Get Updates
Get notified of breaking news, exclusive insights, and must-see stories!

ತಿಳಿನೀಲ ನೀರ ಕಡಲ, ಬಿಳಿಯಲೆಗಳ ಸೌಂದರ್ಯ ಲಹರಿ ಬಿಣಗಾ ಬೀಚ್‌

ರವಿಂದ್ರರೇ ಮೆಚ್ಚಿದ ಕಡಲತೀರವನ್ನು ಆಸೆಗಣ್ಣುಗಳಿಂದ ಕಾಣಲು ಬರುವವ ಸೌಂದರ್ಯಾರಾಧಕರು ಹಾಗೂ ಪರಿಸರ ಪ್ರೇಮಿಗಳಿಗೆ ಭ್ರಮನಿರಸನವಾದರೂ, ಮರಳುಗಾಡಿನಲ್ಲಿಯೂ ಮರಿಚಿಕೆ ಇರುವಂತೆ ಇಲ್ಲಿಗೆ ಸಮೀಪದಲ್ಲಿರುವ ಸೀಬರ್ಡ್‌ ನೌಕಾನೆಲಯ ವಶದಲ್ಲಿರುವ ಬಿಣಗಾ ಬೀಚ್‌ನಲ್ಲಿನ ಸೌಂದರ್ಯ, ಏಕಾಂತ, ಪರಿಶುದ್ಧತೆ ಕಾರವಾರದ ಬಗ್ಗೆ ಮೂಡಿದ್ದ ಬೇಸರವನ್ನು ಕ್ಷಣಮಾತ್ರದಿ ಅಳಿಸಿಹಾಕುತ್ತದೆ.

ಮೂರುದಿಕ್ಕುಗಳಲ್ಲಿ ಹಸಿರು ಗಿರಿಗಳಿಂದ ತುಂಬಿ ಒಂದು ದಿಕ್ಕಿನಲ್ಲಿ ಕಣ್ಣು ಹಾಯಿಸಿದಷ್ಟೂ ನೀರೇ ಕಾಣುವ ಸಾಗರವುಳ್ಳ ಈ ಭೂಭಾಗ ನೀಲ ತೆರೆಗಳ ನಡುವೆ ಬಿಳಿಯಲೆಗಳ ಸೌಂದರ್ಯಾರಾಧನೆಗೆ ಸೂಕ್ತವಾಗಿದೆ. ಮರವಂತೆಯಲ್ಲಿರುವಂತೆ ಇಲ್ಲಿ ಅಪಾಯವಿಲ್ಲ. ಅಪಾಯ ರಹಿತವಾದ ಈ ತಾಣ ವಿಶಾಲವಾದ ಕಡಲ ದಂಡೆಯನ್ನು ಹೊಂದಿದೆ. ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಅಂಕೋಲಾ ಕಡೆ 4 ಕಿ.ಮೀಟರ್‌ ಸಾಗಿದರೇ ಸಿಗುತ್ತದೆ.

ದೇವಭಾಗ : ಇಲ್ಲೇ ಸನಿಹದಲ್ಲಿ ದೇವಭಾಗ ಎಂಬ ಅತಿ ಸುಂದರ ತಾಣವಿದೆ. ಬಿಣಗಾದಿಂದ ಕಾರವಾರ ಮಾರ್ಗವಾಗಿ ನಾಲ್ಕು ಕಿ.ಮೀಟರ್‌ ದೂರದಲ್ಲಿ ಮೊದಲು ಕಾಳಿನದಿ ಸೇತುವೆ ಸಿಗುತ್ತದೆ. ಇದಕ್ಕೆ ಕೋಡಿಭಾಗ ಎನ್ನುತ್ತಾರೆ. ಕಾಳಿ ನದಿ ಸಮುದ್ರ ಸೇರುವುದು ಇಲ್ಲೇ. ಈ ಭಾಗದ ಎಡದಂಡೆ ಮೇಲೆ ಕಾರವಾರವಿದೆ. ಬಲದಂಡೆ ಮೇಲೆ ಸದಾಶಿವಗಢವಿದೆ. ಕಾಳಿ ನದಿ ಬಳಿ ಇರುವ ಸೀಳು ರಸ್ತೆಯ ಸೌಂದರ್ಯವನ್ನು ಕಣ್ಣಾರೆ ಕಂಡೇ ಸವಿಯಬೇಕು. ಈ ಸೇತುವೆ ಗೋವೆಯ ಪ್ರಮುಖ ಕೊಂಡಿ.

