Get Updates
Get notified of breaking news, exclusive insights, and must-see stories!

ವಿಶ್ವ ನೊಬೆಲ್‌ಪುರಸ್ಕೃತರ ಸಭೆಗೆ ಭಾರತದ ಯುವ ವಿಜ್ಞಾನಿಗಳು

ನವದೆಹಲಿ : ಪ್ರಥಮ ಬಾರಿಗೆ ಭಾರತವು 17 ಮಂದಿ ಯುವ ವಿಜ್ಞಾನಿಗಳ ತಂಡವೊಂದನ್ನು ವಿಶ್ವ ನೊಬೆಲ್‌ ಪ್ರಶಸ್ತಿ ವಿಜೇತರ ಸಭೆಗೆ ಕಳುಹಿಸಿಕೊಟ್ಟಿದೆ.

ಈ ವಿಷಯವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಮುರಳಿ ಮನೋಹರ ಜೋಶಿ ಶನಿವಾರ ಸುದ್ದಿಗಾರರಿಗೆ ತಿಳಿಸಿದರು. ಜೂನ್‌ 25 ರಿಂದ ಐದು ದಿನಗಳ ಕಾಲ ಜರ್ಮನಿಯ ಲಿಂಡೋದಲ್ಲಿ ನಡೆಯುವ ಈ ಸಭೆಯಲ್ಲಿ ಮುಖ್ಯವಾಗಿ ಭೌತ ಶಾಸ್ತ್ರದ ಬಗ್ಗೆ ಚರ್ಚಿಸಲಾಗುವುದು. ಭಾರತೀಯ ಯುವ ವಿಜ್ಞಾನಿಗಳಿಗೆ ಜಗತ್ತಿನ ಹಿರಿಯ ಬುದ್ಧಿಜೀವಿಗಳನ್ನು ಹಾಗೂ ವಿಜ್ಞಾನಿಗಳನ್ನು ಭೇಟಿಯಾಗುವ ಅವಕಾಶ ಒದಗಲಿದೆ.

ವೈಜ್ಞಾನಿಕ ಕ್ಷೇತ್ರದಲ್ಲಿ ವಿವಿಧ ವಲಯಗಳ ನಡುವಿನ ಅಂತರ ತುಂಬಾ ಸಣ್ಣದಾಗಿದ್ದು, ಅಧ್ಯಯನದ ಮತ್ತು ಪರಸ್ಪರ ಹಂಚಿಕೊಳ್ಳುವಿಕೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುವವಿಜ್ಞಾನಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ತಂಡವನ್ನು ಜರ್ಮನಿಗೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಮುರಳಿ ಮನೋಹರ್‌ ಜೋಶಿ ಹೇಳಿದರು.

ಈಗಿರುವ ಸಿದ್ಧಾಂತಗಳನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳುವ ಬದಲು ವಿದ್ಯಾರ್ಥಿಗಳು ಅವುಗಳಿಗೆ ಸವಾಲೆಸೆಯಬೇಕು. ಕುತೂಹಲ ಆಸಕ್ತಿ ಮತ್ತು ಅನುಮಾನ ದೃಷ್ಟಿಯಿಂದ ಅವಲೋಕಿಸಿದಾಗ ಹೊಸ ಥಿಯರಿಗಳನ್ನು ಅನ್ವೇಷಿಸುವುದು ಸುಲಭವಾಗುತ್ತದೆ ಎಂದು ಜೋಶಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಜರ್ಮನಿಯ ರಾಯಭಾರಿ ಹೈಮೋ ರಿಕ್ಟರ್‌ ಮಾತನಾಡುತ್ತಾ, ನೋಬೆಲ್‌ ಪ್ರಶಸ್ತಿ ವಿಜೇತರ ಸಭೆಯಲ್ಲಿ ಯುರೋಪ್‌ ಮತ್ತು ಅಮೆರಿಕಾದ ಯುವ ವಿಜ್ಞಾನಿಗಳು ಮಾತ್ರ ಭಾಗವಹಿಸುತ್ತಿದ್ದರು. ಆದರೆ ಈ ಬಾರಿ ಭಾರತದ ತಂಡವೂ ಈ ಸಭೆಯಲ್ಲಿ ಭಾಗವಹಿಸುತ್ತಿದೆ. ಇದು ಭಾರತ ವೈಜ್ಞಾನಿಕವಾಗಿ ಮುಂದುವರೆಯುತ್ತಿರುವ ಸಂಕೇತವೂ ಹೌದು ಎಂದು ತಮ್ಮ ಹರ್ಷ ವ್ಯಕ್ತ ಪಡಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+