ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಂಎಫ್‌ನಿಂದ ನೇಪಾಳಕ್ಕೆ 2.4 ಕೋಟಿ ರು.ಮೌಲ್ಯದ ಹಾಲಿನಪುಡಿ

By Staff
|
Google Oneindia Kannada News

ಬೆಂಗಳೂರು : ಕೆಎಂಎಫ್‌ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಈ ಬಾರಿ ಅದು ಯಾವುದೋ ಹೊಸ ಹಾಲಿನ ಉತ್ಪನ್ನವನ್ನು ಬಿಡುಗಡೆ ಮಾಡಿಲ್ಲ . ಬದಲಿಗೆ ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ನೆರೆಯ ನೇಪಾಳಕ್ಕೆ 2.40 ಕೋಟಿ ರೂಪಾಯಿ ಮೌಲ್ಯದ ಹಾಲಿನ ಪುಡಿ ರಫ್ತು ಮಾಡಿದೆ.

ಮೊದಲ ಹಂತದಲ್ಲಿ 150 ಮೆಟ್ರಿಕ್‌ ಟನ್‌ ಹಾಲಿನ ಪುಡಿ ಮತ್ತು ಹಾಲಿನ ಉತ್ಪನ್ನಗಳನ್ನು ಹೊತ್ತ ಟ್ರಕ್‌ಗೆ ಪಶುಸಂಗೋಪನೆ ಮತ್ತು ಸಕ್ಕರೆ ಸಚಿವ ಎ. ಕೃಷ್ಣಪ್ಪ ಶನಿವಾರ ಹಸಿರು ನಿಶಾನೆ ತೋರಿದರು. ದೇಶದ ಮೂರನೇ ಅತಿ ದೊಡ್ಡ ಡೈರಿ ಸಹಕಾರ ಸಂಘವಾದ ಕರ್ನಾಟಕ ಹಾಲು ಒಕ್ಕೂಟದ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಿದ್ದು, ಪ್ರಥಮ ಬಾರಿಗೆ ವಿದೇಶವೊಂದಕ್ಕೆ ಹಾಲಿನ ಪುಡಿ ರಫ್ತು ಮಾಡಿದ ಕೀರ್ತಿ ಕೆಎಂ.ಎಫ್‌ನದು.

ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಶ್ರೀಲಂಕಾ ಸಹಾ ಆಸಕ್ತಿ ತೋರಿಸಿದ್ದು, ಉಭಯ ರಾಷ್ಟ್ರಗಳ ಅಧಿಕಾರಿಗಳ ನಡುವೆ ಮಾತುಕತೆ ಪ್ರಗತಿಯಲ್ಲಿದೆ ಎಂದು ಸಚಿವರು ಹೇಳಿದರು. ಇದೇ ಸಂದರ್ಭದಲ್ಲಿ ಹಾಜರಿದ್ದ ನೇಪಾಳ ಡೈರಿ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ನ ಮುಖ್ಯ ತಾಂತ್ರಿಕ ವ್ಯವಸ್ಥಾಪಕ ಅರುಣ್‌ ಶ್ರೇಷ್ಠಿ ಮಾತನಾಡಿ ಕೆಎಂಎಫ್‌ನ ಹೊಸ ಹೆಜ್ಜೆಯಿಂದ ಉಭಯ ದೇಶಗಳ ನಡುವಿನ ಬಾಂಧವ್ಯ ವಿಸ್ತರಣೆಗೆ ಸಹಾಯವಾಗುತ್ತದೆ ಎಂದರು

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X