Get Updates
Get notified of breaking news, exclusive insights, and must-see stories!

ಸಾಫ್ಟ್‌ವೇರ್‌ ಗಂಡಿಗೆ ವಧು ಬೇಕಾಗಿದೆ !

ಹೆಸರು- ಬಿ.ಪ್ರಖ್ಯಾತ್‌. ವೃತ್ತಿ- ಬೆಂಗಳೂರಿನ ಎಚ್‌ಸಿಎಲ್‌ ಪೀರೋಟ್‌ ಸಿಸ್ಟಂಸ್‌ ಸಾಫ್ಟ್‌ವೇರ್‌ ಎಂಜಿನಿಯರ್‌. ವಯಸ್ಸು- 25 ವರ್ಷ. ಈತನಿಗೊಂದು ಹೆಣ್ಣು ಬೇಕಿದೆ. ಬೇಕಿದ್ದಲ್ಲಿ ನೀವೂ ಸಂಪರ್ಕಿಸಿ !

ಕಳೆದ 10 ತಿಂಗಳಿಂದ ಪ್ರಖ್ಯಾತ್‌ ವಧು ಬೇಟೆ ನಡೆಸಿದ್ದಾರೆ. 110 ಹೆಣ್ಣುಗಳ ನೋಡಿಯೂ ಕಂಕಣ ಬಲ ಕೂಡಿ ಬಂದಿಲ್ಲ. ‘ಮೊನ್ನೆ ಮೊನ್ನೆವರೆಗೂ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ಹಾರ್ವರ್ಡ್‌ ವಿಶ್ವವಿದ್ಯಾಲಯದ ಪದವೀಧರರಿಗಿದ್ದಷ್ಟೇ ಗೌರವವಿತ್ತು. ಆದರೀಗ ಸಾಫ್ಟ್‌ವೇರ್‌ ವೃತ್ತಿಪರರು ಸೆಕೆಂಡ್‌ ಡಿವಿಷನಲ್‌ ಮೆಟೀರಿಯಲ್‌ಗಳು !’ ಎಂಬುದು ಖುದ್ದು ಪ್ರಖ್ಯಾತ್‌ ಅಭಿಪ್ರಾಯ. ಮದುವೆ ಮಾರುಕಟ್ಟೆಯಲ್ಲಿ ಈಗ ಸಾಫ್ಟ್‌ವೇರ್‌ ಎಂಜಿನಿಯರುಗಳ ಬೇಡಿಕೆ ಏಕಾಏಕಿ ಕುಸಿದಿದೆ.

‘ಮುಂದಿನ ವರ್ಷ ಕೆಲಸ ಹೋದರೆ..?’ : ಕಳೆದ ನಾಲ್ಕು ತಿಂಗಳಿಂದ ಬಹುತೇಕ ಅಪ್ಪ- ಅಮ್ಮಂದಿರು ತಮ್ಮ ಹೆಣ್ಣು ಮಕ್ಕಳನ್ನು ಸಾಫ್ಟ್‌ವೇರ್‌ ಎಂಜಿನಿಯರ್‌ಗಳಿಗೆ ಮದುವೆ ಮಾಡಿಕೊಡಲು ಹಿಂದೇಟು ಹಾಕುತ್ತಿರುವುದನ್ನು ಅನುಭವಿಸಿದ್ದೇನೆ. ‘ಈಗೇನೋ ಸರಿ, ಮುಂದಿನ ವರ್ಷ ಕೆಲಸ ಹೋದರೆ ತಮ್ಮ ಮಗಳ ಗತಿ ಏನು’ ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದಾರೆ. ನನಗೆ ಹೆಣ್ಣು ಹುಡುಕಿ ಸಾಕಾಗಿ ಹೋಗಿದೆ. ಸ್ವಪ್ರಯತ್ನದ ನಂತರ ಈಗ ಮೆರೇಜ್‌ ಬ್ಯೂರೋಗಳ ಮೊರೆಹೋಗಿದ್ದೇನೆ ಎನ್ನುತ್ತಾರೆ ಪ್ರಖ್ಯಾತ್‌.

