Get Updates
Get notified of breaking news, exclusive insights, and must-see stories!

ಮೈಸೂರನ್ನು ಹಾಂಕಾಂಗ್‌, ಗುಲ್ಬರ್ಗಾನ ನ್ಯೂಯಾರ್ಕ್‌ ಮಾಡುವೆ ! : ಕೃಷ್ಣ

ಬೆಂಗಳೂರು : ಬೆಂಗಳೂರು ಮಹಾನಗರವನ್ನು ಸಿಂಗಪುರ ಮಾಡುವ ಭ್ರಮೆ ನನಗಾಗಲೀ, ಸರಕಾರಕ್ಕಾಗಲೀ ಇಲ್ಲ. ಆದರೆ, ಬೆಂಗಳೂರನ್ನು ಅತ್ಯುತ್ತಮ ನಗರಿಯನ್ನಾಗಿ ಮಾರ್ಪಡಿಸುವ ಜವಾಬ್ದಾರಿ ಬೆಂಗಳೂರಿನಲ್ಲಿರುವ ಎಲ್ಲ 65 ಲಕ್ಷ ಜನರ ಮೇಲಿದೆ ಎಂದು ಮುಖ್ಯಮಂತ್ರಿ ಕೃಷ್ಣ ಹೇಳಿದರು.

ವಿಧಾನಸಭೆಯಲ್ಲಿ ಶಾಸಕ ಶ್ರೀನಿವಾಸ ಗೌಡರ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ಬೆಂಗಳೂರನ್ನು ಸಿಂಗಪುರ ಮಾಡುತ್ತೇನೆಂದು ನಾನು ಎಂದೂ ಹೇಳಿಲ್ಲ. ಆದರೆ, ಬೆಂಗಳೂರು ಅಭಿವೃದ್ಧಿಯ ಹಾದಿಯಲ್ಲಿ ಸಿಂಗಪುರ ನಮಗೆ ಮಾದರಿ ಎಂದು ಹೇಳಿದ್ದನ್ನೇ ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.

35 ವರ್ಷಗಳ ಹಿಂದೆ ಮೊದಲ ಬಾರಿಗೆ ನಾನು ಸಿಂಗಪುರಕ್ಕೆ ಹೋಗಿದ್ದೆ, ಅದಾದ ದಶಕಗಳ ನಂತರ ಮತ್ತೆ ಅಲ್ಲಿಗೆ ಹೋದಾಗ ಅಲ್ಲಿನ ಜನರ ಶಿಸ್ತು, ನಗರದ ಬೆಳವಣಿಗೆ, ಸ್ವಚ್ಛತೆ ನನ್ನನ್ನು ಆಕರ್ಷಿಸಿತು. ಈ ನಿಟ್ಟಿನಲ್ಲಿ ಸಿಂಗಪುರ ನನಗೆ ಮಾದರಿ ನಗರವಾಗಿದೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಒಂದು ಸಾವಿರ ಕೋಟಿ ರುಪಾಯಿಗಳನ್ನು ವೆಚ್ಚ ಮಾಡಲು ನಿರ್ಧರಿಸಲಾಗಿದೆ. 300 - 400 ಕೋಟಿ ರುಪಾಯಿ ವೆಚ್ಚದಲ್ಲಿ ಬೆಂಗಳೂರು ನಗರಾಭಿವೃದ್ಧಿ ಪಡಿಸಲು ಮಹಾನಗರ ಪಾಲಿಕೆಯಾಂದಿಗೆ ಸರಕಾರ ಒಪ್ಪಂದ ಮಾಡಿಕೊಂಡಿದೆ ಎಂದೂ ಅವರು ವಿವರಿಸಿದರು.

ತೆರಿಗೆ : ಯಾವುದೇ ನಗರದ ಅಭಿವೃದ್ಧಿ ಅಲ್ಲಿನ ಜನರು ನೀಡುವ ತೆರಿಗೆಯನ್ನೂ ಅವಲಂಬಿಸಿರುತ್ತದೆ. ನಮ್ಮಲ್ಲಿ ತೆರಿಗೆ ಕಟ್ಟಲು ಜನ ಸಿದ್ಧರಿದ್ದರೂ, ತೆರಿಗೆ ಕಟ್ಟಬೇಡಿ ಎಂದು ಹುರಿದುಂಬಿಸಿ ಚಳವಳಿ ಮಾಡಲಾಗುತ್ತದೆ. ನಗರಾಭಿವೃದ್ಧಿಗೆ ಹಣವೇ ಬಾರದಿದ್ದರೆ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ನ್ಯೂಯಾರ್ಕ್‌ : ಈ ಮಧ್ಯೆ ಬೆಂಗಳೂರು ಸಿಂಗಪುರ ಮಾಡೋದಾದ್ರೆ, ಮೈಸೂರನ್ನು ಹಾಂಕಾಂಗ್‌ ಮಾಡ್ತೀರಾ ? ಎಂದು ಭಾರತೀಯ ಜನತಾಪಕ್ಷದ ಶಾಸಕ ಶಂಕರಲಿಂಗೇಗೌಡ ಅವರು ಹಾಸ್ಯ ಮಾಡಿದಾಗ, ಅಷ್ಟೇ ನಾಜೂಕಾಗಿ ಉತ್ತರ ನೀಡಿದ ಕೃಷ್ಣ. ಹೌದು, ಮೈಸೂರನ್ನು ಹಾಂಕಾಂಗ್‌ ಆಗಿ, ಗುಲ್ಬರ್ಗಾನ ನ್ಯೂಯಾರ್ಕ್‌ ಆಗಿಯೂ ಮಾಡುವೆ ಎಂದು ಹೇಳಿ. ತಾವೂ ನಕ್ಕು, ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+