Get Updates
Get notified of breaking news, exclusive insights, and must-see stories!

ವಯಾಗ್ರ ಸ್ತ್ರೀಯರಲ್ಲೂ ಲೈಂಗಿಕಾಸಕ್ತಿ , ಸಾಮರ್ಥ್ಯ ವೃದ್ಧಿಸುತ್ತದೆ!

ಲಂಡನ್‌ : ಪುರುಷರ ಲೈಂಗಿಕ ಸಾಮರ್ಥ್ಯಹೆಚ್ಚಿಸುವ ವಯಾಗ್ರ ಗುಳಿಗೆ ಮಹಿಳೆಯರಲ್ಲೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಇತ್ತೀಚಿನ ಅಧ್ಯಯನಗಳಿಂದ ಬೆಳಕಿಗೆ ಬಂದಿದೆ. ಈ ವಿಷಯವನ್ನು ಇಟಲಿಯ ಲೈಂಗಿಕ ತಜ್ಞರು ಬಹಿರಂಗಪಡಿಸಿದ್ದಾರೆ.

ಕೆಟಾನಿಯ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಸಂಶೋಧನೆಯಿಂದ ಈ ಅಂಶ ಬೆಳಕು ಕಂಡಿದೆ. ಸ್ಲಿಡೇನಾಫಿಲ್‌ ಎಂಬ ನೀಲವರ್ಣದ ಗುಳಿಗೆಯಲ್ಲಿ ಸ್ತ್ರೀಯರ ಲೈಂಗಿಕ ಬಯಕೆ ಹಾಗೂ ಸಾಮರ್ಥ್ಯ ವರ್ಧಿಸುವ ಶಕ್ತಿ ಇದೆ. ಇದು ಸ್ತ್ರೀಯರಲ್ಲಿ ಲೈಂಗಿಕ ಬಯಕೆಯನ್ನು ಬಡಿದೆಬ್ಬಿಸುವ ಮೂಲಕ ಹೆಚ್ಚಿನ ಲೈಂಗಿಕ ಸುಖ ಅನುಭವಿಸಲು ಪೂರಕವಾಗುತ್ತದೆ ಎಂದು ಪ್ರೊ. ಸಾಲ್ವಟೋರ್‌ ಕರೂಸೋ ತಿಳಿಸಿದ್ದಾರೆಂದು ಬ್ರಿಟನ್‌ ಪತ್ರಿಕೆಯಾಂದು ವರದಿ ಮಾಡಿದೆ.

ಲೈಂಗಿಕ ಆಸಕ್ತಿಯನ್ನೇ ಕಳೆದುಕೊಂಡಿದ್ದ ಕೆಲವು ಮಹಿಳೆಯರಿಗೆ ವಯಾಗ್ರ ಮಾತ್ರೆಯನ್ನು ನೀಡಿ ಸಂಶೋಧನೆ ನಡೆಸಲಾಗಿದೆ. 22 ವರ್ಷದಿಂದ 38ರ ವಯೋಮಿತಿಯಾಳಗಿನ ಹಾಗೂ ಲೈಂಗಿಕಾಸಕ್ತಿ ಕಳೆದುಕೊಂಡ 51 ಮಹಿಳೆಯರನ್ನು ಆಯ್ಕೆ ಮಾಡಿ ಅವರಿಗೆ 25 ರಿಂದ 50 ಮಿಲಿ ಗ್ರಾಂ ನಷ್ಟು ಮಾತ್ರೆಗಳನ್ನು ನೀಡಲಾಯಿತು.

ಸತತ ಮೂರು ನಾಲ್ಕು ವಾರಗಳ ಕಾಲ ಅವರಿಗೆ ಮಾತ್ರೆಗಳನ್ನು ನೀಡಿ, ವೈದ್ಯಕೀಯ ತಪಾಸಣೆಗೆ ಗುರಿಪಡಿಸಿ, ಸಂಶೋಧನೆ ನಡೆಸಲಾಯಿತು. ಈ ಮಾತ್ರೆಗಳ ಸೇವನೆಯಿಂದ ಅವರಲ್ಲಿ ಲೈಂಗಿಕಾಸಕ್ತಿ ವೃದ್ಧಿಸಿದ್ದಷ್ಟೇ ಅಲ್ಲ. ಲೈಂಗಿಕ ತೃಪ್ತಿ ಹಾಗೂ ಆಮೋದಗಳೂ ಹೆಚ್ಚಿರುವುದು ತಜ್ಞ ವೈದ್ಯರ ಗಮನಕ್ಕೆ ಬಂತು ಎಂದು ಕರೂಸೋ ಪತ್ರಿಕೆಗೆ ತಿಳಿಸಿದ್ದಾರೆ.

ವಯಾಗ್ರಾ ಪುರುಷರಲ್ಲಿ ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೋ ಅಷ್ಟೇ ಪರಿಣಾಮಕಾರಿಯಾದ ಸಂಚಲನವನ್ನು ಸ್ತ್ರೀಯರಲ್ಲೂ ಉಂಟು ಮಾಡಿದೆ ಎಂದಿರುವ ಕುರೂಸೋ ಅಮೆರಿಕದ ಫಾರ್ಮಾಸ್ಯುಟಿಕಲ್‌ ಫಿಜರ್‌ ತಯಾರಿಸಿರುವ ಮಾತ್ರೆಯಲ್ಲೂ ಇದೇ ಗುಣವಿಶೇಷಗಳಿವೆ ಎಂದು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+