Get Updates
Get notified of breaking news, exclusive insights, and must-see stories!

ಕಂಪ್ಯೂಟರ್‌ ಇಲ್ಲದೆ ಇ- ಮೇಲ್‌ : ‘ಐ ಸ್ಟೇಷನ್‌’ ಮಾರುಕಟ್ಟೆಗೆ

ಬೆಂಗಳೂರು : ಕಂಪ್ಯೂಟರ್‌ ಅವಶ್ಯಕತೆ ಇಲ್ಲದೆ ಇ- ಮೇಲ್‌ ಮಾಡಬಹುದಾದ ವಿನೂತನ ಸಾಧನ ‘ಐ ಸ್ಟೇಷನ್‌’ ಈಗ ರಾಜ್ಯದ ಮಾರುಕಟ್ಟೆಯಲ್ಲಿ ಲಭ್ಯ. ದೇಶದಲ್ಲೇ ವಿನೂತನವಾಗಿರುವ ಈ ಸಾಧನ ಮಾರುಕಟ್ಟೆಗೆ ಬರುವುದರೊಂದಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಮತ್ತೊಂದು ಮೈಲುಗಲ್ಲು ಸಾಧಿಸಿದಂತಾಗಿದೆ.

ಐ ಸ್ಟೇಷನ್‌ ಕುರಿತ ವಿವರಗಳನ್ನು ಇನೆಬಲರ್ಸ್‌ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜಾನ್‌ ಅರವಮುತ್ತನ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯದ ಹಳ್ಳಿಗಳಲ್ಲಿ ಐ ಸ್ಟೇಷನ್‌ ಸಾಧನ ಅಳವಡಿಸಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಮಂಡ್ಯ ಜಿಲ್ಲೆಯ 70 ಹಳ್ಳಿಗಳಲ್ಲಿ ಐ ಸ್ಟೇಷನ್‌ ಘಟಕಗಳನ್ನು ಸರ್ಕಾರ ಸ್ಥಾಪಿಸಲಿದೆ. ಶಿವಮೊಗ್ಗ ಹಾಗೂ ಮಂಗಳೂರಿನ ಜಿಲ್ಲಾಧಿಕಾರಿಗಳು ಕೂಡ ಐ ಸ್ಟೇಷನ್‌ ಬಗೆಗೆ ಆಸಕ್ತಿ ತೋರಿಸಿದ್ದಾರೆ ಎಂದು ಅವರು ಹೇಳಿದರು.

ವಿಶ್ವದ ಯಾವುದೇ ಮೂಲೆಗೆ ಕಂಪ್ಯೂಟರ್‌ ಅಗತ್ಯವಿಲ್ಲದೆ ಇ-ಮೇಲ್‌ ಮಾಡಬಹುದಾದ ಈ ಸಾಧನ ಪ್ರೀಮಿಯರ್‌ ಹಾಗೂ ಕ್ಲಾಸಿಕ್‌ ಎನ್ನುವ ಎರಡು ಮಾಡೆಲ್‌ಗಳಲ್ಲಿ ಲಭ್ಯ. ಪ್ರೀಮಿಯರ್‌ನ ಬೆಲೆ 7990 ರು.ಗಳಾದರೆ, ಕ್ಲಾಸಿಕ್‌ನ ಬೆಲೆ 6990 ರುಪಾಯಿ. ಮಾಸಿಕ 100 ರುಪಾಯಿ ಶುಲ್ಕ ಪಾವತಿಸುವ ಮೂಲಕ ಐ ಸ್ಟೇಷನ್‌ ಸಾಧನವನ್ನು ಬಳಸಬಹುದು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+