ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಮತ್ತೆ ಬೌಲ್ ಮಾಡಿದರು ಕುಂಬ್ಳೆ
ಬೆಂಗಳೂರು : ಕಳೆದ ಜನವರಿಯಲ್ಲಿ ಬಲ ಭುಜದ ಶಸ್ತ್ರ ಚಿಕಿತ್ಸೆಗೊಳಗಾಗಿ ದೀರ್ಘ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವುಳಿದಿದ್ದ ಭಾರತದ ಪ್ರಮುಖ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಈಗ ತುರುಸು ಸ್ಪರ್ಧೆಗೆ ಸನ್ನದ್ಧ . ಬುಧವಾರವಷ್ಟೆ (ಜೂನ್ 11) ಯಂಗ್ ಕ್ರಿಕೆಟರ್ಸ್ ತಂಡದ ಪರವಾಗಿ ಬೌಲ್ ಮಾಡುವ ಮೂಲಕ ಕುಂಬ್ಳೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ತಮ್ಮ ವಾಪಸ್ಸಾತಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಹೇಳಿದ್ದು ‘ನನಗೆ ಸಂತೋಷವಾಗಿದೆ.’
ಆಟದಲ್ಲಿ ತೊಡಗಿಸಿಕೊಳ್ಳಲು ನನಗೆ ಸ್ವಲ್ಪವೂ ತೊಂದರೆಯಾಗಲಿಲ್ಲ . ಮತ್ತೆ ಬೌಲ್ ಮಾಡಿದ್ದು ಖುಷಿಯಾಗುತ್ತಿದೆ. ಎಲ್ಲವು ನನ್ನ ಎಣಿಕೆಯಂತೆಯೇ ನಡೆಯುತ್ತಿದೆ ಎಂದು 29 ವರ್ಷದ ಕುಂಬ್ಳೆ ಹೇಳುವಾಗ ಅವರ ಮೊಗದಲ್ಲಿ ಎದ್ದು ಕಾಣುವ ಆತ್ಮ ವಿಶ್ವಾಸ.
ತಮ್ಮ ವೈದ್ಯ ಮಾರ್ಕ್ ಫರ್ಗ್ಯುಸನ್ ಸಲಹೆಯಂತೆ ಕುಂಬ್ಳೆ ಮೊದಲಿಗೆ ಆಟವನ್ನು ಶುರು ಮಾಡಿದ್ದು ಮಧ್ಯಮ ವೇಗದ ಬೌಲಿಂಗ್ ಮೂಲಕ. ಎರಡು ಓವರ್‌ಗಳನ್ನು ಮಧ್ಯಮ ವೇಗದ ಗತಿಯಲ್ಲಿ ಪೂರೈಸಿದ ನಂತರ, ಸ್ಪಿನ್‌ಗೆ ಹೊರಳಿ 12 ಓವರ್ ಬೌಲ್ ಮಾಡಿದರು. ಫಲಿತಾಂಶ 3 ವಿಕೆಟ್ ಬಲಿ! ನಾನು ಮತ್ತೆ ಮಧ್ಯಮ ವೇಗದ ಬೌಲಿಂಗ್ ಮಾಡಿದ್ದು ರೋಮಾಂಚನವಾಗುತ್ತಿದೆ ಎಂದರು ಕುಂಬ್ಳೆ.
ಅಂದಹಾಗೆ, ಮೊದಲಿಗೆ ಹೆಚ್ಚು ಓವರ್‌ಗಳನ್ನು ಬೌಲ್ ಮಾಡುವ ಉದ್ದೇಶವೇನೂ ಕುಂಬ್ಳೆ ಅವರಿಗಿರಲಿಲ್ಲ . ಆದರೆ, ತಂಡ ಸೋಲುತ್ತಿದ್ದರೆ ನೋಡುತ್ತ ನಿಲ್ಲುವುದು ಹೇಗೆ? ಕುಂಬ್ಳೆ ಅವರಲ್ಲಿ ಹೋರಾಟದ ಕೆಚ್ಚು ಇನ್ನೂ ಆರಿಲ್ಲ . ಆ ಕಾರಣದಿಂದಲೇ ಅಂದುಕೊಂಡಿದ್ದಕ್ಕಿಂತ ಹೆಚ್ಚು ಚೆಂಡೆಸೆದರು. ತಮ್ಮ ತಂಡ ಎರಡು ರನ್ನುಗಳ ರೋಮಾಂಚಕ ಜಯ ಗಳಿಸಿದಾಗಲೇ ಅವರಿಗೆ ಸಮಾಧಾನ.
ಶ್ರೀಲಂಕಾ ಪ್ರವಾಸಕ್ಕೆ ಲಭ್ಯರಿಲ್ಲ ಎಂದು ಬಿಸಿಸಿಐಗೆ ಈಗಾಗಲೇ ಸಂದೇಶ ಕಳಿಸಿರುವ ಕುಂಬ್ಳೆ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾಗವಹಿಸುವ ಕುರಿತು ಅತುಳ ಆತ್ಮ ವಿಶ್ವಾಸ ಹೊಂದಿದ್ದಾರೆ. ತೋಳು ಸಹಕರಿಸುತ್ತಿರುವುದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಂಬ್ಳೆ ಮಿಂಚುವ ದಿನಗಳು ದೂರವಿಲ್ಲ .
(ಯುಎನ್‌ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications