Get Updates
Get notified of breaking news, exclusive insights, and must-see stories!

ಕೃಷ್ಣ ರಾಜಪುರ ತೂಗು ಸೇತುವೆ ನವೆಂಬರ್‌ಗೆ ಪೂರ್ಣ: ಕೃಷ್ಣ

ಬೆಂಗಳೂರು: 47 ಕೋಟಿ ರುಪಾಯಿ ವೆಚ್ಚದಲ್ಲಿ ಕೃಷ್ಣರಾಜಪುರ ರೈಲ್ವೆ ನಿಲ್ದಾಣದ ಬಳಿ ನಿರ್ಮಿಸಲಾಗುತ್ತಿರುವ ತೂಗುಸೇತುವೆ ಕಾಮಗಾರಿ ನವೆಂಬರ್‌ ವೇಳೆಗೆ ಪೂರ್ಣವಾಗುವ ಸಾಧ್ಯತೆ ಇದೆ ಎಂದು ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ತಿಳಿಸಿದ್ದಾರೆ.

ಬುಧವಾರ ಲೋಕೋಪಯೋಗಿ ಸಚಿವ ಧರ್ಮಸಿಂಗ್‌ ಹಾಗೂ ಸಕ್ಕರೆ ಸಚಿವ ಎ. ಕೃಷ್ಣಪ್ಪ ಅವರೊಂದಿಗೆ ಸೇತುವೆಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 230 ಮೀಟರ್‌ ಉದ್ದದ ತೂಗು ಸೇತುವೆ ಕಾಮಗಾರಿಗೆ ಈವರೆಗೆ 33 ಕೋಟಿ ರುಪಾಯಿ ವೆಚ್ಚವಾಗಿದೆ. ಇದರ ಒಟ್ಟು ಅಂದಾಜು ಮೊತ್ತ 47.42 ಕೋಟಿ ರುಪಾಯಿ ಎಂದು ಹೇಳಿದರು.

ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಾಣವಾಗುತ್ತಿರುವ ಈ ಸೇತುವೆ ರಾಷ್ಟ್ರದಲ್ಲೇ ಪ್ರಥಮ. ಇದು ವಿಧಾನಸೌಧ, ಕಬ್ಬನ್‌ ಪಾರ್ಕ್‌ನಂತೆಯೇ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ಕೃಷ್ಣ ಹೇಳಿದರು. ಈ ಸೇತುವೆಗೆ ರಾಜ್ಯ ಸರಕಾರ ಹಾಗೂ ರೈಲ್ವೆ ಇಲಾಖೆಗಳು ತಲಾ 2.36 ಕೋಟಿ ರುಪಾಯಿ ಬಂಡವಾಳ ಹೂಡಿವೆ. ಉಳಿದ ಹಣವನ್ನು ಕೇಂದ್ರ ಸರಕಾರಿ ಸ್ವಾಮ್ಯದ ಇರ್ಕಾನ್‌ ಸಂಸ್ಥೆ ಭರಿಸುತ್ತಿದೆ ಎಂದು ಕೃಷ್ಣ ವಿವರಿಸಿದರು.

1993ರಲ್ಲಿಯೇ ಈ ಸೇತುವೆ ನಿರ್ಮಾಣದ ಆರಂಭಿಕ ಪ್ರಕ್ರಿಯೆ ಆರಂಭವಾಯಿತು. 96ರಲ್ಲಿ ಯೋಜನೆಗೆ ಮಂಜೂರಾತಿ ದೊರೆಯಿತು. 1999ರಿಂದ ಕಾಮಗಾರಿ ನಡೆಯುತ್ತಿದೆ. ಈಗ ಬಹುತೇಕ ಸೇತುವೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ನವೆಂಬರ್‌ ವೇಳೆಗೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ ಎಂದು ಕೃಷ್ಣ ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+