Get Updates
Get notified of breaking news, exclusive insights, and must-see stories!

ಕಬ್ಬಿಣದಂತೆ ದೃಢವಾಗುತ್ತಿರುವ ಭಾರತ ಕ್ರಿಕೆಟ್‌ ತಂಡ- ಸ್ಟೀವ್‌ ವಾ

ನವದೆಹಲಿ : 15 ವರ್ಷಗಳ ನಂತರ ವಿದೇಶದಲ್ಲಿ ಟೆಸ್ಟ್‌ ಗೆಲುವನ್ನು ಸಾಧಿಸಿ ಬೀಗುತ್ತಿರುವ ಭಾರತ ಕ್ರಿಕೆಟ್‌ ತಂಡಕ್ಕೀಗ ಟೆಸ್ಟ್‌ ಕ್ರಿಕೆಟ್‌ ಅಘೋಷಿತ ಚಾಂಪಿಯನ್ಸ್‌ ಆಸ್ಟ್ರೇಲಿಯಾ ನಾಯಕನಿಂದ ಶಹಬ್ಭಾಸ್‌ಗಿರಿ ಸಿಕ್ಕಿದೆ. ಭಾರತದ ತಂಡವೀಗ ಕಬ್ಬಿಣದಂತೆ ದೃಢವಾಗುತ್ತಿದೆ ಎಂದು ಸ್ಟೀವ್‌ ವಾ ಗುರುವಾರ ಬಣ್ಣಿಸಿದ್ದಾರೆ.

ಪ್ರಸ್ತುತ ಭಾರತ ಕ್ರಿಕೆಟ್‌ ತಂಡ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ದೇಶದಾಚೆ ಯಾವುದೇ ತಂಡವನ್ನು ಸೋಲಿಸುವುದು ಮಹತ್ತರ ಸಾಧನೆ ಎನಿಸುತ್ತದೆ ಎಂದು ಕಳೆದ ಭಾನುವಾರ ಬುಲವಾಯಾದಲ್ಲಿ ಭಾರತ ಗಳಿಸಿದ 8 ವಿಕೆಟ್‌ಗಳ ಗೆಲುವನ್ನು ವಾ ತಮ್ಮ ಟೈಮ್ಸ್‌ ಆಫ್‌ ಇಂಡಿಯಾದಲ್ಲಿ ನ ಅಂಕಣದಲ್ಲಿ ಹೊಗಳದ್ದಾರೆ.

ಇತ್ತೀಚೆಗೆ ಭಾರತದಲ್ಲಿ ನಡೆದ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಸೋತರೂ, ಎರಡು ಹಾಗೂ ಮೂರನೇ ಟೆಸ್ಟ್‌ನಲ್ಲಿ ತಿರುಗಿಬಿದ್ದ ಭಾರತ ತಂಡದ ಸಾಧನೆಯನ್ನು ನೆನೆದಿರುವ ಸ್ಟೀವ್‌, ಈ ಗೆಲುವುಗಳು ಭಾರತ ತಂಡದ ಆಟಗಾರರ ಮನೋಭಾವ ಬದಲಾಗಿರುವುದನ್ನು ಸೂಚಿಸುತ್ತವೆ ಎಂದಿದ್ದಾರೆ. ಆಸ್ಟ್ರೇಲಿಯಾದ ಜೈತ್ರಯಾತ್ರೆಯ ಹಾದಿಯನ್ನು ತುಂಡರಿಸಿದ ಭಾರತದ ಚೇತರಿಕೆ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಅಪರೂಪವಾದುದು ಎಂದು ವಾ ಅಭಿಪ್ರಾಯ ಪಟ್ಟಿದ್ದಾರೆ.

ದಶಕಕ್ಕೂ ಹೆಚ್ಚು ಕಾಲ ವಿದೇಶದ ನೆಲದಲ್ಲಿ ಭಾರತ ಗೆಲುವು ಸಾಧಿಸದಿರುವ ಬಗೆಗೆ ಆಶ್ಚರ್ಯ ವ್ಯಕ್ತಪಡಿಸಿರುವ ಸ್ಟೀವ್‌ ವಾ, ಇದಕ್ಕೆ ಉಪಖಂಡದಲ್ಲಿ ರೂಪಿಸುವ ನಿಧಾನಗತಿಯ ಪಿಚ್‌ಗಳೇ ಕಾರಣ ಎಂದಿದ್ದಾರೆ. ಪ್ರಸಕ್ತ ಭಾರತ ತಂಡವು ಬಲಿಷ್ಠವಾಗಿದ್ದು , ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಅರ್ಹವಾಗಿದೆ ಎಂದೂ ಆಸ್ಟ್ರೇಲಿಯಾದ ನಾಯಕ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+