ವಿಶ್ವದ ಎತ್ತರದ ಖಗೋಳ ವೀಕ್ಷಣಾಲಯಇದೋ ಇನ್ನೇನು ಸಿದ್ಧ
ಬೆಂಗಳೂರು : ಭಾರತದ ಖಗೋಳ ಶಾಸ್ತ್ರದ ಇತಿಹಾಸದಲ್ಲಿ ಹೊಸ ಮೈಲುಗಲ್ಲು ದಾಖಲಾಗುವ ದಿನ ಹತ್ತಿರವಾಗಿದೆ. ಅಬ್ಬಬ್ಬಾ ಎಂದರೆ ಇನ್ನೆರಡೇ ತಿಂಗಳು, ವಿಶ್ವದ ಅತಿ ಎತ್ತರದ ಖಗೋಳ ವೀಕ್ಷಣಾಲಯ ಲಡಾಖ್‌ನಲ್ಲಿ ಕಾರ್ಯಾರಂಭ ಮಾಡಲಿದೆ. ಸಮುದ್ರ ಮಟ್ಟಕ್ಕಿಂತ 15 ಸಾವಿರ ಅಡಿಗಳ ಎತ್ತರದಲ್ಲಿ ರುವುದು ಈ ವೀಕ್ಷಣಾಲಯದ ಅಗ್ಗಳಿಕೆ.
ಖಂಡಿತವಾಗಿಯೂ ಇನ್ನೆರಡು ತಿಂಗಳಲ್ಲಿ ಕಾರ್ಯಾರಂಭ ಮಾಡುವುದು ಖಚಿತ- ಎನ್ನುತ್ತಾರೆ ಬೆಂಗಳೂರಿನಲ್ಲಿರುವ ಭಾರತೀಯ ಆಸ್ಟ್ರೋ ಫಿಸಿಕ್ಸ್ ಸಂಸ್ಥೆ (ಐಐಎ) ಯ ಹಿರಿಯ ವಿಜ್ಞಾನಿ. ಪ್ರಸ್ತುತ, ಹೆಚ್ಚು ನಿಖರತೆ ಹಾಗೂ ಪರಿಷ್ಕರಣ ಕಾರ್ಯಗಳು ನಡೆಯುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಹನ್ಲೆಯಲ್ಲಿರುವ ಈ ರಾಷ್ಟ್ರೀಯ ವೀಕ್ಷಣಾಲಯ ಈಗಾಗಲೇ ಎರಡು ಮೀಟರ್ ದೊಡ್ಡದಾದ ಆಪ್ಟಿಕಲ್ ಟೆಲಿಸ್ಕೋಪ್ ಹೊಂದಿದೆ.
ಐಐಎ ವಿಜ್ಞಾನಿಗಳ ಪ್ರಕಾರ- ಟೆಲಿಸ್ಕೋಪನ್ನು ಇನ್ಸ್ಯಾಟ್ ಉಪಗ್ರಹದ ಮೂಲಕ ಆಪರೇಟ್ ಮಾಡಲಾಗುವುದು. ಹೊಸಕೋಟೆಯಲ್ಲಿರುವ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಶೋಧನೆ ಹಾಗೂ ಶಿಕ್ಷಣ ಕೇಂದ್ರದ ಮೂಲಕ ಉಪಗ್ರಹದ ಸಂಪರ್ಕ ಕಾರ್ಯ ಸಾಧ್ಯವಾಗಲಿದೆ. ಟೆಲಿಸ್ಕೋಪ್ ಒದಗಿಸುವ ದತ್ತಾಂಶಗಳ ಡೌನ್‌ಲೋಡ್ ಹಾಗೂ ವಿಶ್ಲೇಷಣೆ ಕೂಡ ಹೊಸಕೋಟೆಯ ಕೇಂದ್ರದಲ್ಲೇ ನಡೆಯಲಿದೆ.
ಹನ್ಲೆ ಹಾಗೂ ಹೊಸಕೋಟೆ ನಡುವಣ ಉಪಗ್ರಹ ಸಂಪರ್ಕ ಜಾಲವನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ ಜೂನ್ 2 ರಂದು ಔಪಚಾರಿಕವಾಗಿ ಉದ್ಘಾಟಿಸುವರು. ಅದೇ ಹೊತ್ತಿಗೆ ಹೊಸಕೋಟೆ ಹಾಗೂ ಹನ್ಲೆ ನಡುವಿನ ಸಂಪರ್ಕ ಜಾಲವನ್ನು ಪ್ರಸಿದ್ಧ ವಿಜ್ಞಾನಿ ಪ್ರೊ. ಬಿ.ವಿ. ಶ್ರೀಕಂಠನ್ (ಐಐಎ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷ) ಉದ್ಘಾಟಿಸುವರು.
ಟೆಲಿಸ್ಕೋಪ್ ಒದಗಿಸುವ ದತ್ತಾಂಶಗಳಿಂದ ಗ್ರಹ ತಾರೆ, ಗ್ಯಾಲಾಕ್ಸಿ , ಸೂಪರ್‌ನೋವಾ, ಗಾಮಾ ರೇ, ಕಾಸ್ಮೋಲಜಿ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ವಿಶ್ಲೇಷಣೆ- ಪ್ರಯೋಗ ನಡೆಸಲು ಸಹಕಾರಿಯಾಗುವುದು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications