ದೀಪೇಂದ್ರನ ಮದುವೆಗೆ ಅಡ್ಡಗಾಲಿಕ್ಕಿದ ಜ್ಯೋತಿಷಿ ಯಾರು?
ಕಠ್ಮಂಡು : ಇಲ್ಲಿನ ಜನರಿಗೆ ಇನ್ನೂ ಸಮಾಧಾನವಾಗಿಲ್ಲ. ರಾಜಕುವರ ದೀಪೇಂದ್ರ ಇಷ್ಟೊಂದು ಜನರ ಕೊಂದು, ತಾನೂ ಗುಂಡಿಕ್ಕಿ ಕೊಂದುಕೊಂಡ ಎಂಬುದನ್ನು ಈಗಲೂ ಜನ ಮನಃಪೂರ್ವಕವಾಗಿ ಒಪ್ಪುತ್ತಿಲ್ಲ. ಗುರುವಾರ ಹೊರಬಿದ್ದ ಅಧಿಕೃತ ವರದಿ ಕೂಡ ದೀಪೇಂದ್ರನೇ ಇಷ್ಟಕ್ಕೆಲ್ಲ ಕಾರಣ ಎಂದು ಹೇಳಿದೆ. ಎಲ್ಲಿ ನೋಡಿದರಲ್ಲಿ ನ್ಯೂಸ್‌ಪೇಪರ್ ಕೈಲಿ ಹಿಡಿದ ಜನರ ಹಿಂಡಿನ ಗುಸುಗುಸು. ಇನ್ನು ಕೆಲವರೋ ರಾಯಲ್ ಜ್ಯೋತಿಷಿ ಮಂಗಲ್ ರಾಜ್ ಜೋಷಿ ಮನೆಗೆ ಎಡತಾಕುತ್ತಿದ್ದಾರೆ !
ಒಂದು ವಿಧದಲ್ಲಿ ಎಂಬತ್ತೆರಡರ ಇಳಿ ವಯಸ್ಸಿನ ಜೋಷಿಯೇ ರಾಜವಂಶದ ರಕ್ತಪಾತಕ್ಕೆ ಕಾರಣ ಎಂದೂ ಜನ ನಂಬಿದ್ದಾರೆ. ಈ ಭವಿಷ್ಯಕಾರ ರಾಜಕುವರನಿಗೆ 35 ವಯಸ್ಸಾಗುವವರೆಗೆ ಮದುವೆ ಮಾಡಿದಿರೋ ಕೆಟ್ಟಿರಿ ಎಂದು ಹೇಳಿದ್ದರಂತೆ. ಆದರೆ ಆತನ ತಾಕೀತೇ ಇಂಥಾ ಅವಘಡಕ್ಕೆ ಎಡೆಮಾಡಿಕೊಡುತ್ತದೆಂಬುದನ್ನು ಜೋಷಿ ಭವಿಷ್ಯವಾಣಿ ಅಳೆಯಲಿಲ್ಲ !
ಯಾರೀ ಜೋಷಿ ?
ಕರ್ನಾಟಕದ ಎಸ್.ಕೆ.ಜೈನ್‌ಗಿಂತ ಫೇಮಸ್ಸು ಈ ಜೋಷಿ. ಮೂವತ್ತೆರಡು ತಲೆ ಮಾರಿನ ಜ್ಯೋತಿಷಿಗಳ ವಂಶ ಈತನದು. ಭವಿಷ್ಯ ಹೇಳುವ ವಿದ್ಯೆ ಜೊತೆಗೆ ಟೌನ್ ಪ್ಲಾನಿಂಗೂ ಜೋಷಿ ಅವರಿಗೆ ಕರಗತ. ಇಂಥಾ ದಿನ ಇಂಥಾ ಕಡೆ ಭೂಕಂಪ ಆಗುತ್ತದೆ, ಗಲ್ಫ್ ವಾರ್ ನಡೆಯೋದು ಇಂಥಾ ದಿನವೇ, ನೇಪಾಳಿ ಪ್ರಧಾನಿ ಸಾಯುವ ದಿನಾಂಕ ತನಗೆ ಮೊದಲೇ ಗೊತ್ತಿತ್ತು... ಹೀಗೆ ಭವಿಷ್ಯಗಳ ಪರಾಕ್ರಮ ತೋಡಿಕೊಳ್ಳುವ ಜೋಷಿ ಮೋಡಿಗೆ ಶ್ರೀಮಂತರ ಹಿಂಡು ಮುಗಿಬಿದ್ದಿತು.
