ಬೆಳಗ್ಗೆ 8 ಕ್ಕೇ ಓಪನ್ ರೈಲ್ವೆ ಟಿಕೆಟ್ ಕೌಂಟರ್
ಬೆಂಗಳೂರು : ಕಚೇರಿಗೆ ಹೋಗುವ ಮಂದಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೈಲ್ವೇ ಇಲಾಖೆ 20 ಟಿಕೆಟ್ ಕೌಂಟರ್‌ಗಳನ್ನು ತೆರೆದಿದೆ. ಇವೆಲ್ಲಾ ಮುಂಜಾನೆ 8 ಗಂಟೆಯಿಂದಲೇ ಟಿಕೆಟ್ ವಿತರಿಸುತ್ತಿವೆ.
ಆಂಗ್ಲ ಪತ್ರಿಕೆಯಾಂದು ಸೋಮವಾರ ಈ ವರದಿಯನ್ನು ಪ್ರಕಟಿಸಿದೆ. ಈ ಮುಂಚೆ ಎಲ್ಲಾ ರೈಲ್ವೆ ಟಿಕೆಟ್ ಕೌಂಟರ್‌ಗಳು ಬೆಳಗ್ಗೆ 10.30 ಗಂಟೆಯಿಂದ ಕಾರ್ಯ ನಿರ್ವಹಿಸುತ್ತಿದ್ದವು. ಹೀಗಾಗಿ 9ರಿಂದ 5 ಗಂಟೆವರೆಗೆ ಕಚೇರಿ ಅವಧಿ ಇರುವ ಮಂದಿ ಟಿಕೆಟ್‌ಗಾಗಿ ದಲ್ಲಾಳಿ, ಮಧ್ಯಸ್ಥಗಾರರ ಮೊರೆ ಹೋಗಬೇಕಿತ್ತು.
-ಹೊಸ ಕ್ರಮ-ದಿಂ-ದ ಆ-ದಾ-ಯದಲ್ಲೂ ಏರು-ಮು-ಖ: ಕುಂದಿ ಹೋಗುತ್ತಿರುವ ರೈಲ್ವೆ ಇಲಾಖೆಯ ಗುಣ ಮಟ್ಟವನ್ನು ಉತ್ತಮ ಪಡಿಸುವ ಸಲುವಾಗಿ ಇಲಾಖೆ ಹೊಸ ಕೌಂಟರ್‌ಗಳನ್ನು ತೆರೆದು, ಗ್ರಾಹಕ ಮಿತ್ರ ಎನಿಸಿಕೊಳ್ಳಲು ಬಯಸಿದೆ ಎನ್ನುತ್ತಾರೆ ವಿಭಾಗೀಯ ವಾಣಿಜ್ಯ ಮೇನೇಜರ್ ಎನ್.ರಮೇಶ್ ಹಾಗೂ ವಿಭಾಗೀಯ ರೈಲ್ವೆ ಮೇನೇಜರ್ ಬಿ.ಕೃಷ್ಣ ಕುಮಾರ್. ಈ ಇಬ್ಬರು ‘ಗ್ರಾಹಕ ಮಿತ್ರ’ ಕೌಂಟರ್‌ಗಳ ಸ್ಥಾಪನೆಯ ರೂವಾರಿಗಳೂ ಹೌದು.
ಎನ್.ರಮೇಶ್ ಹಾಗೂ ಬಿ.ಕೃಷ್ಣ ಕುಮಾರ್ ಅವರ ಆಲೋಚನೆ ಗ್ರಾಹಕರ ಮೆಚ್ಚಾಗಿರುವುದರ ಜೊತೆಗೆ ಇಲಾಖೆಯ ಆದಾಯ ಕೂಡ ಹೆಚ್ಚಿಸಿದೆ. ಕೌಂಟರ್‌ಗಳಲ್ಲಿ ಟಿಕೆಟ್ ಮಾರಾಟದಿಂದ ಬರುವ ಆದಾಯ ಪ್ರತಿಶತ 50ರಷ್ಟು ಹೆಚ್ಚಾಗಿದೆ.
ರಮೇಶ್ ಒಮ್ಮೆ 12 ಸ್ಯಾಟಲೈಟ್ ಬುಕಿಂಗ್ ಕೌಂಟರ್‌ಗಳಲ್ಲಿ ಗಸ್ತು ಹೊಡೆಯುತ್ತಿದ್ದಾಗ, ಟಿಕೆಟಿಂಗ್ ಸೂಪರ್‌ವೈಸರ್‌ಗಳ ಉಡಾಫೆ ಬೆಳಕಿಗೆ ಬಂತು. ಕೆಲಸಕ್ಕೆ ಅವರು ಪದೇಪದೇ ತಡವಾಗಿ ಬರುತ್ತಿದ್ದುದು ಪತ್ತೆಯಾಯಿತು. ರೈಲ್ವೆ ಇಲಾಖೆಗೆ ಈ ವಿಚಾರ ಮುಟ್ಟಿತು. ಕೌಂಟರ್‌ಗಳು ಬೆಳಗ್ಗೆ 8 ಗಂಟೆಗೇ ತೆರೆದುಕೊಂಡವು !
ಕೆಲವು ಸೂಪರ್‌ವೈಸರ್‌ಗಳು ಮೊದಲ ಜಾವದಲ್ಲೇ ಎದ್ದು, 7 ಗಂಟೆಗೇ ಕಚೇರಿಗೆ ಬರಬೇಕು ಎಂದು ಗೊಣಗಿದರು. ಇಲಾಖೆ ಇವ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಬದಲಿಗೆ ಸೂಪರ್‌ವೈಸರ್‌ಗಳ ಮನಃ ಪರಿವರ್ತನೆಗೆ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು.
ಈಗ ಮೊದಲಿನಂತೆ ಯಾವಾಗ ಬೇಕಾದರೂ ಕೌಂಟರ್‌ಗಳನ್ನು ಮುಚ್ಚುವಂತಿಲ್ಲ
ಹಾಗೆ ಮುಚ್ಚಿದರೆ, ಸಂಬಂಧಿತ ಅಧಿಕಾರಿ ತೊಂದರೆಗೆ ಸಿಲುಕುತ್ತಾರೆ. ಒಂದು ವೇಳೆ ತುರ್ತು ಅಗತ್ಯವಿದ್ದು, ಕೌಂಟರ್‌ಗಳನ್ನು ಮುಚ್ಚಬೇಕಾದಲ್ಲಿ ವಾಣಿಜ್ಯ ಮೇನೇಜರ್‌ಗಳ ಅನುಮತಿ ಪಡೆಯಬೇಕು.
ಇಲಾಖೆಯ ಈ ಹೆಜ್ಜೆಯನ್ನು ಜನ ಶ್ಲಾಘಿಸಿದ್ದಾರೆ. ಟಿಕೆಟ್ ಕೊಳ್ಳಲು ಅರ್ಧ ದಿನ ರಜೆ ತೆಗೆದುಕೊಳ್ಳುವ ಪರಿಸ್ಥಿತಿ ಇತ್ತು. ಜೊತೆಗೆ ಕೆಲವು ಸೂಪರ್‌ವೈಸರ್‌ಗಳ ಮನಸೋ ಇಚ್ಛೆ ವರ್ತನೆಯಿಂದ ರೋಸಿ ಹೋಗಿದ್ದೆವು. ಈಗ ಇಲಾಖೆ ಇವಕ್ಕೆಲ್ಲಾ ಫುಲ್‌ಸ್ಟಾಪ್ ಹಾಕಿದೆ, ಧನ್ಯವಾದಗಳು ಎನ್ನುತ್ತಾರೆ ಸಾಫ್ಟ್‌ವೇರ್ ಎಂಜಿನಿಯರ್ ಅನಿಮೇಶ್ ಪ್ರಸಾದ್. ಅವರ ಮಾತಿಗೆ ಸತೀಶ್ ಶೆಟ್ಟಿ ಎಂಬ ಗ್ರಾಹಕರೂ ದನಿಗೂಡಿಸುತ್ತಾ-ರೆ.
ಇಲಾಖೆ ಇಂಥಾ ಇನ್ನೂ ಕೆಲವು ಹುಳುಕುಗಳನ್ನು ಕಳೆಕೊಂಡಲ್ಲಿ ಜನರಿಗೆ ಅತ್ಯುತ್ತಮ ಸೇವೆ ದೊರಕೀತು. ಅಲ್ಲವೆ ?
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications