋಟಿ ರುಪಾಯಿಗಳಿಗಿಂತಲೂ ಹೆಚ್ಚಾಗಿದೆ.

ಅಂದರೆ, ಕಂಪನಿಯ ಲಾಭ ಪ್ರತಿಶತ 44.45ರಷ್ಟು ಹೆಚ್ಚಾಗಿದೆ. ಇದೆ ಅವಧಿಯಲ್ಲಿ ತೆರಿಗೆ ಕಡಿತದ ನಂತರದ ಲಾಭ 13.5 ಕೋಟಿ ರುಪಾಯಿಗಳಾಗಿವೆ ಎಂದು ಸಂಸ್ಥೆಯ ಮಾಧ್ಯಮ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X