ಸೋಮವಾರದಿಂದ ಸಿ.ಇ.ಟಿ.ಕೌನ್ಸೆಲಿಂಗ್ ಪ್ರಾರಂಭ
ಬೆಂಗಳೂರು : ವೃತ್ತಿಪರ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಕಲ್ಪಿಸುವ 2001-02 ನೇ ಸಾಲಿನ ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ಸೋಮವಾರ(ಜೂನ್ 25) ದಿಂದ ಪ್ರಾರಂಭವಾಗಲಿದೆ.
ಜೂನ್ 25 ರಂದು ದೈಹಿಕ ಅಂಗವಿಕಲ ಕೋಟಾದ ಅಭ್ಯರ್ಥಿಗಳ ಸೀಟು ಹಂಚಿಕೆ, 26 ರಂದು ಕ್ರೀಡಾಕೂಟದ ಅಭ್ಯರ್ಥಿಗಳಿಗೆ ಹಾಗೂ ಜೂನ್ 27 ರಂದು ಎನ್.ಸಿ.ಸಿ. ಕೋಟಾದ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಪ್ರಕ್ರಿಯೆ ನಡೆಯಲಿದೆ.
ಕರ್ನಾಟಕ ಕೋಟಾದ ವೈದ್ಯ, ದಂತವೈದ್ಯ ಸೀಟುಗಳ ಹಂಚಿಕೆ ಪ್ರಕ್ರಿಯೆ ಜೂನ್ 29 ರಂದು ನಡೆದರೆ, ಕರ್ನಾಟಕೇತರ ಸೀಟುಗಳ ಹಂಚಿಕೆ ಜುಲೈ 7 ರಂದು ನಡೆಯಲಿದೆ. ಅದೇ ರೀತಿ ಕರ್ನಾಟಕ ಕೋಟಾದ ಎಂಜಿನಿಯರಿಂಗ್ ಸೀಟುಗಳ ಹಂಚಿಕೆ ಜುಲೈ 9 ರಂದು ನಡೆಯಲಿದೆ.
ಈಗಾಗಲೇ ಪ್ರಕಟವಾಗಿರುವ ಸೀಟು ಹಂಚಿಕೆ ಪಟ್ಟಿ ಪ್ರಕಾರ, ಈ ವರ್ಷ ವೈದ್ಯ ಶಿಕ್ಷಣದಲ್ಲಿ 70 ಸೀಟುಗಳು ಹೆಚ್ಚಳವಾದರೆ, ದಂತ ವೈದ್ಯ ಶಿಕ್ಷಣದಲ್ಲಿ 122 ಸೀಟುಗಳು ಕಡಿಮೆಯಾಗಲಿವೆ. ಸೀಟುಗಳ ಸಂಖ್ಯೆ ಇಂತಿದೆ-
ವೈದ್ಯ
ವಿಭಾಗ
:
ಉಚಿತ-
1354,
ಪೇಮೆಂಟ್-
678
ದಂತವೈದ್ಯ
:
ಉಚಿತ-
938,
ಪೇಮೆಂಟ್-
571.
(ಇನ್ಫೋ ವಾರ್ತೆ)