ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಜುಲೈ ಅಂತ್ಯಕ್ಕೆ ಮೇಖ್ರಿ ವೃತ್ತದ ಸಬ್‌ವೇ ಸಂಚಾರಕ್ಕೆ ಸಿದ್ಧ’

By Staff
|
Google Oneindia Kannada News

ಬೆಂಗಳೂರು : ನಗರದ ಮೇಖ್ರಿ ವೃತ್ತದಲ್ಲಿ ನಿರ್ಮಿಸಲಾಗುತ್ತಿರುವ ಸಬ್‌ವೇ ಜುಲೈ ಅಂತ್ಯಕ್ಕೆ ಪ್ರಾಯೋಗಿಕ ವಾಹನ ಸಂಚಾರಕ್ಕೆ ಸಿದ್ಧವಾಗಲಿದ್ದು , ಆಗಸ್ಟ್‌ 15 ರಂದು ಸಬ್‌ವೇಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಾಗುವುದು ಎಂದು ಮೇಯರ್‌ ಪ್ರೇಮಾ ಕಾರಿಯಪ್ಪ ತಿಳಿಸಿದ್ದಾರೆ.

ಸೆಂಟ್ರಲ್‌ ಕಾಲೇಜು ಆವರಣದಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯ ಏರ್ಪಡಿಸಿದ್ದ ವನ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಪ್ರಸ್ತುತ ಕಾಮಗಾರಿ ನಡೆಯುತ್ತಿರುವ ಮೆಜೆಸ್ಟಿಕ್‌- ಸಂಗಮ್‌ ಟಾಕೀಸ್‌ ನಡುವಣ ಪಾದಚಾರಿ ಸುರಂಗಮಾರ್ಗ ಆಗಸ್ಟ್‌ ತಿಂಗಳಲ್ಲಿಯೇ ಬಳಕೆಗೆ ಸಿದ್ಧವಾಗಲಿದೆ ಎಂದು ಹೇಳಿದರು.

ಜುಲೈ ತಿಂಗಳನ್ನು ಹಸಿರು ಮಾಸವನ್ನಾಗಿ ಬೆಂಗಳೂರು ಮಹಾ ನಗರ ಪಾಲಿಕೆ ಆಚರಿಸುತ್ತಿದ್ದು , ಈ ತಿಂಗಳಲ್ಲಿ 60 ಸಾವಿರ ಗಿಡ ನೆಡಲಾಗುವುದು. ನಗರದ ಶಾಲಾ ಕಾಲೇಜು, ಆಸ್ಪತ್ರೆ, ಸರ್ಕಾರಿ ಕಚೇರಿಗಳ ಆವರಣದಲ್ಲಿ ಗಿಡ ನೆಡಲು ಉದ್ದೇಶಿಸಲಾಗಿದೆ ಎಂದು ಪ್ರೇಮಾ ಕಾರಿಯಪ್ಪ ತಿಳಿಸಿದರು.

750 ಎಕರೆ ಪ್ರದೇಶದಲ್ಲಿ ಜೈವಿಕ ಪಾರ್ಕ್‌
ಬೆಂಗಳೂರು ವಿಶ್ವ ವಿದ್ಯಾಲಯ 750 ಎಕರೆ ಪ್ರದೇಶದಲ್ಲಿ ಜೈವಿಕ ಪಾರ್ಕ್‌ ರೂಪಿಸಿದ್ದು , ಈ ಉದ್ಯಾನದಲ್ಲಿ 3 ಲಕ್ಷ ಗಿಡಗಳನ್ನು ನೆಡಲಾಗಿದೆ ಎಂದು ಬೆಂಗಳೂರು ವಿವಿ ಕುಲಪತಿ ಡಾ. ಸಿದ್ಧಪ್ಪ ಕಾರ್ಯಕ್ರಮದಲ್ಲಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಹರಿಕೃಷ್ಣ ಪುನರೂರು, ಬೆಂಗಳೂರು ವಿವಿ ಕುಲ ಸಚಿವ ಕೆ.ಹೆಚ್‌. ಅಶ್ವಥ್‌ ನಾರಾಯಣಗೌಡ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X