Get Updates
Get notified of breaking news, exclusive insights, and must-see stories!

ಸಂಪೂರ್ಣ ಕಂಪ್ಯೂಟರೀಕೃತವಾದ ರಾಜ್ಯದ ಪ್ರಥಮ ಜಿಲ್ಲೆ ಕೊಪ್ಪಳ

ಗಂಗಾವತಿ : ರಾಜ್ಯೋತ್ಸವ ದಿನವಾದ ನವೆಂಬರ್‌ 1ರಹೊತ್ತಿಗೆ ರಾಜ್ಯದ ಎಲ್ಲ ತಾಲೂಕು ಕೇಂದ್ರಗಳೂ ಗಣಕೀಕೃತ ವ್ಯವಸ್ಥೆಯಡಿಯಲ್ಲಿ ಬರಲಿವೆ ಎಂದು ರಾಜ್ಯ ಕಂದಾಯ ಸಚಿವ ಎಚ್‌.ಸಿ. ಶ್ರೀಕಂಠಯ್ಯ ಅವರು ತಿಳಿಸಿದ್ದಾರೆ.

ಇಲ್ಲಿನ ತಹಶೀಲ್ದಾರರ ಕಚೇರಿಯಲ್ಲಿ ಕಂಪ್ಯೂಟರೀಕೃತ ಪಹಣಿ ಪತ್ರ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ರಾಜ್ಯದ ಎಲ್ಲ ತಾಲೂಕು ಕೇಂದ್ರಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ, ವಿಶ್ವಬ್ಯಾಂಕ್‌, ಹುಡ್ಕೋ ನೆರವಿನಿಂದ ಕುಡಿಯುವ ನೀರು, ವಿದ್ಯುತ್‌, ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ವಿಫಲವಾಗಿರುವ ಹಿನ್ನೆಲೆಯಲ್ಲಿ ತುರ್ತು ಅಗತ್ಯ ಇರುವ ಜಿಲ್ಲೆಗಳಲ್ಲಿ ಕುಡಿಯುವ ನೀರು, ಗೋಶಾಲೆಗಳ ವ್ಯವಸ್ಥೆ ಕಲ್ಪಿಸಲು ಆದೇಶಿಸಲಾಗಿದೆ ಎಂದರು. ಹುಡ್ಕೋದಿಂದ ಪಡೆಯಲಾಗಿರುವ 350 ಕೋಟಿ ರುಪಾಯಿ ಸಾಲದಲ್ಲಿ 100 ಮಿನಿ ವಿಧಾನಸೌಧ ನಿರ್ಮಾಣ, 7 ಹೊಸ ಜಿಲ್ಲೆಗಳಲ್ಲಿ ಜಿಲ್ಲಾ ಸಂಕೀರ್ಣ ಕಟ್ಟಣ, ಹಳೆ ಕಟ್ಟಡಗಳ ನವೀಕರಣ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯಕ್ಕೆ ಪ್ರಥಮ : ಈ ಸಂದರ್ಭದಲ್ಲಿ ಮಾತನಾಡಿದ ಪೌರಾಡಳಿತ ಸಚಿವರಾದ ಎಂ. ಮಲ್ಲಿಕಾರ್ಜುನ ನಾಗಪ್ಪ ಅವರು, ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕುಗಳ ಕಂದಾಯ ಇಲಾಖೆಗಳೂ ಈಗ ಸಂಪೂರ್ಣ ಗಣಕೀಕೃತ ವ್ಯವಸ್ಥೆಯಡಿ ಬಂದಿದ್ದು. ಸಂಪೂರ್ಣ ಕಂಪ್ಯೂಟರೀಕೃತಗೊಂಡ ರಾಜ್ಯದ ಪ್ರಥಮ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷ ನಾರಾಯಣಪ್ಪ, ತಾ.ಪಂಚಾಯ್ತಿ ಅಧ್ಯಕ್ಷೆ ಯಮುನವ್ವ, ಕಾಡಾ ಅಧ್ಯಕ್ಷರಾದ ಎಚ್‌. ಆರ್‌. ಶ್ರೀನಾಥ್‌, ಜಿಲ್ಲಾಧಿಕಾರಿ ತುಷಾರ್‌ ಮೊದಲಾದವರು ಹಾಜರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+