Get Updates
Get notified of breaking news, exclusive insights, and must-see stories!

5 ವರ್ಷಗಳಿಂದ ರಾಜಧಾನಿಯ ಪರಿವಾರ ಅಜ್ಞಾತವಾಸದಲ್ಲಿ

ನವದೆಹಲಿ : ದೆಹಲಿಯಲ್ಲಿನ ಬಜಾಜ್‌ ಕುಟುಂಬವೊಂದು 1996ರಿಂದ ಒಂದೇ ಕೋಣೆಯಲ್ಲಿ ಜೀವನ ನಡೆಸಿದೆ. ಅಲ್ಲಿ ಕರೆಂಟಿಲ್ಲ , ನೀರು ನಿಂತರೂ ಸದ್ದಿಲ್ಲ, ಮನೆ ಬಾಗಿಲು ತೆರೆದದ್ದನ್ನ ಯಾರೂ ನೋಡಿಲ್ಲ. ಆದರೂ ನಾಲ್ವರು ಅಲ್ಲಿ ವಾಸ ಮಾಡುತ್ತಿದ್ದಾರೆ; ಜಗತ್ತಿನ ಗೊಡವೆಯೇ ಇಲ್ಲದೆ. ಇದಕ್ಕೆ ಕಾರಣ ಜೀವಭಯ!

ಅಷ್ಟು ವರ್ಷಗಳಿಂದ ಸ್ವಯಂ ಘೋಷಾದಲ್ಲಿದ್ದ ಸುಶೀಲ ಬಜಾಜ್‌ ಹಾಗೂ ಆಕೆಯ ಮೂವರು ಗಂಡು ಮಕ್ಕಳು ಕಳೆದ ಒಂದು ತಿಂಗಳಿಂದ ಮಾತ್ರ ಬಾಯಿ ಬಿಟ್ಟಿದ್ದಾರೆ. ಪೊಲೀಸ್‌ ಠಾಣೆಯ ಬಾಗಿಲು ತಟ್ಟಿದ್ದಾರೆ. 1991ರಲ್ಲಿ ಸುಶೀಲ ಅವ-ರ ಗಂಡ ಆಕಸ್ಮಿಕವಾಗಿ ಮೃತನಾದ. ಮನೆಯ ಆಡಳಿತದ ಸಂದೂಕದ ಕೀಲಿ ಈತನ ತಮ್ಮನ ಕೈಗೆ ಸಿಕ್ಕಿತು. ಇವ ಸಾಕಷ್ಟು ಸಮಾಜಘಾತುಕ ಕೃತ್ಯಗಳನ್ನೆಸಗಿದ್ದ. ಸುಶೀಲ ಅವರ ಗಂಡ ತನ್ನ ತಮ್ಮನ ಕಲ್ಯಾಣ ಗುಣಗಳನ್ನು ಬಯಲಿಗೆಳೆದಿದ್ದ. ಈ ಕಾರಣಕ್ಕೆ ತಮ್ಮನೇ ಆತನನ್ನು ಕೊಂದಿದ್ದಾನೆ ಅನ್ನೋದು ಸುಶೀಲ ಕುಟುಂಬದ ಅಭಿಪ್ರಾಯ. ತನ್ನ ಸಹಿಯನ್ನು ಮೈದುನ ನಕಲು ಮಾಡಿ, ಕಾಗದ ಪತ್ರಗಳನ್ನು ತನಗೆ ಬೇಕಾದಂತೆ ಬದಲಿಸಿಕೊಂಡ. ಜೀವಭಯವನ್ನೂ ಒಡ್ಡಿದ ಎಂಬುದು ಸುಶೀಲ ದೂರು. ಅದೂ ಈಗ ತಾನೆ ಬಯಲಿಗೆ ಬಂದಿದೆ.