ಫೀಸು ಮುನ್ನೂರೇ ರುಪಾಯಿ : ಇವತ್ತಿಗೂ ಕಿರಿದಾದ ಮಹಡಿ ಹತ್ತಿ ಹೋದರೆ ಸಣ್ಣಗೆ ಬೆಳಕು ಕಾಣುವ ಪುಟ್ಟ ಕೋಣೆ ಖಚಾಖಚಿ ತುಂಬಿರುತ್ತದೆ. ಇದೇ ಜೋಷಿ ಭವಿಷ್ಯ ಹೇಳುವ ಮನೆ. ಚಕ್ಕಳ ಮಕ್ಕಳ ಹಾಕಿ, ಪುಸ್ತಕಗಳ ರಾಶಿಯಿಂದ ಯಾವುದೋ ಒಂದನ್ನು ಹೆಕ್ಕಿ ಅದೇನೋ ಪತ್ತೆ ಮಾಡಿದವರಂತೆ ಮುಖಭಾವ ತೋರುವ ಜೋಷಿ ಎಲ್ಲಾ ಸಮಸ್ಯೆಗೂ ಏನಾದರೊಂದು ರೆಮಿಡಿ ಹೇಳುತ್ತಾರೆ. ಕುಲದೇವತೆ ಮೆಚ್ಚಿಸಲು ಅದು ಮಾಡಿ ಇದು ಮಾಡಿ ಅನ್ನುವುದರಿಂದ ಹಿಡಿದು ಗುಲಾಬಿ ಬಣ್ಣದ ಹರಳಿನ ಉಂಗುರ ಹಾಕಿದರೆ ಎಲ್ಲಾ ಸರಿ ಹೋಗುತ್ತೆ ಎಂಬಂತಹ ಸಲಹೆಗಳನ್ನು ಗಂಭೀರವಾಗಿ ಹೇಳುವ ಜೋಷಿ ಫೀಸು ಕೇವಲ 300 ರುಪಾಯಿ !
ಈಗ ಜನ ಈತನನ್ನು ಕೇಳುತ್ತಿರುವ ಪ್ರಶ್ನೆ - ದೀಪೇಂದ್ರನೇ ರಾಜಕುಟುಂಬದ ರಕ್ತಪಾತಕ್ಕೆ ಕಾರಣನೇ ? ಹೇಗೆ ? ಏಕೆ ? ಅವನಲ್ಲಿ ಯಾವ ದೆವ್ವ ಹೊಕ್ಕಿತ್ತು ? ನೀವು ಈ ಅವಘಡವನ್ನು ಮೊದಲೇ ಯಾಕೆ ಹೇಳಿರಲಿಲ್ಲ ? ಖರೆ ಉತ್ತರ ಹೇಳಲಾಗದ ಜೋಷಿ ಚಕ್ಕಳ ಮಕ್ಕಳ ಮತ್ತಷ್ಟು ಬಿಗಿಯಾಗುತ್ತದೆ; ಪುಸ್ತಕ ತಿರುವು ಹಾಕುವಿಕೆ ಜೋರಾಗುತ್ತದೆ !
ಗುರುವಾರ ಹೊರಬಿದ್ದ ಅಧಿಕೃತ ವರದಿಯ ಆಯ್ದ ಅಂಶಗಳು....
ವರದಿ ಸಿದ್ಧಪಡಿಸಿದ ತಾರಾನಾಥ್ ರಾಣಾಭಟ್ ಹೀಗಂತಾರೆ- ಜೂನ್ 1ರಂದು 20 ಜನರೊಟ್ಟಿಗೆ ದೀಪೇಂದ್ರ ಡಿನ್ನರ್ ಮಾಡಿದ. ನಂತರ ಪ್ರಸಿದ್ಧ ಗ್ರೌಸ್ ವಿಸ್ಕಿಯನ್ನು ಮಿತಿಮೀರಿ ಕುಡಿದ. ಹಶೀಶ್ ತುಂಬಿದ ಸಿಗರೇಟನ್ನು ತರಿಸಿಕೊಂಡ. ವಿಸ್ಕಿ- ಹಶೀಶ್ ಸಂಗಮ ದೀಪೇಂದ್ರನ ಮಹಾಮಸ್ತಿಷ್ಕ ನಿಂತಲ್ಲಿ ನಿಲದಂತೆ ಮಾಡಿತು. ಆಕಾಶ ಕೆಳಗೆ ಬಂತು. ಭೂಮಿ ಮೇಲೆ ಹೋಯ್ತು. ತೂರಾಡುತ್ತಿದ್ದ ಅವನನ್ನು ಬಾಡಿಗಾರ್ಡ್‌ಗಳು ಹಿಡಿದರು. ಸಹೋದರ ನಿರಂಜನ್, ಪ್ರಿನ್ಸ್ ಪಾರಸ್ ಅವನ ಭುಜ ಹಿಡಿದು ಅಲುಗಾಟ ನಿಲ್ಲಿಸಲು ಯತ್ನಿಸಿದರು. ಆತನ ಕೊಠಡಿಗೂ ತಲುಪಿಸಿದರು.
ತನ್ನ ಪ್ರೇಯಸಿ ದೇವಯಾನಿ ರಾಣಾ ಮೊಬೈಲ್‌ಗೆ ಎರಡು ಬಾರಿ ಫೋನಾಯಿಸಿದ. ಮಲಗುತ್ತಿದ್ದೇನೆ. ಗುಡ್ ನೈಟ್. ನಾಳೆ ಮಾತಾಡ್ತೀನಿ ಅಂತ ಹೇಳಿದ. ಮಿಲಿಟರಿ ದಿರಿಸು ಧರಿಸಿ, ಹುಚ್ಚು ಆವೇಶ ಹೊತ್ತು ಹೊರ ಬಂದವನೇ ಗುಂಡಿನ ಮಳೆಗರೆದ. ಕೊಂದ, ಕೊಂದುಕೊಂಡ. 8 ಹೆಣಗಳು ಬಿದ್ದವು.
ಜನರ ಗೊಂದಲ ಇನ್ನೂ ನಿವಾರಣೆಯಾಗಿಲ್ಲ. ದೀಪೇಂದ್ರನ ಉನ್ಮಾದಕ್ಕೆ ಏನು ಕಾರಣ ಎಂಬಂಥಾ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅನುಮಾನ ಈ ಹೊತ್ತೂ ಮುಂದುವರೆದೇ ಇದೆ.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications