• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಗ್ರಾ ಶೃಂಗಸಭೆ: ನವದೆಹಲಿ- ಇಸ್ಲಮಾಬಾದ್‌ ಹಾಗೂ ವಾಷಿಂಗ್ಟನ್‌

By Staff
|

ವಾಷಿಂಗ್ಟನ್‌ : ಮುಂಬರುವ ಭಾರತದ ಪ್ರಧಾನಿ ವಾಜಪೇಯಿ ಹಾಗೂ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ ನಡುವಣ ಆಗ್ರಾ ಶೃಂಗಸಭೆಯ ಫಲಿತಾಂಶ, ನವದೆಹಲಿ- ಇಸ್ಲಮಾಬಾದ್‌ ಪಾಲಿಗೆ ಮಾತ್ರವಲ್ಲದೆ ಅಮೇರಿಕೆ ಪಾಲಿಗೂ ಬಹಳಷ್ಟು ಮುಖ್ಯವಾದುದಾಗಿದೆ ಎಂದು ಯುಎಸ್‌ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ವಕ್ತಾರ ರಿಚರ್ಡ್‌ ಬೌಚರ್‌ ಹೇಳಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವಣ ಪ್ರಶ್ನೆಗಳು ಚರ್ಚೆಗೊಳಪಡುವುದು ಅತ್ಯಂತ ಮುಖ್ಯ ಎಂದು ಪ್ರತಿಪಾದಿಸಿದ ಬೌಚರ್‌, ಈ ಚರ್ಚೆಯ ಫಲಶ್ರುತಿ ಉಭಯ ದೇಶಗಳಂತೆಯೇ ಅಮೇರಿಕಾ ಪಾಲಿಗೂ ಮುಖ್ಯವಾಗಿದೆ ಎಂದರು. ಉಭಯ ದೇಶಗಳ ನಡುವೆ ಸಹಕಾರ- ಹಾಗೂ ಶಾಂತಿಯುತ ಪರಿಸ್ಥಿತಿ ಸೃಷ್ಟಿಯಾಗುತ್ತದೆಂದು ನಾವು ಭಾವಿಸಿದ್ದೇವೆ ಎಂದು ಅವರು ಹೇಳಿದರು.

ಉಭಯ ದೇಶಗಳಿಗೆ ಅಮೇರಿಕಾ ಯಾವುದಾದರೂ ನಿರ್ದಿಷ್ಟ ಶಿಫಾರಸ್ಸನ್ನು ಮಾಡುವ ಸಾಧ್ಯತೆಯಿದೆಯಾ ಎನ್ನುವ ಪ್ರಶ್ನೆಗೆ ನುಣುಚಿಕೊಂಡ ಬೌಚರ್‌, ಈ ವಿಷಯ ಸಂಬಂಧಿಸಿದ ಕ್ಷೇತ್ರಕ್ಕೆ ಸಂಬಂಧಿಸಿದ ನಮ್ಮ ಪ್ರತಿನಿಧಿಗಳ ನಿರ್ಧಾರಕ್ಕೆ ಸಂಬಂಧಿಸಿದೆ ಎಂದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X