Get Updates
Get notified of breaking news, exclusive insights, and must-see stories!

ದಕ್ಷಿಣಕನ್ನಡ: ಮರೆಯಾದ ಮಳೆ,ಬೆಟ್ಟುಗದ್ದೆಯಲ್ಲಿ ಸಾಗದ ಉಳುಮೆ

ಮಂಗಳೂರು : ಮಳೆ ಮರೆಯಾಗಿದೆ! ಜಡಿಮಳೆ ಸುರಿಯಬೇಕಾದ ಸಂದರ್ಭದಲ್ಲಿ ಮಳೆ ಹಿಂದೆ ಹೋಗಿದೆ. ಪರಿಣಾಮವಾಗಿ ದಕ್ಷಿಣಕನ್ನಡದಲ್ಲೀಗ ರಣರಣ ಬಿಸಿಲು. ಮಳೆಯನ್ನೇ ನಂಬಿದ ರೈತನ ಮೊಗದಲ್ಲಿ ಚಿಂತೆಯ ಎಳೆ.

ಈ ಬಾರಿ ನಿಗದಿತ ವೇಳೆಗೇ ಮೊದಲೇ ಮಳೆ ಸುರಿಯಲಾರಂಭಿಸಿತ್ತು . ಇದರಿಂದಾಗಿ ಈ ವರ್ಷ ‘ವರುಣ ಫಲ’ ಚೆನ್ನಾಗಿರಬಹುದೆನ್ನುವ ಸಂತೋಷದಲ್ಲಿ ರೈತರು ಉತ್ಸಾಹದಿಂದ ಕೃಷಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದರು. ಆದರೆ, ಕಳೆದೊಂದು ವಾರದಿಂದ ಮಳೆ ಕೈ ಕೊಟ್ಟಿದ್ದು , ಬೆಟ್ಟು ಗದ್ದೆಗಳಲ್ಲಿ ಉಳುಮೆ ಕಷ್ಟಸಾಧ್ಯವಾಗಿದೆ. ಅಡಿಕೆ ಬೆಲೆ ಕೈ ಕೊಟ್ಟಿದ್ದರಿಂದ ಭತ್ತ ಲಾಭ ತರಬಹುದು ಎಂದು ದಕ್ಷಿಣಕನ್ನಡ ಜಿಲ್ಲೆಯ ರೈತ ಈ ಭಾರಿ ಭತ್ತದ ಕೃಷಿಗಿಳಿದಿದ್ದಾನೆ. ಆದರೆ, ವಾತಾವರಣ...

ಸದ್ಯಕ್ಕೆ ಕುಡಿಯುವ ನೀರಿಗೇನೂ ದಕ್ಷಿಣಕನ್ನಡದಲ್ಲಿ ತೊಂದರೆಯಿಲ್ಲ . ಕಾಲಕ್ಕೆ ಮುನ್ನ ಸುರಿದಿದ್ದ ಮಳೆಯಿಂದಾಗಿ ಕೆರೆ, ಬಾವಿಗಳಲ್ಲಿ ನೀರಿದೆ. ಪಂಪ್‌ ಹೊಂದಿರುವ ರೈತರು ಕೃಷಿ ಕಾರ್ಯಗಳಲ್ಲೂ ತೊಡಗಿದ್ದಾರೆ. ಆಕಾಶವನ್ನು ನೋಡುತ್ತಲೇ ವ್ಯವಸಾಯ ಮಾಡುವ ಕೃಷಿಕನ ನೆಮ್ಮದಿಗೆ ಮಾತ್ರ ಸಂಚಕಾರ ಬಂದಿದೆ.

(ಮಂಗಳೂರು ಪ್ರತಿನಿಧಿಯಿಂದ)

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+