Get Updates
Get notified of breaking news, exclusive insights, and must-see stories!

ಐಟಿ ಹಿನ್ನಡೆಯ ಮೆಟ್ಟಿ ನಿಲಬಲ್ಲ ಛಾತಿ ಬೆಂಗಳೂರಿಗಿದೆಯಾ ?

ಬೆಂಗಳೂರು : ಸರ್ಕಾರದ ಹಂಗಿಲ್ಲದೆಯೂ ಮಾಹಿತಿ ತಂತ್ರಜ್ಞಾನ ಸಾಕಷ್ಟು ಬೆಳೆಯಲಿದೆ. ಬಹುತೇಕ ರಾಜಕಾರಣಿಗಳು ಆಡದ ಈ ಮಾತನ್ನು ಪದೇಪದೇ ಆಡಲು ನಮ್ಮ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮಾತ್ರ ಸಾಧ್ಯ !

ಅಮೆರಿಕೆಯಲ್ಲಿ ಕಲಿತು ಬಂದ ಕೃಷ್ಣ ತಮ್ಮ ಆಡಳಿತ ಯಂತ್ರಕ್ಕೆ ಅಳವಡಿಸಿರುವುದು ಐಟಿ ಎಂಬ ಎಂಜಿನ್‌. ಅದರ ನಾಗಾಲೋಟ ಅರ್ಥಾತ್‌ ಆರ್ಥಿಕ ಪ್ರಗತಿ ಎಂಬುದು ಕೃಷ್ಣ ಮಂತ್ರ. ಮಂತ್ರೋಚ್ಚಾರಣೆ ಯಥಾ ಮುಂದುವರೆದಿದೆ, ಆದರೆ ಈ ಬಾರಿ ಕೃಷ್ಣ ಅವರಿಂದಲ್ಲ ....

ಕುಲಕರ್ಣಿ ಮಾತು ಅಕ್ಷರಶಃ ಸುಳ್ಳೇನೂ ಅಲ್ಲ : ಮಾಹಿತಿ ತಂತ್ರಜ್ಞಾನದಲ್ಲಿ ನ ಒಂದು ಉದ್ಯೋಗ ಅದರ ಹೊರಗಿನ ಕ್ಷೇತ್ರಗಳಲ್ಲಿ 6 ಉದ್ಯೋಗಾವಕಾಶ ಹುಟ್ಟುಹಾಕಲಿದೆ ಅನ್ನೋದು ನಮ್ಮ ಬಲವಾದ ನಂಬುಗೆ- ಹೇಳುತ್ತಾರೆ ಕರ್ನಾಟಕ ಐಟಿ ಮತ್ತು ಬೀಟಿ ಕಾರ್ಯದರ್ಶಿ ವಿವೇಕ್‌ ಕುಲಕರ್ಣಿ. ಕುಲಕರ್ಣಿ ಅವರ ಮಾತು ಅಕ್ಷರಶಃ ಸುಳ್ಳೇನೂ ಅಲ್ಲ. ಜಗತ್ತಿನ 8 ನಗರಗಳ ಕಾರ್ಪೊರೇಟ್‌ ಸಂಸ್ಥೆಗಳಿಗೆ ಸೇವೆ ಒದಗಿಸುತ್ತಿರುವ ಲೆಸ್‌ ಕಾನ್‌ಸೀರ್ಜಸ್‌ ಎಂಬ ಕಂಪನಿಯ ದೀಪಾಲಿ ಸಿಕಂದ್‌ ಕುಲಕರ್ಣಿ ಮಾತಿಗೆ ಪುಷ್ಟಿ ಕೊಡುತ್ತಾರೆ. ಒಂದು ಕಡೆ ಕುಲಕರ್ಣಿ ಅವರ ಮಾತಿಗೆ ವಿರುದ್ಧದ ದನಿಯೇ ಹೆಚ್ಚಾಗಿ ಕೇಳಿಸುತ್ತಿರುವುದು ನಿಜವೇ ಆದರೂ ದೀಪಾಲಿ ಮಾತು ಬಿಸಿಲಲ್ಲಿ ಸುಳಿವ ತಂಬೆಲರು.

