Get Updates
Get notified of breaking news, exclusive insights, and must-see stories!

ದೇಶದ ಪ್ರಪ್ರಥಮ ಖಾಸಗಿ ಎಫ್‌.ಎಂ. ರೇಡಿಯೋ ಸೇವೆ ಆರಂಭ

ಬೆಂಗಳೂರು : ಭಾರತದ ಪ್ರಪ್ರಥಮ ಖಾಸಗಿ ಎಫ್‌.ಎಂ. ರೇಡಿಯೋ ಕೇಂದ್ರ ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಬೆಂಗಳೂರಿನಿಂದ ಕಾರ್ಯಾರಂಭ ಮಾಡಿತು. ಬಾನುಲಿ ಕೇಂದ್ರವನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಇದು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ.

ಮ್ಯೂಸಿಕ್‌ ಬ್ರಾಡ್‌ಕ್ಯಾಸ್ಟ್‌ ಪ್ರೆೃವೇಟ್‌ ಲಿಮಿಟೆಡ್‌ (ಬಿ.ಎಂ.ಪಿ.ಎಲ್‌) ಆರಂಭಿಸಿರುವ ಈ ಎಫ್‌.ಎಂ. ಸ್ಟೇಷನ್‌ ಹೆಸರು ರೇಡಿಯೋ ಸಿಟಿ. ಇದಕ್ಕೆ ಪ್ರಸಾರ ಸಾಮಗ್ರಿ ಹಾಗೂ ಮಾರುಕಟ್ಟೆಯ ಬೆಂಬಲವನ್ನು ಸ್ಟಾರ್‌ ಟಿ.ವಿ. ಚಾನಲ್‌ ನೀಡಲಿದೆ. ಈ ವಿಷಯವನ್ನು ಎಂಬಿಪಿಎಲ್‌ನ ನಿರ್ದೇಶಕ ಅಶೋಖ್‌ ಕಿನ್‌ವಾಸರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಕೇಂದ್ರಕ್ಕೆ ಇಸ್‌ಪಾತ್‌ ಗ್ರೂಪ್‌ ಚಾಲನೆ ನೀಡಿದೆ.

ಸಮೀಕ್ಷೆಯ ರೀತ್ಯ ಪ್ರಸ್ತುತ ಶ್ರೋತೃಗಳು ದಿನದಲ್ಲಿ ಸರಾಸರಿ ಅರ್ಧಗಂಟೆಗಿಂತಲೂ ಹೆಚ್ಚು ಸಮಯ ರೇಡಿಯೋ ಕೇಳುವುದಿಲ್ಲ. ಇದನ್ನು ಸಂಪೂರ್ಣ ಬದಲಾಯಿಸುವುದು ತಮ್ಮ ಗುರಿಯಾಗಿದೆ ಎಂದು ಸ್ಟಾರ್‌ ಇಂಡಿಯಾ ರೇಡಿಯೋ ವಿಭಾಗದ ಸಿ.ಇ.ಓ. ಜಾನ್‌ ಕಾಟ್‌ಲೆಟ್‌ ತಿಳಿಸಿದ್ದಾರೆ.

ಇದು ಕೇವಲ ಆರಂಭ ಎಂದಿರುವ ಸ್ಟಾರ್‌ ಇಂಡಿಯಾದ ಸಿ.ಇ.ಓ. ಪೀಟರ್‌ ಮುಖರ್ಜಿಯಾ ಅವರು, ಈಗಷ್ಟೇ ಸ್ವರ್ಣಯುಗ ಆರಂಭವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ದಿನದ 24 ಗಂಟೆಗಳ ಕಾಲ ಕಾರ್ಯಕ್ರಮ ಬಿತ್ತರಿಸುವ ಈ ಕೇಂದ್ರ, ಕೇವಲ ಸಂಗೀತಕ್ಕಷ್ಟೇ ಸೀಮಿತವಾಗಿದೆ, ನಗರದ ಆಗುಹೋಗುಗಳ ಬಗ್ಗೆಯೂ ಬೆಳಕು ಚೆಲ್ಲಲಿದೆ. ಆರಂಭದಲ್ಲಿ ಕೇವಲ 40-60 ಕಿ.ಮೀಟರ್‌ ಪರಿಧಿಯಲ್ಲಿ ಮಾತ್ರ ಈ ಸೇವೆ ಲಭ್ಯ.

(ಐ.ಎ.ಎನ್‌.ಎಸ್‌/ ಯು.ಎನ್‌.ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+