ಭಾರತದಲ್ಲಿನ ಅಮೆರಿಕಾ ರಾಯಭಾರಿಯಾಗಿರಾಬರ್ಟ್ ಬ್ಲಾಕ್ವಿಲ್
ನವದೆಹಲಿ : ರಾಬರ್ಟ್ ಬ್ಲಾಕ್ವಿಲ್ ಭಾರತದಲ್ಲಿನ ಅಮೆರಿಕೆಯ ರಾಯಭಾರಿಯಾಗಿ ಶುಕ್ರವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಕಳೆದ ಮಾರ್ಚ್ 22ರಂದು ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್, ಬ್ಲಾಕ್ವಿಲ್ ಅವರನ್ನು ಭಾರತದ ರಾಯಭಾರಿಯಾಗಿ ಹೆಸರಿಸಿದ್ದರು. ರಿಚರ್ಡ್ ಸೆಲೆಸ್ಟೆ ಅವರ ಉತ್ತರಾಧಿಕಾರಿಯಾಗಿ ಬ್ಲಾಕ್ವಿಲ್ ಸೇವೆ ಸಲ್ಲಿಸಲಿದ್ದಾರೆ. ನನ್ನ ವಿದೇಶಾಂಗ ನೀತಿಯಲ್ಲಿ ಭಾರತದ ಸ್ಥಾನಮಾನವೇನು ಎಂಬುದನ್ನು ಬಾಬ್ ಬ್ಲಾಕ್ವಿಲ್ ಚೆನ್ನಾಗಿ ತಿಳಿದಿದ್ದಾರೆ. ಅವರು ಭಾರತದಲ್ಲಿನ ಅಮೆರಿಕ ರಾಯಭಾರಿಯಾಗಿ ಕಾರ್ಯ ನಿರ್ವಹಿಸಲು ಹೇಳಿ ಮಾಡಿಸಿದಂತಿದ್ದಾರೆ. ತಮ್ಮ ಹುದ್ದೆಯ ಗೌರವವನ್ನು ಅವರು ಹೆಚ್ಚಿಸಲಿದ್ದಾರೆ ಎಂಬ ದೃಢ ನಂಬುಗೆ ನನ್ನದು ಎಂದು ಬ್ಲಾಕ್ವಿಲ್ ಬಗ್ಗೆ ಬುಷ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಹಾರ್ವರ್ಡ್ ವಿಶ್ವವಿದ್ಯಾಲಯದ ಜಾನ್ ಎಫ್ ಕೆನಡಿ ಸ್ಕೂಲ್ ಆಫ್ ಗೌರ್ನ್ಮೆಂಟ್ನಲ್ಲಿ ಅಂತರರಾಷ್ಟ್ರೀಯ ಭದ್ರತೆ ವಿಷಯದ ಅಧ್ಯಾಪಕರಾಗಿ ಬ್ಲಾಕ್ವಿಲ್ ಈವರೆಗೆ ಸೇವೆ ಸಲ್ಲಿಸಿದ್ದಾರೆ. ಅಮೆರಿಕಾದ ರಕ್ಷಣಾ ನೀತಿ ಹಾಗೂ ವಿದೇಶಾಂಗ ನೀತಿ ಕುರಿತಂತೆ ಬ್ಲಾಕ್ವಿಲ್ ಹಲವಾರು ಕೃತಿಗಳನ್ನು ಬರೆದಿದ್ದಾರೆ ಹಾಗೂ ಸಂಪಾದಿಸಿದ್ದಾರೆ. ವಿದೇಶಾಂಗ ಸೇವೆಯಲ್ಲೂ ಸಲಹೆಗಾರರಾಗಿ ಹಾಗೂ ಸಂಧಾನಕಾರರಾಗಿ ಇವರು ಅನುಭವ ಪಡೆದಿದ್ದಾರೆ.
(ಯುಎನ್ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications