Get Updates
Get notified of breaking news, exclusive insights, and must-see stories!

ಕೇಂದ್ರದ ಯೋಜನೆ ಜಾರಿ: ಸೋಂಬೇರಿ ಅಧಿಕಾರಿಗಳ ವಿರುದ್ಧ ಕ್ರಮ

ಬೆಂಗಳೂರು : ಕೇಂದ್ರ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾಲವ್ಯಯ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಎಚ್ಚರಿಸಿದ್ದಾರೆ.

ಕೇಂದ್ರದ ಯೋಜನೆಗಳನ್ನು ಜಾರಿಗೊಳಿಸಲು ಅನುವಾಗುವಂತೆ ಅಧಿಕಾರಿಗಳು ಕಾಲವ್ಯಯ ಮಾಡದೆ ಪ್ರಸ್ತಾವನೆಗಳನ್ನು ಸಿದ್ಧಪಡಿಸಬೇಕು. ಕಾಲವ್ಯಯ ಮಾಡಿದಲ್ಲಿ ಆಯಾ ಅಧಿಕಾರಿಗಳನ್ನೇ ಕರ್ತವ ಲೋಪಕ್ಕೆ ಹೊಣೆಗಾರರನ್ನಾಗಿಸಲಾಗುವುದು ಎಂದು ಕೃಷ್ಣ ಹೇಳಿದರು. ಕೋರಮಂಗಲದಲ್ಲಿನ ಕೇಂದ್ರೀಯ ಸದನದ ಎನ್‌ಪಿಸಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಡಿಯೋ ಕಾನ್ಫರೆನ್ಸ್‌ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ರಾಜನಾಥ್‌ ಸಿಂಗ್‌ ಹಾಗೂ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು.

ಕೇಂದ್ರದ ಯೋಜನೆಗಳನ್ನು ಬಳಸಿಕೊಳ್ಳುವಲ್ಲಿ ಉಳಿದ ರಾಜ್ಯಗಳು ಯಶಸ್ವಿಯಾಗಿವೆ. ಇನ್ನು ಮುಂದಾದರೂ ಕೇಂದ್ರದ ಯೋಜನೆಗಳ ಸಿಂಹಪಾಲನ್ನು ಪಡೆಯುವಲ್ಲಿ ರಾಜ್ಯದ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಗೆ ಮುನ್ನ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ವೆಂಕಯ್ಯ ನಾಯ್ಡು ಅವರೊಂದಿಗೆ ಕೃಷ್ಣ ನೇರ ಸಂವಾದ ನಡೆಸಿದರು. ಗ್ರಾಮಸಡಕ್‌ ಯೋಜನೆಯನ್ನು ಪ್ರಧಾನಿ ಅನುಷ್ಠಾನಗೊಳಿಸುವಲ್ಲಿ , ಸಂಸದರ ವಿಶ್ವಾಸ ಪಡೆಯುವಂತೆ ವೆಂಕಯ್ಯನಾಯ್ಡು ಕೃಷ್ಣ ಅವರಿಗೆ ಸೂಚಿಸಿದರು.

ಗ್ರಾಮಸಡಕ್‌ ರಾಜ್ಯದ ಪಾಲಿಗೆ ಅತ್ಯಂತ ಮಹತ್ವಪೂರ್ಣ ಯೋಜನೆಯಾಗಿದ್ದು , ಅದರ ಜಾರಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಯೋಜನೆಯ ಜಾರಿಗಾಗಿ ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ಸಂಸದರು ಸೂಕ್ತ ಸಲಹೆ ನೀಡಿದಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳಲು ಸಿದ್ಧನಾಗಿದ್ದೇನೆ ಎಂದು ನಾಯ್ಡು ಅವರಿಗೆ ಕೃಷ್ಣ ಉತ್ತರಿಸಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+