ನ್ಯೂಟನ್, ಐನ್‌ಸ್ಟೀನ್, ಸರ್.ಸಿ.ವಿ.ರಾಮನ್ ಸಾಲಿಗೆ ಪ್ರೊ.ಕುಲಕರ್ಣಿ
ಬೆಂಗಳೂರು : ಮೂರು ಶತಮಾನಗಳ ಸುದೀರ್ಘ ಇತಿಹಾಸವುಳ್ಳ ಲಂಡನ್ನಿನ ರಾಯಲ್ ಸೊಸೈಟಿ ನೀಡುವ ಫೆಲೋಷಿಪ್ ಪಡೆದು ತಮ್ಮ ಹೆಸರಿನ ಮುಂದೆ ಎಫ್.ಎರ್.ಎಸ್. ಎಂಬ ಪ್ರತಿಷ್ಠಿತ ಮೂರಕ್ಷರಗಳನ್ನು ಸೇರಿಸಿಕೊಳ್ಳುವುದು ಪ್ರತಿಯಾಬ್ಬ ವಿಜ್ಞಾನಿಯ ಹೆಬ್ಬಯಕೆಯಾಗಿರುತ್ತದೆ.
ಇಂತಹ ಪ್ರತಿಷ್ಠಿತ ಗೌರವಕ್ಕೆ ಕನ್ನಡಿಗ ಪ್ರೊ. ಎಸ್.ಆರ್. ಕುಲಕರ್ಣಿ ಪಾತ್ರರಾಗಿದ್ದಾರೆ. ಈ ಹಿಂದೆ ರಾಯಲ್ ಸೊಸೈಟಿಯ ಗೌರವಕ್ಕೆ ಪಾತ್ರರಾದ ಚಾರ್ಲ್ಸ್ ಡಾರ್ವಿನ್, ಸರ್.ಸಿ.ವಿ. ರಾಮನ್, ಸರ್ ಐಸಾಕ್ ನ್ಯೂಟನ್ ಅವರಂತಹ ಮಹಾ ಮಹಿಮರ ಸಾಲಿನಲ್ಲಿ ಈಗ ಪ್ರೊ. ಕುಲಕರ್ಣಿ ಅವರೂ ಸೇರಿದ್ದಾರೆ.
ಜುಲೈ 13ರಂದು ಲಂಡನ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕುಲಕರ್ಣಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದಕ್ಕೂ ಮುನ್ನ 1982ರಲ್ಲಿ ಭಾರತದ ಹೆಸರಾಂತ ವಿಜ್ಞಾನಿ ಸಿ.ಎನ್.ಆರ್. ರಾವ್ ಹಾಗೂ ರೊದ್ದಂ ನರಸಿಂಹ ಅವರಿಗೆ ಈ ಪ್ರಶಸ್ತಿ ಪ್ರಾಪ್ತವಾಗಿತ್ತು.
ಲಂಡನ್ನಿನ ರಾಯಲ್ ಸೊಸೈಟಿಯ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಮೂರನೆಯ ಕನ್ನಡಿಗರೆಂಬ ಕೀರ್ತಿಗೆ ಶ್ರೀನಿವಾಸ ಆರ್. ಕುಲಕರ್ಣಿ ಭಾಜನರಾಗಿದ್ದಾರೆ. ಪ್ರಸ್ತುತ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಖಗೋಳ ಶಾಸ್ತ್ರದ ಪ್ರಾಧ್ಯಾಪಕರಾಗಿರುವ ಕುಲಕರ್ಣಿ ಅವರು ಮೂಲತಃ ಹುಬ್ಬಳ್ಳಿಯವರು. ಅವರ ತಂದೆ ಹೆಸರಾಂತ ವೈದ್ಯ ಡಾ. ಎಚ್.ಆರ್ ಕುಲಕರ್ಣಿ ಉತ್ತರ ಕರ್ನಾಟಕದ ಮಂದಿಗೆ ಸುಪರಿಚಿತರು.
ಮುನ್ನೂರು ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಭಾರತದ 41 ಮಂದಿ ಮಾತ್ರ ರಾಯಲ್ ಸೊಸೈಟಿ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಪ್ರಶಸ್ತಿ ಪಡೆದ ಭಾರತೀಯರ ಸಾಲಿನಲ್ಲಿ ಸರ್.ಸಿ.ವಿ. ರಾಮನ್, ಹೋಮಿ ಜಹಂಗೀರ್ ಬಾಭಾ, ಶ್ರೀನಿವಾಸ ರಾಮಾನುಜನ್, ಎಸ್.ಸಿ. ಭೋಸ್, ಎಸ್. ಚಂದ್ರಶೇಖರ್, ಪಿ.ಸಿ. ಮಹಲನೋಬಿಸ್, ಸತ್ಯೇಂದ್ರನಾಥ್ ಭೋಸ್, ಎಂ.ಜಿ.ಕೆ. ಮೆನನ್, ಎಂ.ಎಸ್. ಸ್ವಾಮಿನಾಥನ್, ಸಿ.ಎನ್.ಆರ್. ರಾವ್, ರೊದ್ದಂ ನರಸಿಂಹನ್, ಶ್ರೀನಿವಾಸ ಕುಲಕರ್ಣಿ ಮೊದಲಾದವರು ಸೇರಿದ್ದಾರೆ.
(ಇನ್‌ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications