Get Updates
Get notified of breaking news, exclusive insights, and must-see stories!

ವಿಸ್ಡನ್‌ ಟೆಸ್ಟ್‌ ಕ್ರಿಕೆಟ್‌ ಯಾದಿಯಲ್ಲಿ ಕುಂಬ್ಳೆ, ಲಕ್ಷ್ಮಣ್‌

V.V.S. Laxmanಮುಂಬೈ : ಒಬ್ಬ ಆಟಗಾರನ ಒಂದೇ ಒಂದು ಅದ್ಭುತ ಆಟ ಆತನನ್ನು ಉತ್ತುಂಗಕ್ಕೆ ಕೊಂಡೊಯ್ಯಬಲ್ಲುದು ಎಂಬುದಕ್ಕೆ ಭಾರತದ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಸದ್ಯದ ಪಕ್ಕಾ ಉದಾಹರಣೆ. ಗುರುವಾರ ವಿಸ್ಡನ್‌ ಬಿಡುಗಡೆ ಮಾಡಿದ ಈವರೆಗಿನ ಟೆಸ್ಟ್‌ ಕ್ರಿಕೆಟ್‌ ದಿಗ್ಗಜರ ಯಾದಿಯಲ್ಲಿ ಲಕ್ಷ್ಮಣ್‌ ಹೆಸರೂ ಇದೆ. ಒಂದು ದಿನದ ಪಂದ್ಯಗಳಲ್ಲಿ ಅವರು ತಾಳ ತಪ್ಪಿರುವುದು ಬೇರೆ ಮಾತು. ವಿಸ್ಡನ್‌ನ ಬೌಲರ್‌ಗಳ ಯಾದಿಯಲ್ಲಿ ಅನಿಲ್‌ ಕುಂಬ್ಳೆ ಅವರಿಗೆ ಎರಡನೇ ಸ್ಥಾನ.

ವಿಸ್ಡನ್‌ ಆನ್‌ಲೈನ್‌ ನಿರ್ದೇಶಕ ಆ್ಯಂತೋನಿ ಬೌಚರ್‌ ಈ ವಿಷಯ ತಿಳಿಸಿದರು. 138 ವರ್ಷಗಳ ಟೆಸ್ಟ್‌ ಕ್ರಿಕೆಟ್‌ನ 100 ಆಟಗಾರರ ಉಲ್ಲೇಖ ‘ವಿಸ್ಡನ್‌ 100’ನಲ್ಲಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 281 ರನ್‌ ಸಿಡಿಸಿದ್ದ ಲಕ್ಷ್ಮಣ್‌ 234.8 ಪಾಯಿಂಟ್ಸ್‌ ಪಡೆಯುವುದರೊಂದಿಗೆ ವಿಸ್ಡನ್‌ ಬ್ಯಾಟಿಂಗ್‌ ಯಾದಿಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ.

ಯಾದಿಯಲ್ಲಿ ಲಕ್ಷ್ಮಣ್‌ಗಿಂತ ಮೇಲಿರುವ ಆಟಗಾರರು- ಆಸ್ಟ್ರೇಲಿಯಾದ ಡಾನ್‌ ಬ್ರಾಡ್ಮನ್‌ (1936-37ರಲ್ಲಿ ಇಂಗ್ಲೆಂಡ್‌ ವಿರುದ್ಧ 270 ರನ್‌ ಗಳಿಸಿದ್ದಕ್ಕೆ), ವಿಂಡೀಸ್‌ನ ಬ್ರಿಯಾನ್‌ ಲಾರಾ (1998-99ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 153 ರನ್‌ ಗಳಿಸಿದ್ದಕ್ಕೆ), 1991ರಲ್ಲಿ ವಿಂಡೀಸ್‌ ವಿರುದ್ಧ ಅಜೇಯ 154 ಗಳಿಸಿದ್ದ ಇಂಗ್ಲೆಂಡ್‌ನ ಗ್ರಹಾಂ ಗೂಚ್‌, ಅದೇ ದೇಶದ ಇಯಾನ್‌ ಬಾಥಮ್‌ (1981ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 149) ಹಾಗೂ 1931- 32ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಅಜೇಯ 299 ಗಳಿಸಿದ ಡಾನ್‌ ಬ್ರಾಡ್ಮನ್‌ (ಯಾದಿಯಲ್ಲಿ 2ನೇ ಬಾರಿ) .

ಯಾದಿಯಲ್ಲಿ ಸಚಿನ್‌ ತೆಂಡೂಲ್ಕರ್‌, ಗಾರ್ಡನ್‌ ಗ್ರೀನಿಜ್‌, ಸ್ಟೀವ್‌ ವಾ, ಸಯೀದ್‌ ಅನ್ವರ್‌, ಗ್ಯಾರಿ ಕರ್ಸ್ಟನ್‌ - ಈ ಯಾವ ಪ್ರಮುಖ ಆಟಗಾರರೂ ಇಲ್ಲ. ಪಾಕಿಸ್ತಾನದ ಅಜರ್‌ ಮಹ್ಮೂದ್‌ 1997- 98ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯವೊಂದರಲ್ಲಿ 132 ರನ್‌ ಗಳಿಸಿದ್ದಕ್ಕಾಗಿ ವಿಸ್ಡನ್‌ ಪಟ್ಟಿಯಲ್ಲಿದ್ದಾರೆ. ಭಲೇ ಅದೃಷ್ಟ ಅಂದರೆ ಇದಪ್ಪಾ. ಅಲ್ಲವೇ?

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+