ಕಂಪ್ಯೂಟರ್‌ ಆಡಿಯೋ- ವಿಷುಯಲ್‌ ಏಡೆಡ್‌ ಮೆಟ್ರಿಮೋನಿಯಲ್‌ ಬ್ಯೂರೋದ ಮುಖ್ಯಸ್ಥ ಟಿ.ಜಿ.ಶಿವರಾಜ್‌ ಹೀಗೆ ಹೇಳುತ್ತಾರೆ- ಅಮೆರಿಕದಲ್ಲಿ ತಿಂಗಳಿಗೆ ಸುಮಾರು 70 ಸಾವಿರ ರುಪಾಯಿ (1, 200 ಡಾಲರ್‌) ಪಗಾರ ಇರುವ ಐಟಿ ಪರಿಣತರು ಕೆಲಸ ಕಳಕೊಂಡು ಇಲ್ಲಿಗೆ ವಾಪಸ್ಸಾಗಿದ್ದಾರೆ. ಜೊತೆಗೆ ಇಲ್ಲಿರುವ ಅವಕಾಶದ ಹರವನ್ನೂ ತೀರಾ ಕಡಿಮೆ ಮಾಡಿದ್ದಾರೆ. ಮಾಹಿತಿ ತಂತ್ರಜ್ಞಾನ ಇನ್ನೂ ಬೇರು ಬಿಡದ ಕ್ಷೇತ್ರ. ಪ್ರಯತ್ನ-ಪರೀಕ್ಷೆಗಳ ಹಾದಿಯಲ್ಲೇ ಸಾಗಿರುವ ಈ ಕ್ಷೇತ್ರ ಭವಿತವ್ಯದ ಬೆಳಕು ಅಂತ ಹೇಗೆ ನಂಬುವುದು ? ಎಂಬ ಜನರ ಧೋರಣೆಯಿಂದ ನಮ್ಮಲ್ಲಿ ವಧು- ವರರ ಬೇಟೆ ಪಟ್ಟಿ ಉದ್ದವಾಗಿದೆ. 500 ಐಟಿ ಪರಿಣತರಿಗೆ ಹೆಣ್ಣು ಬೇಕಾಗಿದೆ !

ಜನರ ಪಾಲಿಗೆ ಐಟಿ ಅಭದ್ರ ಕ್ಷೇತ್ರ : ಶಿವರಾಜ್‌ ಅವರ ಬ್ಯೂರೋದಲ್ಲಿ 5 ತಿಂಗಳ ಹಿಂದೆ ಜೆ.ರಾಜಶೇಖರ್‌ ಎಂಬುವರು ತಮ್ಮ ಹೆಸರು ನೋಂದಾಯಿಸಿದ್ದರು. ಲಕ್ಷಣವಾಗಿರುವ ಪದವಿಧರ ಹೆಣ್ಣು ಅವರ ಬೇಡಿಕೆಯಾಗಿತ್ತು. 150 ಹೆಣ್ಣುಗಳ ಬೇಟೆಯ ನಂತರ, 30 ಮುಖಗಳನ್ನು ಅವರು ಅಂತಿಮ ನಿರ್ಧಾರಕ್ಕೆ ಇಟ್ಟುಕೊಂಡರು. ಆದರೆ ಆ ಮೂವತ್ತೂ ಹೆಣ್ಣು ಮಕ್ಕಳು ರಾಜಶೇಖರ್‌ರನ್ನು ಮದುವೆಯಾಗಲು ಒಲ್ಲೆ ಅಂದುಬಿಟ್ಟರು. ಕಾರಣ- ಬೆಂಗಳೂರಿನ ಹೆಸರಾಂತ ಕಾರ್‌ ಕಂಪನಿಯಲ್ಲಿ ರಾಜಶೇಖರ್‌ ಸಾಫ್ಟ್‌ವೇರ್‌ ಎಂಜಿನಿಯರ್‌ !

ಜನ ಗಾಳಿಯ ಹೊಸ ಅಲೆಯನ್ನೇ ನೆಚ್ಚಿಕೊಳ್ಳುವುದಿಲ್ಲ. ಹಣ- ಅಧಿಕಾರ- ಭದ್ರತೆ ಹೆಣ್ಣು ಕೊಡಲು ಇರುವ ಮಾನದಂಡಗಳು. ಐಟಿ ಈಗ ಸ್ಥಿರತೆ ಕಾಣದ ಪೆಂಡ್ಯುಲಂ. ಹೀಗಾಗಿ ಮೇನೇಜ್‌ಮೆಂಟ್‌ ವರಗಳಿಗೀಗ ಡಿಮ್ಯಾಂಡು. ಚಾರ್ಟರ್ಡ್‌ ಅಕೌಂಟೆಂಟ್‌ಗಳು, ಸೆಕ್ರೆಟರಿಗಳಿಗೆ ಮದುವೆ ಮಾರುಕಟ್ಟೆಯಲ್ಲಿ ಈ ಹೊತ್ತು ಭಾರೀ ಬೇಡಿಕೆ.

ಪ್ರಖ್ಯಾತ್‌ ಈ ಹಿಂದೆ ಅಮೆರಿಕೆಯಲ್ಲಿದ್ದವರು. ರಾಜಶೇಖರ್‌ ಕೂಡ ಅಮೆರಿಕ ನೋಡಿ ಬಂದವರೇ. ಆದರೀಗ ಅಮೆರಿಕೆಯಲ್ಲಿ ಸಿಗುತ್ತಿದ್ದ ಪಗಾರ ಇಲ್ಲ. ಹಾಗಂತ ಇವರೂ ನಿರುದ್ಯೋಗಿಗಳೂ ಅಲ್ಲ. ಇವರಿಗೆ ಜೀವನ ಸಂಗಾತಿಯ ಅವ-ಶ್ಯ-ಕ-ತೆ-ಯಿ-ದೆ. ಕೊಡುವವರ್ಯಾರೂ ಇಲ್ಲವೇ ? !

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+