ಎಸ್ಬಿಎಂ: 56 ಕೋಟಿ ನಿವ್ವಳ ಲಾಭ, ಶೇ 25 ಡಿವಿಡೆಂಡ್ಪ್ರಕಟಣೆ
ಬೆಂಗಳೂರು : ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ, ಕಳೆದ ಆರ್ಥಿಕ ವರ್ಷದಲ್ಲಿ 56.06 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಶೇ 25ರಷ್ಟು ಡಿವಿಡೆಂಡ್ ಪ್ರಕಟಿಸಿದೆ.
ಬ್ಯಾಂಕ್ನ ನಿವ್ವಳ ಲಾಭದಲ್ಲಿ ಶೇ. 16.21ರಷ್ಟು ಹೆಚ್ಚಳವಾಗಿದ್ದು, ಕಳೆದ ವರ್ಷಕ್ಕಿಂತ ಹೆಚ್ಚುವರಿಯಾಗಿ 7.82 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಈ ವಿಷಯವನ್ನು ಬುಧವಾರದ ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಎಂ. ಸೀತಾರಾಮ ಮೂರ್ತಿ ತಿಳಿಸಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ 25 ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದ್ದು, 300 ಕೋಟಿ ರೂಪಾಯಿ ವಹಿವಾಟು ಲಾಭ ಮತ್ತು 90 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸುವ ಗುರಿ ಹೊಂದಲಾಗಿದೆ. 1,500 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸುವ ಹಾಗೂ 800 ಕೋಟಿ ರೂಪಾಯಿ ಸಾಲ ನೀಡುವ ಉದ್ದೇಶ ಬ್ಯಾಂಕಿಗಿದೆ.
ಬ್ಯಾಂಕ್ ಅಧಿಕಾರಿಗಳಾದ ಆರ್. ವಾಸುದೇವನ್, ಕೆ.ಆರ್. ರಾಜಗೋಪಾಲ್ , ಕೆ.ಎಸ್. ಮೂರ್ತಿ ಮತ್ತು ರಮಾನಂದ ರಾವ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
(ಇನ್ಫೋ ವಾರ್ತೆ)