ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲೂ ಓಡಲಿದೆ ರಾಜಾಸ್ಥಾನ ಮಾದರಿಸಂಚಾರಿ ರೈಲು ಅರಮನೆ

By Staff
|
Google Oneindia Kannada News

ಮೈಸೂರು : ರಾಜಾಸ್ಥಾನದಲ್ಲಿ ಗಾಲಿಗಳ ಮೇಲೆ ಓಡಾಡುವ ಅರಮನೆಯಿದೆ ಎಂಬುದು ನಿಮಗೂ ಗೊತ್ತಲ್ಲ. ಏನು ಅರಮನೆ ಓಡಾಡುತ್ತದೆಯೇ ? ಎನ್ನುವಿರಾ.. ಭಾರತೀಯ ರೈಲ್ವೆಯು ದೇಶ - ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ಜಾರಿಗೆ ತಂದ ಯೋಜನೆಯೇ ಈ ಗಾಲಿಯ ಮೇಲೆ ಅರಮನೆ ಅರ್ಥಾತ್‌ ಪ್ಯಾಲೇಸ್‌ ಆನ್‌ ವೀಲ್‌.

ಅರಮನೆಗಳಂತೆಯೇ ರಾಜವೈಭವವುಳ್ಳ ಬೋಗಿಗಳನ್ನೊಳಗೊಂಡ ರೈಲಿನಲ್ಲಿ ಪ್ರಯಾಣಿಸುತ್ತಾ ರಾಜವೈಭೋಗ ಅನುಭವಿಸುವ ಯೋಗ ರಾಜಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಲಭ್ಯ. ಈ ಯೋಗ ಕೆಲವೇ ತಿಂಗಳಲ್ಲಿ ಕನ್ನಡಿಗರಿಗೂ ದೊರೆಯಲಿದೆ.

ಈ ವಿಶೇಷ ರೈಲು ಬೋಗಿಗಳಲ್ಲಿ ಐಷಾರಾಮಿ ಬೆಡ್‌ರೂಂಗಳು, ಅರಮನೆಯಂತೆಯೇ ಗೋಚರಿಸುವ ಸುಂದರ ಔತಣಗೃಹವೇ ಮೊದಲಾದ ಸೌಲಭ್ಯಗಳಿವೆ. ಭಾರತೀಯ ರೈಲ್ವೆಯು ಮುಂದಿನ 2 ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲೂ ಸುಸಜ್ಜಿತವಾದ ಗಾಲಿಗಳ ಮೇಲೆ ಅರಮನೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ವಿಷಯವನ್ನು ದಕ್ಷಿಣ ರೈಲ್ವೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಕರ್ನಲ್‌ ಎಸ್‌. ಮಂದಾನಿ ತಿಳಿಸಿದ್ದಾರೆ.

ಬುಧವಾರ ಇಲ್ಲಿ ನಡೆದ ದಕ್ಷಿಣ ರೈಲ್ವೆ ಮಂಡಳಿಯ 50ನೇ ಹುಟ್ಟು ಹಬ್ಬದ ಆಚರಣೆಯ ನಿಮಿತ್ತ ದಕ್ಷಿಣ ರಾಜ್ಯಾಗಳಾದ್ಯಂತ ಹಮ್ಮಿಕೊಂಡಿರುವ ದಕ್ಷಿಣ ರೈಲ್ವೆ ಸುವರ್ಣ ಮಹೋತ್ಸವ ವಸ್ತು ಪ್ರದರ್ಶನ ಉದ್ಘಾಟಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಈ ವಿಷಯ ತಿಳಿಸಿದರು.

ಪ್ರಾಯೋಗಿಕ ರೈಲು : ಈ ಯೋಜನೆಯ ಸಾಧಕ - ಬಾಧಕಗಳನ್ನು ಲೆಕ್ಕಾಹಾಕಲು, ಇನ್ನು ಮೂರ್ನಾಲ್ಕು ತಿಂಗಳಲ್ಲೇ ರಾಜಸ್ಥಾನ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆಗಳ ಸಹಯೋಗದಲ್ಲಿ ದಕ್ಷಿಣ ರೈಲ್ವೆ ಪ್ರಯೋಗಾರ್ಥವಾಗಿ ಒಂದು ವಿಶೇಷ ಅರಮನೆ ರೈಲು ಬೋಗಿಯನ್ನು ಮಾತ್ರ ರಾಜ್ಯದಲ್ಲಿ ಓಡಿಸಲಿದೆ.

ಈ ಕೋಚ್‌ ಕರ್ನಾಟಕದ ಬಹುತೇಕ ಎಲ್ಲ ಪ್ರವಾಸಿತಾಣಗಳನ್ನೂ ತಲುಪಲಿದೆ. ರಾಜ್ಯದ ಅರಮನೆಗಳ ನಗರಿ ಎಂದೇ ಖ್ಯಾತವಾದ ಮೈಸೂರಿನಿಂದ ಪ್ರಾಯೋಗಿಕ ಕೋಚ್‌ ತನ್ನ ಓಡಾಟ ಆರಂಭಿಸಲಿದೆ ಎಂದೂ ಅವರು ವಿವರಿಸಿದರು. ಕಾರ್ಯಕ್ರಮದಲ್ಲಿ ವಿಭಾಗೀಯ ಪ್ರಧಾನ ಎಂಜಿನಿಯರ್‌ ಬಿ.ಎಲ್‌. ಮೀನಾ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X