ನೀರಾವರಿ, ವಿದ್ಯುತ್, ಆರೋಗ್ಯ.. ಕ್ಷೇತ್ರಗಳ ಸಹಾಯಧನಕ್ಕೆ ಕೃಷ್ಣಚಕ್ರ
ಬೆಂಗಳೂರು : ನೀರಾವರಿ, ವಿದ್ಯುತ್, ಆರೋಗ್ಯ ಮುಂತಾದ ಕ್ಷೇತ್ರಗಳ ಸಹಾಯಧನಕ್ಕೆ ಕತ್ತರಿ ಪ್ರಯೋಗ ಮಾಡುವ ಮೂಲಕ ರಾಜ್ಯ ಹಣಕಾಸು ಸ್ಥಿತಿಯನ್ನು ಸುಧಾರಿಸಲು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಉದ್ದೇಶಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಘೋಷಿಸಿದರು. ಮುಂದಿನ 4 ವರ್ಷಗಳ ಅವಧಿಯಲ್ಲಿ ಪಡೆಯಬೇಕಾಗಿರುವ ಸಾಲ, ತೀರಿಸಬೇಕಾದ ಬಡ್ಡಿ ಹಾಗೂ ಸಂಪನ್ಮೂಲ ಕ್ರೋಢೀಕರಣ ಅರಿತು ತನ್ನ ಮುಂದಿನ ಹೆಜ್ಜೆಗಳನ್ನು ಸರ್ಕಾರ ನಿರ್ಣಯಿಸಲಿದೆ ಎಂದ ಅವರು, ಸದನದಲ್ಲಿ ಮಧ್ಯಮಾವಧಿ ಆರ್ಥಿಕ ಯೋಜನೆ (2000-2001 ರಿಂದ 2004-05) ಮಂಡಿಸಿದರು.
ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದರು. ಕೃಷ್ಣ ಅವರು ಪ್ರಕಟಿಸಿದಂತೆ ಹಣಕಾಸು ಸ್ಥಿತಿ ಸುಧಾರಣೆಗೆ ಸರ್ಕಾರ ಉದ್ದೇಶಿಸಿರುವ ಕ್ರಮಗಳೆಂದರೆ-
- ಸಾಲದ ಮೊತ್ತದ ಸ್ಥಿರೀಕರಣ ಹಾಗೂ ನಿರಂತರವಾಗಿ ಏರುತ್ತಿರುವ ಬಡ್ಡಿಗೆ ಕಡಿವಾಣ.
- ತೆರಿಗೆ ಪದ್ಧತಿಯಲ್ಲಿ ಮತ್ತಷ್ಟು ಸುಧಾರಣೆ.
- ನೀರಾವರಿ, ವಿದ್ಯುತ್, ಆರೋಗ್ಯ ವಲಯಗಳಿಗೆ ನೀಡುತ್ತಿರುವ ಸಹಾಯಧನದಲ್ಲಿ ಕಡಿತ.
- ತೆರವಾಗುವ ಹುದ್ದೆಗಳಿಗೆ ಮರು ನೇಮಕದ ಸಂಖ್ಯೆಯಲ್ಲಿ ಕಡಿತ. ಮುಂದಿನ 4 ವರ್ಷಗಳಲ್ಲಿ ನಿವೃತ್ತಿಯಿಂದ ತೆರವಾಗುವ ಹುದ್ದೆಗಳಲ್ಲಿ ಪ್ರತಿ ವರ್ಷ ಮೂರನೇ ಒಂದು ಭಾಗದಷ್ಟು ಹುದ್ದೆಗಳನ್ನು ರದ್ದು ಪಡಿಸಲಾಗುವುದು. ಇದರಿಂದಾಗಿ 2004 ರ ವೇಳೆಗೆ ಸರ್ಕಾರಿ ಸಿಬ್ಬಂದಿಯಲ್ಲಿ ಶೇ.12 ರಷ್ಟು ಕಡಿತವಾಗಲಿದೆ. ಆದರೆ, ಶಿಕ್ಷಣ, ಆರೋಗ್ಯ, ಪೊಲೀಸ್, ಅರಣ್ಯ ಮತ್ತು ವನ್ಯಜೀವಿ ಇಲಾಖೆಗಳ ನೇಮಕಾತಿಯಲ್ಲಿ ಯಾವುದೇ ಕಡಿತವಿಲ್ಲ .
- ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಮಾತ್ರ ಆಹಾರ ಸಹಾಯಧನ ನಿಗದಿ.
1998 ರಿಂದ ಈವರೆಗೆ ಸರ್ಕಾರ ಪಡೆದ ವಿದೇಶಿ ಸಾಲದ ವಿವರಗಳನ್ನು ಮುಖ್ಯಮಂತ್ರಿ ಸದನದ ಗಮನಕ್ಕೆ ತಂದರು.
1998-99 ರಲ್ಲಿ 313.60 ಕೋಟಿ ರು.
1999-2000 ರಲ್ಲಿ 460.65 ಕೋಟಿ ರು.
2000-2001 : 568.98 ಕೋಟಿ ರು.
ಮುಂದಿನ 4 ವರ್ಷಗಳಲ್ಲಿ ವಿಶ್ವಬ್ಯಾಂಕ್ 8800 ಕೋಟಿ ರು. ನೆರವು ನೀಡಲಿದೆ.
ಕಳೆದ ಮಾರ್ಚ್ ಅಂತ್ಯದವರೆಗೆ ಸರ್ಕಾರ ವಿವಿಧ ಮೂಲಗಳಿಂದ 18,090.53 ಕೋಟಿ ರುಪಾಯಿಗಳ ಸಾಲ ಸಂಗ್ರಹಿಸಿದ್ದು , ಪಡೆದಿರುವ ಸಾಲಕ್ಕೆ 1981.60 ಕೋಟಿ ರು. ಬಡ್ಡಿಯನ್ನು ಪಾವತಿಸಿದೆ ಎಂದು ಕೃಷ್ಣ ಹೇಳಿದರು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications