ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೊಮ್ಮಸಂದ್ರದಲ್ಲಿ ತಲೆ ಎತ್ತಲಿದೆ ಆಫ್ಟಿಕ್‌ ಫೈಬರ್‌ ತಯಾರಿಕಾ ಘಟಕ

By Staff
|
Google Oneindia Kannada News

ಬೆಂಗಳೂರು : ಆಪ್ಟಿಕ್‌ ಫೈಬರ್‌ ಕೇಬಲ್‌ಗಳನ್ನು ತಯಾರಿಸುವ ಭಾರತದ ಮೊಟ್ಟ ಮೊದಲ ಘಟಕ ಅತಿ ಶೀಘ್ರದಲ್ಲೇ ಬೆಂಗಳೂರಿನ ಬೊಮ್ಮಸಂದ್ರದಲ್ಲಿ ತಲೆ ಎತ್ತಲಿದೆ. ಸ್ಟೆರ್‌ಲೈಟ್‌ ಗ್ರೂಪ್‌ 1000 ಕೋಟಿ ರುಪಾಯಿಗಳ ಬಂಡವಾಳದೊಂದಿಗೆ ಈ ಘಟಕ ಸ್ಥಾಪಿಸಲು ಮುಂದಾಗಿದೆ.

ಉನ್ನತ ಮಟ್ಟದ ಸಭೆಯ ಬಳಿಕ ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆಗಳ ಸಚಿವ ಆರ್‌.ವಿ. ದೇಶಪಾಂಡೆ ಅವರು ಈ ಯೋಜನೆಗೆ ಸಮ್ಮತಿ ನೀಡಿದ್ದಾರೆ. ಇದರೊಂದಿಗೆ ಎರಡು ಸಾಫ್ಟ್‌ವೇರ್‌ ಪಾರ್ಕ್‌ ಹಾಗೂ ಎರಡು ಸಕ್ಕರೆ / ವಿದ್ಯುತ್‌ ಉತ್ಪಾದನೆಯ ಘಟಕಗಳಿಗೂ ಅನುಮೋದನೆ ದೊರೆತಿದೆ.

ಬೊಮ್ಮನಹಳ್ಳಿಯ ನಾಲ್ಕನೇ ಹಂತದ 25 ಎಕರೆ ಪ್ರದೇಶದಲ್ಲಿ ಸ್ಟೆರಲೈಟ್‌ ಆಪ್ಟಿಕಲ್‌ ಟೆಕ್ನಾಲಜೀಸ್‌ ಲಿಮಿಟೆಡ್‌ ಆಪ್ಟಿಕ್‌ಫೈಬರ್‌ ಉತ್ಪಾದನಾ ಘಟಕವನ್ನು ಆರಂಭಿಸುತ್ತಿದೆ. ಈ ಉತ್ಪಾದನಾ ಕಾರ್ಖಾನೆ ಎರಡು ಹಂತಗಳಲ್ಲಿ ಕಾರ್ಯಾರಂಭ ಮಾಡಲಿದ್ದು, ಮೊದಲ ಹಂತದಲ್ಲಿ ಸುಮಾರು 200 ಜನರಿಗೆ ಉದ್ಯೋಗಾವಕಾಶ ದೊರಕಲಿದೆ.

ಈ ಕಾರ್ಖಾನೆಯು ಕೇವಲ ಆಪ್ಟಿಕ್‌ ಫೈಬರ್‌ ಕೇಬಲ್‌ಗಳಷ್ಟೇ ಅಲ್ಲದೆ, ಜೆಲ್ಲಿ ಮಿಶ್ರಿತ ಟೆಲಿಕಾಂ ಕೇಬಲ್‌, ತಾಮ್ರ ತಂತಿಗಳು, ಅಲ್ಯುಮಿನಿಯಂ ವಾಹಕಗಳು ಹಾಗೂ ಟ್ರಾನ್ಸ್‌ಮಿಷನ್‌ ಕಂಡಕ್ಟರ್‌ಗಳನ್ನೂ ತಯಾರಿಸಲಿದೆ ಎಂದು ರಾಜ್ಯದ ಕೈಗಾರಿಕಾ ಖಾತೆಯ ಉನ್ನತಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X