ಬಳ್ಳಾರಿಯ ಎಂಎಸ್ಪಿಎಲ್ ಘಟಕಕ್ಕೆ ಪರಿಸರ ಪ್ರಶಸ್ತಿ
ಬಳ್ಳಾರಿ: ರಾಜ್ಯದ ಅತೀ ದೊಡ್ಡ ಕಬ್ಬಿಣ ಅದಿರು ರಫ್ತು ಘಟಕ ಎನಿಸಿಕೊಂಡಿರುವ ಎಂಎಸ್ಪಿಎಲ್ ಲಿಮಿಟೆಡ್ ಈ ಸಾಲಿನ ಅಭೇರಾಜ್ ಬಾಲದೋಟ ಪರಿಸರ ಪ್ರಶಸ್ತಿ ದೊರೆತಿದೆ.
ದೇಶದಲ್ಲಿ ಗಣಿಗಾರಿಕೆ ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿ ಐಎಸ್ಒ 9001 ಸರ್ಟಿಫಿಕೇಟ್ ಪಡೆದಿರುವ ಪ್ರಥಮ ಕಂಪೆನಿ ಎಂಬ ಹೆಗ್ಗಳಿಕೆಗೆ ಈ ಕಂಪೆನಿ ಪಾತ್ರವಾಗಿದೆ. ಅಭೇರಾಜ್ ಪ್ರಶಸ್ತಿಯು ಪ್ರತಿ ವರ್ಷ ಪರಿಸರದ ಬಗ್ಗೆ ಕಾಳಜಿ ಇರುವ ಅದಿರು ಗಣಿಗಾರಿಕಾ ಕಂಪೆನಿಗಳಿಗೆ ನೀಡಲಾಗುತ್ತಿದ್ದು, ಈ ಬಾರಿ ಎಂಎಸ್ಪಿಎಲ್ ಪ್ರಶಸ್ತಿಗೆ ಪಾತ್ರವಾಗಿದೆ.
ಹೊಸಪೇಟೆಯಲ್ಲಿರುವ ಈ ಅದಿರು ಕಂಪೆನಿಯು ವರ್ಷ ಕ್ಕೆ 2 ಮಿಲಿಯನ್ ಟನ್ ಕಬ್ಬಿಣದ ಅದಿರು ಉತ್ಪಾದಿಸುತ್ತದೆ. ಕಂಪೆನಿ ಆಧುನಿಕ ಗಣಿಗಾರಿಕಾ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, 1990-91ನೇ ಸಾಲಿನಲ್ಲಿಯೂ ಅಭೇ ರಾಜ್ ಬಾಲದೋಟಾ ಪ್ರಶಸ್ತಿ ಪಡೆದಿತ್ತು.
ಹೊಸಪೇಟೆಯಲ್ಲಿ ಕಳೆದ ಐದು ದಶಕಗಳಿಂದಲೂ ಗಣಿಗಾರಿಕೆಯನ್ನು ನಡೆಸುತ್ತಿರುವ ಕಂಪೆನಿ ಯಾವುದೇ ಕಾನೂನಿಗೆ ಕಾಯದೇ, ಪರಿಸರ ಕಾಳಜಿ ದೋರಣೆಯನ್ನು ಅನುಸರಿಸಿಕೊಂಡುಬಂದಿದೆ ಎಂದು ಕಂಪೆನಿಯ ನಿರ್ವಹಣಾ ನಿರ್ದೇಶಕ ನರೇಂದ್ರಕುಮಾರ್ ಹೇಳುತ್ತಾರೆ. ಕೇಂದ್ರ ಗಣಿಗಾರಿಕಾ ಮಂತ್ರಿ ಸುಂದರಲಾಲ್ ಫಾತ್ವಾ ಅವರಿಂದ ನರೇಂದ್ರಕುಮಾರ್ ಶುಕ್ರವಾರ ಈ ಪ್ರಶಸ್ತಿ ಸ್ವೀಕರಿಸಿದರು. 1987ರಲ್ಲಿ ಕಂಪನಿಗೆ ರಾಷ್ಟ್ರೀಯ ಸುರಕ್ಷತಾ ಪ್ರಶಸ್ತಿಯೂ ದೊರೆತಿತ್ತು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications