Get Updates
Get notified of breaking news, exclusive insights, and must-see stories!

‘ವಿಧವೆ’ ಪದ ಪ್ರಯೋಗಕ್ಕೆ ಕಾಶ್ಮೀರ ಸರ್ಕಾರದಿಂದ ನಿಷೇಧ

ಶ್ರೀನಗರ : ಮಹಿಳೆಯರ ಮನಃ ಸ್ಥಿತಿಯ ಮೇಲೆ ದುಷ್ಪರಿಣಾಮ ಬೀರುವ ‘ವಿಧವೆ’ ಎನ್ನುವ ಪದ ಪ್ರಯೋಗವನ್ನು ಸರ್ಕಾರಿ ಕಡತಗಳಿಂದ ನಿಷೇಧಿಸಿ ಕಾಶ್ಮೀರ ಸರ್ಕಾರ ಆದೇಶ ಹೊರಡಿಸಿದೆ.

ಎಲ್ಲ ಸರ್ಕಾರಿ ಕಚೇರಿಗಳಲ್ಲಿನ ಕಡತಗಳಲ್ಲೂ ‘ವಿಧವೆ’ ಎನ್ನುವ ಪದ ಪ್ರಯೋಗದ ಪರ್ಯಾಯವಾಗಿ ‘ಮೃತರ ಪತ್ನಿ’ ಎನ್ನುವ ಪದ ಬಳಸಲು ಸರ್ಕಾರ ಸೂಚಿಸಿದೆ. ಈ ಆದೇಶ ಇಂಗ್ಲೀಷ್‌, ಹಿಂದಿ, ಉರ್ದು ಸೇರಿದಂತೆ ಎಲ್ಲ ಭಾಷೆಗಳಲ್ಲಿನ ದಾಖಲೆಗಳಿಗೂ ಸಂಬಂಧಿಸಿದ್ದು ತಕ್ಷಣದಿಂದಲೇ ಜಾರಿಗೆ ಬಂದಿದೆ.

ಮಹಿಳೆಯರ ಮಾನಸಿಕ ಸ್ಥಿತಿಯ ಮೇಲೆ ‘ವಿಧವೆ’ ಎನ್ನುವ ಪದ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವ ಸ್ವಯಂ ಸೇವಾ ಸಂಸ್ಥೆಗಳ ಒತ್ತಾಯದ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶ ಹೊರಡಿಸಿದೆ. ಭಯೋತ್ಪಾದಕ ಕೃತ್ಯಗಳಲ್ಲಿ ಕನಿಷ್ಠ 10 ಸಾವಿರ ಮಂದಿ ಕಾಶ್ಮೀರಿ ಮಹಿಳೆಯರು ಗಂಡಂದಿರನ್ನು ಕಳೆದುಕೊಂಡಿದ್ದಾರೆ ಎಂದು ಅಂದಾಜು ಮಾಡಲಾಗಿದೆ.

1997 ರಲ್ಲಿನ ಬಾಂಬ್‌ ಸ್ಫೋಟದಲ್ಲಿ ಗಂಡನನ್ನು ಕಳೆದುಕೊಂಡಿರುವ ಮೆಹಬೂಬ್‌ ನಜೀರ್‌ ಎನ್ನುವ ಮಹಿಳೆ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದು , ನಜೀರ್‌ ಅಹ್ಮದ್‌ನ ವಿಧವೆ ಎಂದು ನನ್ನನ್ನು ಕರೆಯುವುದು ನನಗೆ ವಿಪರೀತ ವೇದನೆಯಾಗುತ್ತಿತ್ತು ಎಂದು ಹೇಳಿದ್ದಾರೆ.

(ಎಎಫ್‌ಪಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+