ಜೀವಭಯದಿಂದ 1996ರಲ್ಲಿ ಗೂಡು ಸೇರಿದ ಸುಶೀಲ ಅಂಡ್‌ ಸನ್ಸ್‌ ಹೊರ ಬರುತ್ತಿದ್ದುದು ತರಕಾರಿ, ದಿನಸಿ ವಗೈರೆ ಕೊಳ್ಳಲು ಮಾತ್ರ; ಅದೂ ತಿಂಗಳಿಗೆ ಎರಡೋ ಮೂರೋ ಬಾರಿ. ಈ ಬಗ್ಗೆ ಯಾರಿಗೂ ತಿಳಿವಳಿಕೆಯೇ ಇಲ್ಲ. ಅಕ್ಕ-ಪಕ್ಕದವರಿಗೂ ಸುಶೀಲ ಮನೆಮಂದಿಯ ಬಗ್ಗೆ ಏನೇನೂ ಗೊತ್ತಿಲ್ಲ. ಸುಶೀಲ ಮಕ್ಕಳು ಜೀವಭಯದ ಕಾರಣ ಶಾಲೆಯಲ್ಲಿ ಕಲಿತದ್ದಷ್ಟೇ ಓದು; ಕಾಲೇಜಿನ ಮೆಟ್ಟಿಲನ್ನು ಹತ್ತುವ ಯೋಚನೆಯೇ ಬರಲಿಲ್ಲ.

1998ರಲ್ಲಿ ನೀರಿನ ಸಂಪರ್ಕ ಕಡಿದುಹೋಯಿತು. ಬಹು ದಿನಗಳ ಕಾಲ ಈ ಸಮಸ್ಯೆಯನ್ನೂ ಬಗೆಹರಿಸಿಕೊಳ್ಳದೆ ಕುಟುಂಬ ಜೀವನ ಸವೆಸಿತ್ತು. ಈಗ ಅಳ್ಳೆದೆ ಕೊಂಚ ಕರಗಿದೆ. ಸುಶೀಲ ಮಕ್ಕಳು ಸಣ್ಣಗೆ ಮಾತಾಡುತ್ತಿದ್ದಾರೆ. ಆದರೂ ಪೊಲೀಸರಿಗೆ ಸಾಕಷ್ಟು ಮಾಹಿತಿ ದೊರೆಯುತ್ತಿಲ್ಲ. ಸುಶೀಲ ಅವರ 23 ವರ್ಷದ ಮಗ ಅಮಾನ್‌ ಹೇಳುತ್ತಾನೆ- ಚಿಕ್ಕಪ್ಪ ನಮ್ಮನ್ನು ಎಲ್ಲಿ ಕೊಲ್ಲುವನೋ ಎಂಬ ಆತಂಕದಿಂದಲೇ ಇಷ್ಟು ವರ್ಷ ಕಾಲ ಜೀವನ ನಡೆಸಿದೆವು. ಒಂದು ಕೋಣೆ, ಅದಕ್ಕೆ ಹೊಂದಿಕೊಂಡ ಶೌಚಾಲಯ, ಬಗಲಲ್ಲೇ ಇದ್ದ ಅಡುಗೆ ಮನೆ, ಅಷ್ಟೇ ನಮ್ಮ ಜೀವನ.

ಎರಡಂತಸ್ತಿನ ಭವ್ಯ ಕಟ್ಟಡದ ಮುಂದೆ ಇಂಚುಗಟ್ಟಲೆ ಕಸ ತುಂಬಿದೆ. ಭೂತ ಬಂಗಲೆಯೇನೋ ಅನಿಸುವಂತಿದೆ. ಆದರೆ ಅದರಲ್ಲಿರುವವರು ಭೂತಗಳಲ್ಲ ; ಭಯಗ್ರಸ್ತರು. ಹಿಂದೂಸ್ತಾನ್‌ ಟೈಮ್ಸ್‌ ಪ್ರಕಟಿಸಿರುವ ಈ ಸುದ್ದಿ ರಾಜಧಾನಿಯಲ್ಲಿ ಈ ಹೊತ್ತು ಮನೆಮಾತು.

(ಎಎಫ್‌ಪಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+