Get Updates
Get notified of breaking news, exclusive insights, and must-see stories!

ವಿಶ್ವದ ನೂರು ಅಗ್ರ ಐ.ಟಿ. ಕಂಪನಿಗಳ ಸಾಲಿನಲ್ಲಿ ವಿಪ್ರೋ

ನ್ಯೂಯಾರ್ಕ್‌: ವಿಶ್ವದ ನೂರು ಅಗ್ರ ಐ.ಟಿ. (ಮಾಹಿತಿ ತಂತ್ರಜ್ಞಾನ) ಕಂಪನಿಗಳ ಸಾಲಿನಲ್ಲಿ ವಿಪ್ರೋ ಸ್ಥಾನ ಪಡೆದಿದೆ. ಅಮೆರಿಕದ ವಾಣಿಜ್ಯ ನಿಯತಕಾಲಿಕ ಬಿಸಿನೆಸ್‌ ವೀಕ್‌ ಸಿದ್ಧಪಡಿಸಿರುವ 200 ಅಗ್ರಮಾನ್ಯ ಕಂಪನಿಗಳ ಸಾಲಿನಲ್ಲಿ ಭಾರತದ ಹೆಮ್ಮೆಯ ಇನ್‌ಫೋಸಿಸ್‌ ಹಾಗೂ ವಿದೇಶ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ (ವಿಎಸ್‌ಎನ್‌ಎಲ್‌) ಸಹ ಸೇರಿವೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಅಗ್ರ ಕಂಪನಿಗಳ ಸಾಲಿನಲ್ಲಿ ವಿಪ್ರೋ 87ನೇ ಸ್ಥಾನ ಪಡೆದಿದ್ದರೆ, ಇನ್‌ಫೋಸಿಸ್‌ 102ನೇ ಸ್ಥಾನ ಹಾಗೂ ವಿಎಸ್‌ಎನ್‌ಎಲ್‌ 143ನೇ ಸ್ಥಾನವನ್ನು ಪಡೆದಿವೆ. ಅಗ್ರ ಕಂಪನಿಗಳ ಪಟ್ಟಿ ಬಿಸಿನೆಸ್‌ ವೀಕ್‌ನ ಮುಂದಿನ ಸಂಚಿಕೆಯಲ್ಲಿ ಪ್ರಕಟವಾಗಲಿದೆ.

ತೀರಾ ಇತ್ತೀಚಿನ ವಾರ್ಷಿಕ ಮಾರಾಟದ ಗಳಿಕೆ, ಆದಾಯ ವೃದ್ಧಿ, ಲಾಭಾಂಶ ಮೊದಲಾದ ಅಂಶಗಳ ಲೆಕ್ಕಾಚಾರದಲ್ಲಿ ಕಂಪನಿಗಳ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ವೀಕ್‌ ತಿಳಿಸಿದೆ. 662 ದಶಲಕ್ಷ (ಮಿಲಿಯನ್‌) ಡಾಲರ್‌ ಆದಾಯ ಹೊಂದಿರುವ ವಿಪ್ರೋದ ಆದಾಯ ವೃದ್ಧಿ 26.5 ದಶಲಕ್ಷ ಡಾಲರ್‌ಗಳು, ರಿಟರ್ನ್‌ ಆನ್‌ ಈಕ್ವಿಟಿ ಪ್ರತಿಶತ 33.7. ಕಂಪನಿಯ ನಿವ್ವಳ ಲಾಭ 137 ದಶಲಕ್ಷ ಡಾಲರ್‌.

ವೀಕ್‌ ಪ್ರಕಟಣೆಯ ರೀತ್ಯ ಇನ್‌ಫೋಸಿಸ್‌ ಸಂಸ್ಥೆಯ ಆದಾಯ 413.9 ದಶಲಕ್ಷ ಡಾಲರ್‌, ಆದಾಯದ ಬೆಳವಣಿಗೆ 103.4 ದಶಲಕ್ಷ ಡಾಲರ್‌, ರಿಟರ್ನ್‌ ಆನ್‌ ಈಕ್ವಿಟಿ ಶೇ. 42.3 ಹಾಗೂ ಲಾಭ 131.9 ಮಿಲಿಯನ್‌ ಡಾಲರ್‌.

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+