ಸೆಮ್ಮಂಗುಡಿ ಅವರಿಗೆ ಲಕ್ಷ್ಮೀನಾರಾಯಣ ಅಂತರರಾಷ್ಟ್ರೀಯ ಪ್ರಶಸ್ತಿ
ಬೆಂಗಳೂರು : ಸಂಗೀತ ಕ್ಷೇತ್ರದ ಸಾಧನೆಗಾಗಿ ನೀಡುತ್ತಿರುವ ಲಕ್ಷ್ಮೀನಾರಾಯಣ ಅಂತರರಾಷ್ಟ್ರೀಯ ಪ್ರಶಸ್ತಿಗೆ ಈ ಬಾರಿ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಭಾಜನರಾಗಿದ್ದಾರೆ.
ಕರ್ನಾಟಕ ಶಾಸ್ತ್ರೀಯ ಶೈಲಿಯ ಪಿಟೀಲು ವಾದಕ ಡಾ.ಎಲ್.ಸುಬ್ರಹ್ಮಣ್ಯಂ ಹಾಗೂ ಅವರ ಪತ್ನಿ ಹಿನ್ನೆಲೆಗಾಯಕಿ ಕವಿತಾ ಸುಬ್ರಹ್ಮಣ್ಯಂ ಇತ್ತೀಚೆಗೆ ಸೆಮ್ಮಂಗುಡಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ನಗದು ಹಾಗೂ ನೆನಪಿನ ಕಾಣಿಕೆಯನ್ನು ಪ್ರಶಸ್ತಿ ಒಳಗೊಂಡಿದೆ.
ಸುಬ್ರ-ಹ್ಮಣ್ಯಂ ಅವರ ತಂದೆ ಪ್ರೊ.ಎಲ್.ಲಕ್ಷ್ಮೀನಾರಾಯಣ ಅವರ ಸ್ಮರಣಾರ್ಥ ನೀಡಲಾಗುವ ಈ ಪ್ರಶಸ್ತಿಯನ್ನು ವಿಜಿ ಗ್ಲೋಬಲ್ ಆರ್ಟ್ಸ್ ಕೊಡುಗೆಯಾಗಿ ನೀಡಿದೆ. ವಿಶ್ವಾದ್ಯಂತ ಲಕ್ಷ್ಮೀನಾರಾಯಣ ಗ್ಲೋಬಲ್ ಮ್ಯೂಸಿಕ್ ಫೆಸ್ಟಿವಲ್ ಸಂಯೋಜನೆ ಮಾಡುತ್ತಿದೆ ವಿಜಿ ಗ್ಲೋಬಲ್ ಆರ್ಟ್ಸ್.
ಭಾರತ ಸ್ವಾತಂತ್ರ್ಯ ಸುವರ್ಣ ಮಹೋತ್ಸವವಾದ 1997ರಲ್ಲಿ ಮೊದಲ ಲಕ್ಷ್ಮೀನಾರಾಯಣ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಲಾರ್ಡ್ ಯಹೂದಿ ಮೆನನ್ ಅವರಿಗೆ ರಾಷ್ಟ್ರಪತಿ ಕೆ.ಆರ್.ನಾರಾಯಣ್ ಪ್ರದಾನ ಮಾಡಿದ್ದರು. ನಂತರ ಇದೇ ಪ್ರಶಸ್ತಿಗೆ ಪಂಡಿತ್ ವಿ.ಜಿ.ಜೋಗ್ ಭಾಜನರಾಗಿದ್ದರು.
ಲಕ್ಷ್ಮೀನಾರಾಯಣ ಗ್ಲೋಬಲ್ ಮ್ಯೂಸಿಕ್ ಫೆಸ್ಟಿವಲ್ನಲ್ಲಿ ಹಾಲಿವುಡ್ ಸೂಪರ್ಸ್ಟಾರ್ ಸ್ಟೀವನ್ ಸೀಗಲ್ ಗಿಟಾರ್ ನುಡಿಸಿದ್ದಾರೆ. ಲಾರ್ಡ್ ಯಹೂದಿ ಮೆನನ್, ಉಸ್ತಾದ್ ಬಿಸ್ಮಿಲ್ಲಾ ಖಾನ್, ಇಸ್ತಾದ್ ಅಲ್ಲಾ ರಖಾ, ಪಂಡಿತ್ ಕಿಶನ್ ಮಹಾರಾಜ್ ಮೊದಲಾದ ಸಂಗೀತ ದಿಗ್ಗಜರು ಇದರಲ್ಲಿ ಭಾಗವಹಿಸಿದ್ದಾರೆ.
(ಇನ್ಫೋ ವಾರ್ತೆ)
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications