Get Updates
Get notified of breaking news, exclusive insights, and must-see stories!

ಫೂಲನ್‌ ಹತ್ಯೆ : ಹೆಚ್ಚು ಭದ್ರತೆಗಾಗಿ ಮಂತ್ರಿ ಮಹೋದಯರ ಮೊರೆ

ನವದೆಹಲಿ : ಮಂತ್ರಿ ಮಹೋದಯರೆಲ್ಲಾ ತರಗುಟ್ಟುತ್ತಿದ್ದಾರೆ. ಹಾಡಹಗಲೇ ರಾಜಧಾನಿಯ ಹೃದಯ ಭಾಗದಲ್ಲಿ ಒಬ್ಬ ಮಂತ್ರಿ ಕೊಲೆ ಮಾಡೋದು ಅಂದರೇನು. ಫೂಲನ್‌ ದೇವಿ ಹತ್ಯೆಗೆ ಕಾರಣವೇ ಆಕೆಗೆ ಸಾಕಷ್ಟು ಭದ್ರತೆ ನೀಡದ್ದು. ನಮಗೆ ಸಾಕಷ್ಟು ಭದ್ರತೆ ಸಾಲದು. ಅದನ್ನು ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ.

ಸಾರ್ವಜನಿಕ ಸಂಬಂಧಿ ವ್ಯಕ್ತಿಗಳು ಭದ್ರತೆಯ ನೆಪದಲ್ಲಿ ದುರುಪಯೋಗಕ್ಕೆ ಕೈಹಾಕದಿರಲೆಂದು ಕಳೆದ ವರ್ಷ ಗೃಹ ಸಚಿವಾಲಯ ಭದ್ರತೆ ಒದಗಿಸುವ ಕ್ರಮದಲ್ಲಿ ಹಲವು ಬದಲಾವಣೆಗಳನ್ನು ಜಾರಿಗೆ ತಂದಿತು. ಈ ಕಾರಣಕ್ಕೆ ಫೂಲನ್‌ ದೇವಿ ಅವರಿಗೆ ನೀಡಿದ್ದ ಭದ್ರತೆ ಸರಿಯಾಗಿರಲಿಲ್ಲ. ಈಗ ಅದೇ ಮುಳುವಾಗಿದೆ ಎಂದು ಸಚಿವರುಗಳು ಟೀಕಿಸಿದ್ದಾರೆ. ಸಂಸತ್‌ ಸದಸ್ಯರ ಭದ್ರತೆಯನ್ನು ಸರ್ಕಾರ ಪುನರ್‌ ಪರಿಶೀಲಿಸಬೇಕು ಎಂದು ಟಿಡಿಪಿ ನಾಯಕ ಯರ್ರಂನಾಯ್ಡು ಒತ್ತಾಯಿಸಿದ್ದಾರೆ.

ಆದರೆ ಗೃಹ ಸಚಿವಾಲಯ ತಾನು ನಿಯಮಾನುಸಾರ ನಡೆದುಕೊಂಡಿದ್ದು, ಫೂಲನ್‌ ಹತ್ಯೆಗೆ ಭದ್ರತೆಯ ವೈಫಲ್ಯವೇ ಕಾರಣವಲ್ಲ ಎಂದು ಸಮರ್ಥಿಸಿಕೊಂಡಿದೆ. ಕಳೆದ ವರ್ಷ ಭದ್ರತೆ ಒದಗಿಸುವಲ್ಲಿ ಕಟ್ಟುನಿಟ್ಟು ಕ್ರಮ ಜಾರಿಗೆ ತಂದಿದ್ದು ನಿಜ. ಇದರನ್ವಯ ಗೃಹ ಕಾರ್ಯದರ್ಶಿ ಮತ್ತು ವಿಶೇಷ ಕಾರ್ಯದರ್ಶಿ ನೇತೃತ್ವದ ಎರಡು ಸಮಿತಿಗಳು ಭದ್ರತೆ ಎಷ್ಟಿರಬೇಕೆಂದು ನಿರ್ಧರಿಸುತ್ತವೆ. ಪ್ರತಿ 6 ತಿಂಗಳಿಗೊಮ್ಮೆ ಭದ್ರತೆಯನ್ನು ಪರಿಶೀಲಿಸುತ್ತವೆ. ಪರಿಸ್ಥಿತಿ ಹೆಚ್ಚು ಭದ್ರತೆಯ ಅಗತ್ಯವೊಡ್ಡಿದರೆ ಅದನ್ನು ಒದಗಿಸುತ್ತದೆ. ಒಂದು ವರ್ಷದ ಕೆಳಗೆ ಫೂಲನ್‌ ದೇವಿ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಈ ಸಮಿತಿಗಳೇ ಪರಿಶೀಲಿಸಿದ್ದವು. ಭದ್ರತೆ ಹೆಚ್ಚಿಸಬೇಕಾದ ಯಾವ ಅಗತ್ಯವೂ ಇರಲಿಲ್ಲವಾದ್ದರಿಂದ ಹಿಂದೆ ನೀಡಿದ್ದ ಭದ್ರತೆಯನ್ನೇ ಮುಂದುವರೆಸಲಾಯಿತು ಎಂದು ಗೃಹ ಸಚಿವಾಲಯ ಸಮರ್ಥನೆ ನೀಡಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+