ಕಾನ್‌ಸೀರ್ಜಸ್‌ ಎಂಬ ಎವರ್‌ ಗ್ರೀನ್‌ ಕಂಪನಿ : ಅಮೆರಿಕೆಯ ಆರ್ಥಿಕ ಕುಂಠಿತ ಲೆಸ್‌ ಕಾನ್‌ಸೀರ್ಜಸ್‌ ಕಂಪನಿಯ ಮೇಲೆ ಅಷ್ಟೇನೂ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಅಂತ ತೋರುತ್ತದೆ. ತನ್ನ ಎಲ್ಲಾ ಶಾಖೆಗಳಲ್ಲಿ ಅದು ಐಟಿ ಸೇವೆ ಮುಂದುವರೆಸುತ್ತಿರುವುದೇ ಇದಕ್ಕೆ ಸಾಕ್ಷಿ. ಹಣಕಾಸಿನ ಕೊರತೆ ಅಂದ ಮಾತ್ರಕ್ಕೆ ಸ್ಕೂಲ್‌ ಫೀಸು ಕಟ್ಟದೆ ಇರಲಾಗುತ್ತದೆಯೇ ? ಲೈಟ್‌ ಬಿಲ್ಲು ಬಾರದಿರುವುದೆ ? ಕಟ್ಟಲೇಬೇಕು. ನಮಗೂ ಸದಾ ಯುವಕರು ಬೇಕು ಅನ್ನುತ್ತಾ ನಗುತ್ತಿದೆ ಲೆಸ್‌ ಕಾನ್‌ಸೀರ್ಜಸ್‌.

ಆಕಾಶವೇ ಬೀಳಲಿ ಮೇಲೆ ಐಟಿ ಎಂದೂ ನಮ್ಮದೆ : ಕುಲಕರ್ಣಿ ಮಾತಿಗೆ ಸಮರ್ಥನೆ ಬೆಂಗಳೂರಲ್ಲಿ ತಂತಾನೇ ದೊರೆಯುತ್ತಿದೆ. 928 ಐಟಿ ಕಂಪನಿಗಳು ಇಲ್ಲಿವೆ. ಅದಕ್ಕೇ ಇದು ಸಿಲಿಕಾನ್‌ ನಗರಿ. ರಾಜ್ಯ ಸರ್ಕಾರಿ ಸ್ವಾಮ್ಯದ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ಸ್‌ ಆಫ್‌ ಇಂಡಿಯಾ (ಎಸ್‌ಟಿಪಿಐ) ಸೇವೆಯಂತೂ ಕಂಪನಿಗಳಿಗೆ ಸದಾ ಇದ್ದೇ ಇದೆ. ಸಾಫ್ಟ್‌ವೇರ್‌ ಪೈರೆಸಿ ಶೂನ್ಯ ರಾಜ್ಯವನ್ನಾಗಿಸಲು ಕಾರ್ಯಪಡೆಯಾಂದು ಮೊನ್ನೆ ತಾನೆ ಸಿದ್ಧವಾಗಿದೆ. ಇದಕ್ಕಾಗಿ ಸರ್ಕಾರ ಯೋಜನಾಬದ್ಧ ಹೆಜ್ಜೆ ಇಟ್ಟಿದೆ. ಕಾರ್ಯಪಡೆಯನ್ನು ತನ್ನ ಎಂದಿನ ಶೈಲಿಯಲ್ಲಿ ಹಠಾತ್ತನೆ ಗೊತ್ತುಪಡಿಸದೆ, ಅಧಿಕಾರಿಗಳಿಗೆ ತರಪೇತಿ ಕೊಟ್ಟಿದೆ.

