ಅರ್ಧ ಮಳೆಗಾಲ ಮುಗಿದರೂ ಬಾರದ ಮಳೆ ಆಗಸ್ಟ್‌ನಲ್ಲೂ ಬರಲ್ಲ
ಬೆಂಗಳೂರು : ಒಣಗಿ ಭಣಗುಟ್ಟುತ್ತಿರುವ ಜೂನ್ ಜುಲೈ ತಿಂಗಳ ಬೇಗೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಆಗಸ್ಟ್‌ನಲ್ಲಿಯೂ ಮಳೆ ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಹವಾಮಾನ ಇಲಾಖೆ ಹೇಳಿದೆ.
ಅರ್ಧ ಮಳೆಗಾಲ ಕಳೆದು ಹೋದ ನಂತರವೂ ಮಳೆ ಬರಬಹುದು ಎಂದು ರಾಜ್ಯದ ಜನತೆ ನಿರೀಕ್ಷಿಸುತ್ತಿದ್ದರೆ, ಮಳೆ ಬರುವುದು ಕಷ್ಟ ಸಾಧ್ಯ ಎಂದು ಖಂಡತುಂಡವಾಗಿ ಹವಾಮಾನ ಇಲಾಖೆಯ ವರದಿ ಹೇಳುತ್ತಿದೆ. ಬೇಸಿಗೆಯ ನಂತರ ಮಳೆಗಾಲ ಬಂದಿದೆ ಎಂಬುದೇ ತಿಳಿಯುತ್ತಿಲ್ಲ. ಇತಿಹಾಸದಲ್ಲಿಯೂ ಬರಗಾಲಗಳು ಕಾಣಿಸಿಕೊಂಡಿವೆ. ಆದರೆ ಇತ್ತೀಚಿನ ದಶಕಗಳಲ್ಲಿ ಬರಗಾಲ ಆಗಾಗ ಕಾಣಿಸಿಕೊಳ್ಳಲಾರಂಭಿಸಿದೆ. ಇದರಿಂದ ಜನಜೀವನಕ್ಕೆ ವಿಪರೀತ ತೊಂದರೆಯಾಗುತ್ತಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಎ.ಎಲ್.ಕೊಪ್ಪರ್ ಹೇಳುತ್ತಾರೆ.
40 ವರ್ಷಗಳಲ್ಲಿ ಜೂನ್ ಇಷ್ಟೊಂದು ಭಣಗುಟ್ಟಿರಲಿಲ್ಲ
ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮಳೆ ಸಾಕಷ್ಟು ಬಂದಿದ್ದು, ಜನರಲ್ಲಿ ಆಶಾವಾದ ಹುಟ್ಟಿತ್ತು. ಆದರೆ ಮೇ ತಿಂಗಳಿನಲ್ಲಿ ಹೋದ ಮಳೆ ಮತ್ತೆ ದಯಮಾಡಿಸಿಲ್ಲ. ಕಳೆದ 40 ವರ್ಷಗಳ ಅವಧಿಯಲ್ಲಿ ಈ ಬಾರಿಯದು ಅತೀ ಒಣ ಜೂನ್ ತಿಂಗಳು ಎಂದು ದಾಖಲಾಗಿದೆ. ಬೆಂಗಳೂರು ಮತ್ತು ಉತ್ತರ ಕರ್ನಾಟಕದಲ್ಲಿ ಬಿದ್ದ ಮಳೆ 10 ಮಿಲಿ ಮೀಟರ್‌ನ ಆಸುಪಾಸಿಗೇ ಇದೆ. ಪ್ರತಿ ವರ್ಷ ಮೇ ತಿಂಗಳ ಅಂತ್ಯಕ್ಕೆ ಹವಾಮಾನ ಇಲಾಖೆ ಬಿಡುಗಡೆ ಮಾಡುತ್ತಿದ್ದ ಮಳೆ ವಿವರ ಈ ವರ್ಷ ಇನ್ನೂ ಬಂದಿಲ್ಲ. ಯಾಕೆಂದರೆ ರಾಜ್ಯದಲ್ಲಿ ಸಾಕಷ್ಟು ಮಳೆಯೇ ಆಗಿಲ್ಲ.
ಮಳೆಗಾಲ ಮುಗಿಯಲು ಇನ್ನೆರಡು ತಿಂಗಳು ಮಾತ್ರ ಉಳಿದಿದೆ. ಶ್ರಾವಣದ ಚಿಟಿಪಿಟಿ ಮಳೆಯಾಗಲಿ, ಪುಷ್ಯದ ಜಡಿಮಳೆಯಾಗಲಿ ರಾಜ್ಯಕ್ಕೆ , ಅದರಲ್ಲಿಯೂ ಉತ್ತರ ಕರ್ನಾಟಕಕ್ಕೆ ಬಂದಿಲ್ಲ. ಕರ್ನಾಟಕವನ್ನು ಬರಪೀಡಿತ ರಾಜ್ಯವೆಂದು ಘೋಷಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲಾಗಿದೆ.
ಕುರಿಮಾಂಸದ ಬೆಲೆ 100 ರೂನಿಂದ 60 ಕ್ಕಿಳಿದಿದೆ
ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಂದಿ ಗುಳೇ ಹೊರಟಿರುವುದು, ದನಕರುಗಳು ಕಸಾಯಿ ಖಾನೆ ಸೇರುತ್ತಿರುವುದು, ಕುರಿ ಮಾಂಸದ ದರ 100 ರೂಪಾಯಿಯಿಂದ 60 ರೂಪಾಯಿಗೆ ಇಳಿದಿರುವುದು ರಾಜ್ಯ ಈಗಾಗಲೇ ಕ್ಷಾಮದಿಂದ ತತ್ತರಿಸುತ್ತಿರುವುದನ್ನು ಹೇಳುತ್ತಿದೆ.
ಆದರೆ ಇನ್ನಾದರೂ ಮಳೆ ಬರಬಹುದು ಎಂಬ ನಿರೀಕ್ಷೆ, ಹವಾಮಾನ ಇಲಾಖೆಯ ವರದಿಯಿಂದಾಗಿ ಸುಳ್ಳಾಗಿದೆ. ಆದರೂ ಸೆಪ್ಟೆಂಬರ್ ಅಕ್ಟೋಬರ್ ಹೊತ್ತಿಗೆ ರಾಜ್ಯಕ್ಕೆ ಸಾಕಷ್ಟು ಮಳೆ ಬರಬಹುದು ಎಂದು ಹೇಳುತ್ತಾ ಜನರ ಸೋಲುವ ಕಣ್ಣುಗಳಿಗೆ ಕೊಪ್ಪರ್ ಭರವಸೆ ತುಂಬಿದ್ದಾರೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications