ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಸಮರ್ಥ ಸಚಿವರಿಗೆ ಎಚ್ಚರಿಕೆ, ದಕ್ಷ- ಸಮರ್ಥ ಸಚಿವರಿಗೆ ಪ್ರಶಂಸೆ’

By Staff
|
Google Oneindia Kannada News

ಬೆಂಗಳೂರು : ‘ಅದಕ್ಷ ಹಾಗೂ ಅಸಮರ್ಥ ಸಚಿವರಿಗೆ ಎಚ್ಚರಿಕೆ, ದಕ್ಷ- ಸಮರ್ಥ ಸಚಿವರಿಗೆ ಪ್ರಶಂಸೆ’- ಇದು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಸರ್ಕಾರದ ಪರಾಮರ್ಶೆಗೆ ಆಗಮಿಸಿರುವ ಕಾಂಗ್ರೆಸ್‌ ವರಿಷ್ಠ ಮಂಡಳಿ ಮೌಲ್ಯ ಮಾಪನಕ್ಕಾಗಿ ಅನುಸರಿಸುತ್ತಿರುವ ಮಾನದಂಡ.

ಮೌಲ್ಯಮಾಪನಕ್ಕೆ ಆಗಮಿಸಿರುವ ತ್ರಿಸದಸ್ಯ ವರಿಷ್ಠ ಮಂಡಳಿಯ ಸದಸ್ಯರಲ್ಲೊಬ್ಬರಾದ ಅಂಬಿಕಾ ಸೋನಿ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು. ಚೆನ್ನಾಗಿ ಕೆಲಸ ಮಾಡಿರುವ ಸಚಿವರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಲಾಗುವುದು. ಅದಕ್ಷ ಮಂತ್ರಿಗಳಿಗೆ ಎಚ್ಚರಿಕೆ ನೀಡಲಾಗುವುದು ಹಾಗೂ ಅವರಿಗೆ ಸರಿಯಾಗಿ ಕೆಲಸ ಮಾಡುವಂತೆ ಸೂಚನೆ ನೀಡಲಾಗುವುದು ಎಂದು ಬುಧವಾರ ನಗರಕ್ಕಾಗಮಿಸಿದ ಅಂಬಿಕಾ ಸೋನಿ ಸುದ್ದಿಗಾರರಿಗೆ ಹೇಳಿದರು.

ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯ ಸಾಧಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರದ ಪರಾಮರ್ಶೆ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದ ಸೋನಿ, ಸಚಿವರು ಮತ್ತು ಪಕ್ಷ ಜನತೆಗೆ ಬದ್ಧರಾಗಿದ್ದು ಚುರುಕಿನಿಂದ ಕೆಲಸ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.

ಕರ್ನಾಟಕದಲ್ಲಿ ಮಾತ್ರ ಇಂಥಾ ಪರಾಮರ್ಶೆ ನಡೆಯುತ್ತಿಲ್ಲ , ಕಾಂಗ್ರೆಸ್‌ ಅಧಿಕಾರದಲ್ಲಿ ಇರುವ ಎಲ್ಲ ರಾಜ್ಯಗಳಲ್ಲಿಯೂ ಆಯಾ ರಾಜ್ಯ ಸರ್ಕಾರಗಳ ಪರಾಮರ್ಶೆ ನಡೆಯುತ್ತಿದೆ ಎನ್ನುವುದನ್ನು ಒತ್ತಿ ಹೇಳಿದ ಅವರು- ಬರ ಪರಿಹಾರ ಕಾಮಗಾರಿ, ವಿದ್ಯುತ್‌ ಕೌರತೆ, ವಸತಿ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಲಾಗುವುದು ಎಂದರು.
ಕೊನೆಯದಾಗಿ- ಬುಧವಾರ ಸಂಜೆಯಿಂದ ರಾಜ್ಯ ಸರ್ಕಾರದ ಪರಾಮರ್ಶೆ ಕಾರ್ಯ ಆರಂಭವಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X