ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀನುಗಾರಿಕಾ ದೋಣಿಗೆ ಬಳಸುವ ಡೀಸೆಲ್‌ಗೆ ಶೇ 35 ವಿನಾಯಿತಿ

By Staff
|
Google Oneindia Kannada News

ಮುಂಬಯಿ : ಮೀನುಗಾರರ ಯಾಂತ್ರೀಕೃತ ದೋಣಿಗಳಿಗೆ ಬಲಳಸುವ ಡೀಸೆಲ್‌ ಮೇಲಿನ ರಿಯಾಯಿತಿಯನ್ನು ಶೇ. 35ಕ್ಕೇರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಕೇಂದ್ರ ಕೃಷಿ ಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

ಮಂಗಳವಾರ ಮೀನುಗಾರರ ದಿನಾಚರಣೆ ಸಮಾರಂಭದಲ್ಲಿ ಮಾತನಾಡುತ್ತಾ ಅವರು ಡೀಸೆಲ್‌ ಬೆಲೆ ಏರಿದ್ದು, ಮೀನುಗಾರಿಕಾ ವಲಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ರಿಯಾಯಿತಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು. ಈ ವಿಷಯ ಕುರಿತಂತೆ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ ತಕ್ಷಣ ಪ್ರಧಾನಿಯವರಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗುವುದು.

ಸುಮಾರು 5 ಮಿಲಿಯನ್‌ ಜನರು ಮೀನುಗಾರಿಕಾ ಕಸುಬನ್ನು ಆಧರಿಸಿದ್ದು, ಒಟ್ಟಾರೆ ದೇಶೀಯ ಉತ್ಪಾದನೆಯಲ್ಲಿ ಶೇ 1.4 ರಷ್ಟು ಕೊಡುಗೆಯಿರುವ ಮೀನುಗಾರಿಕೆ ವಾರ್ಷಿಕ 6300 ಕೋಟಿ ರೂಪಾಯಿ ಆದಾಯ ತರುತ್ತಿದೆ. ಮೀನುಸಾಗಾಣಿಕೆಯಲ್ಲಿ ಭಾರತ ಪ್ರಪಂಚದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ನಿತೀಶ್‌ ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X