ಜಗತ್ತಿನ ಯಾವ ರಾಷ್ಟ್ರವೂ ಪರಿಪೂರ್ಣ ಸಾಫ್ಟ್‌ವೇರ್‌ ಪೈರೆಸಿ ರಹಿತವಲ್ಲ

ತಾಂತ್ರಿಕವಾಗಿ ಐಟಿ ಪೈರೆಸಿಯನ್ನು ಬುಡ ಸಮೇತ ಕಿತ್ತೆಸೆಯುವುದು ಕಷ್ಟಸಾಧ್ಯ. ಆದರೆ ಹಂತ ಹಂತವಾಗಿ ಅದಕ್ಕೆ ಕಡಿವಾಣ ಅಂತೂ ಖಂಡಿತ ಹಾಕಬಹುದು. ನಮ್ಮ ಉದ್ದೇಶವೂ ಇದೇ ಎನ್ನುತ್ತಾರೆ ಕುಲಕರ್ಣಿ. ಹಾಗಾದರೆ ಇವತ್ತು ಜಗತ್ತಿನ ಯಾವ ದೇಶ ಪರಿಪೂರ್ಣವಾಗಿ ಸಾಫ್ಟ್‌ವೇರ್‌ ಪೈರೆಸಿ ರಹಿತವಾಗಿದೆ ? ಯಾವುದೂ ಇಲ್ಲ ! ಅಮೆರಿಕದಲ್ಲಿ ಅತಿ ಕಡಿಮೆ, 25 ಪ್ರತಿಶತ ಪೈರೆಸಿ ಇದ್ದರೆ, ಚೀನಾದಲ್ಲಿ ಈ ಪ್ರಮಾಣ 90 ಪ್ರತಿಶತ ಇದೆ. ಜಪಾನಿನಲ್ಲಿ ಶೇ.45. ಹಾಂಗ್‌ಕಾಂಗ್‌ನಲ್ಲಿ 65 ಪ್ರತಿಶತ.

ಬೆಂಗಳೂರಲ್ಲಿ ಪೈರೆಸಿ ಪ್ರಮಾಣ ಪ್ರಸ್ತುತ 63 ಪ್ರತಿಶತ ಇದೆ. ಇದನ್ನು ನಿರ್ಮೂಲನೆ ಮಾಡುವುದೆಂತು? ಜನಜಾಗೃತಿ ಎಂಬ ಹಳೇ ಮಂತ್ರ. ಹೆಂಡದಂಗಡಿಗಳಿಗೆ ಪೋಟಿ ಎಂಬಂತೆ ತಲೆಎತ್ತುತ್ತಿರುವ ಐಟಿ ತರಪೇತಿ ಸಂಸ್ಥೆಗಳಿಗೆ ಕಡಿವಾಣ ಎಂಬ ಹೊಸ ತಂತ್ರ. ಇದಕ್ಕೆ ಪೊಲೀಸ್‌ ಕಮಿಷನರ್‌ ಕಟ್ಟಿದ್ದಾರೆ ಟೊಂಕ.

ಇದು ಪ್ರಾರಂಭ. ಈಗಲೇ ಪೈರೆಸಿಗೆ ಫುಲ್‌ಸ್ಟಾಪ್‌ ಹಾಕುವ ನಿಟ್ಟಿನಲ್ಲಿ ಹೆಜ್ಜೆ ಇಡದಿದ್ದರೆ ಮುಂದೆ ಪರಿಸ್ಥಿತಿ ಕೈಮೀರಿ ಹೋಗುತ್ತದೆ. ಸರ್ಕಾರದ ನಿರ್ಣಯ ಸ್ವಾಗತಾರ್ಹ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ, ಪಡೆ ಹೇಗೆ ಕೆಲಸ ಮಾಡುತ್ತದೆ ಅನ್ನುವುದೇ ಮುಖ್ಯವಾಗುತ್ತದೆ ಎನ್ನುತ್ತಾರೆ ಒಬ್ಬ ಐಟಿ ಅಧಿಕಾರಿ.

ನಮ್ಮ ರಾಜ್ಯದಲ್ಲಿ ಐಟಿ ಬೆಳೆದಿರುವ ವೇಗದಲ್ಲೇ ಪೈರೆಸಿಯೂ ಬೆಳೆಯಕೂಡದು. ಈ ಉಮೇದಿನಿಂದ ಸರ್ಕಾರ ಹೆಜ್ಜೆ ಇಟ್ಟಿದೆ. ನಾವು ಗೆದ್ದೇ ಗೆಲ್ತೀವಿ ಎನ್ನುತ್ತಾರೆ ಕುಲಕರ್ಣಿ.

(ಐಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+