Get Updates
Get notified of breaking news, exclusive insights, and must-see stories!

ಜೂನ್‌ 21 ಸಂಪೂರ್ಣಸೂರ್ಯ ಗ್ರಹಣ, ಜುಲೈ 5 ಚಂದ್ರಗ್ರಹಣ

ಹೈದರಾಬಾದ್‌ : 21ರ ಗುರುವಾರ ಅಮಾವಾಸ್ಯೆ. ಅಂದು ಸುಡು ಬಿಸಿಲಿನ ಮಧ್ಯಾಹ್ನ ಸಂಪೂರ್ಣ ಹಾಗೂ ಸುದೀರ್ಘ ಸೂರ್ಯಗ್ರಹಣ ಘಟಿಸಲಿದೆ. ಜೂನ್‌21, ಉತ್ತರ ಧ್ರುವದಲ್ಲಿ ದೀಘ್ರ ಹಗಲಿನ ಹಾಗೂ ಅಲ್ಪ ಇರುಳಿನ ದಿನವೂ ಹೌದು.

ಆದರೆ, ಈ ಸೂರ್ಯಗ್ರಹಣ ಭಾರತದಲ್ಲಿ ಕಾಣಿಸುವುದಿಲ್ಲ. ಆಫ್ರಿಕಾ ಮತ್ತು ದಕ್ಷಿಣ ಅಮೆರಿಕೆಯಲ್ಲಿ ಗ್ರಹಣ ಗೋಚರಿಸುತ್ತದೆ. ಗ್ರಹಣವು ಭಾರತೀಯ ಕಾಲಮಾನದ ರೀತ್ಯ 3ಗಂಟೆ 2 ನಿಮಿಷಕ್ಕೆ ಆರಂಭವಾಗಿ ರಾತ್ರಿ 8 ಗಂಟೆ 4 ನಿಮಿಷಕ್ಕೆ (ಐ.ಎಸ್‌.ಟಿ) ಅಂತ್ಯಗೊಳ್ಳಲಿದೆ.

ಸಂಪೂರ್ಣ ಸೂರ್ಯಗ್ರಹಣ ಘಟಿಸುವ ಕಾಲ ಸಂಜೆ 4 ಗಂಟೆ (ಐ.ಎಸ್‌.ಟಿ). ಸೂರ್ಯಗ್ರಹಣದ ದಿನ ಮಂಗಳಗ್ರಹವು ಭೂಮಿಗೆ ಅತಿ ಸಮೀಪದಲ್ಲಿ ಇದ್ದು, ಪ್ರಕಾಶಮಾನವಾಗಿ ಗೋಚರಿಸಲಿದೆ ಎಂದು ಹೈದರಾಬಾದ್‌ನ ಬಿ.ಎನ್‌. ಬಿರ್ಲಾ ವಿಜ್ಞಾನ ಕೇಂದ್ರದ ಡಾ. ಬಿ.ಜಿ. ಸಿದ್ಧಾರ್ಥ ಹೇಳಿದ್ದಾರೆ.

ಚಂದ್ರಗ್ರಹಣ : ಜುಲೈ 5ರಂದು ಭಾಗಶಃ ಚಂದ್ರಗ್ರಹಣ ಘಟಿಸಲಿದ್ದು, ಅದು ಭಾರತದಲ್ಲಿಯೂ ಗೋಚರಿಸಲಿದೆ. ಭಾರತೀಯ ಕಾಲಮಾನದ ರೀತ್ಯ ಅಂದು ಸಂಜೆ 7 ಗಂಟೆ 5 ನಿಮಿಷಕ್ಕೆ ಆರಂಭವಾಗುವ ಗ್ರಹಣ ರಾತ್ರಿ 9 ಗಂಟೆ 45 ನಿಮಿಷದ ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂದೂ ಅವರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+