ಈ ಸೇತುವೆಯ ಕೆಳಭಾಗದಲ್ಲಿ ದೋಣಿಗಳು ದೊರಕುತ್ತವೆ. ಅದರಲ್ಲಿ ಕುಳಿತು ಹೊರಟರೆ ದೇವಭಾಗ ಎಂಬ ಅತಿ ಮನೋಹರ ಪ್ರದೇಶವನ್ನು ತಲುಪಬಹುದು. ಇಲ್ಲಿ ರೆಸಾರ್ಟ್‌ ನಿಮ್ಮನ್ನು ಬನ್ನಿ ಎಂದು ಕೈಬೀಸಿ ಕರೆಯುತ್ತದೆ. ಇಲ್ಲಿಗೆ ಹೋಗಲು ದೋಣಿಯ ಜಲಮಾರ್ಗವೊಂದೇ ದಾರಿ. ತಿಳಿಯದೆ ದೇವಭಾಗಕ್ಕೆ ಹೋಗಲು ಬಸ್‌ ಏರಿದರೆ, ರಸ್ತೆ, ಕಡಲುಗಳೆರಡೂ ಅಲ್ಲದ ನಡುವಂತರದ ದುರ್ನಾಥ ಪ್ರದೇಶದಲ್ಲಿ ನಿಮ್ಮ ಕೈಬಿಟ್ಟು ಹೋಗಿಬಿಡುತ್ತಾರೆ.

ಕಾರವಾರ ಹಾಗೂ ಸುತ್ತಮುತ್ತಲ ರಮಣೀಯ ದೃಶ್ಯಗಳನ್ನು ಕಾಣುವ ಮೊದಲು ಸಾಕಷ್ಟು ತಯಾರಿ, ಮಾಹಿತಿ ಕೈಯಲ್ಲಿ ಹಿಡಿದು ಹೊರಟರೇ ಕ್ಷೇಮ. ಗೋವೆ ಮಾರ್ಗದಲ್ಲಿರುವ ಮಾಜಾಳಿಗೆ ಬಂದು ಒಂದೂವರೆ ಕಿ.ಮೀಟರ್‌ನಷ್ಟು ನಡೆದರೆ, ತಿಳಮಾತಿ ಬೀಚ್‌ಗಳನ್ನು ಕಾಣಬಹುದು. ತಿಳಮಾತಿಯ ವಿಶೇಷ ಏನು ಗೊತ್ತೆ? (ಅದರ ಹೆಸರೇ ಹೇಳುಂತೆ ತಿಲ ಎಂದರೆ ಎಳ್ಳು) ಇಲ್ಲಿನ ಮರಳು ಎಳ್ಳಿನ ಹಾಗೆ ಗೋಚರಿಸುತ್ತದೆ. ಈ ಮರಳು ಎಷ್ಟೇ ಬಿಸಿಲಿದ್ದರೂ ಬಿಸಿಯಾಗದು. ಸದಾ ತಂಪಾಗಿರುವ ಈ ಮರಳಿನ ಮೇಲೆ ಹಾಯಾಗಿ ಮಲಗಿ ನಿಮ್ಮ ಆಯಾಸ ಪರಿಹಾರ ಮಾಡಿಕೊಳ್ಳಬಹುದು.

ದೇವಭಾಗ ಹಾಗೂ ತಿಳಮಾತಿಯ ಬಗ್ಗೆ ಕನ್ನಡಿಗರಿಗಿಂತ ವಿದೇಶೀಯರಿಗೆ ಹೆಚ್ಚು ಮಾಹಿತಿ ಇದ್ದಂತಿದೆ. ನಮ್ಮವರಿಗಿಂತ ಈ ಪ್ರದೇಶಕ್ಕೆ ಅವರೇ ಹೆಚ್ಚು ಭೇಟಿ ನೀಡುತ್ತಾರೆ. ಕಾರವಾರ ಸಮುದ್ರ ತೀರದಿಂದ 8 ಕಿ.ಮೀಟರ್‌ ದೂರದಲ್ಲಿ ಅಂಜದೀವ್‌ ದ್ವೀಪ, ಮದಲಿಂಗಗಢ, ಮೂರ್ಮಗಢ ದ್ವೀಪಗಳು ಇವೆ. ಗ್ರೀಕ್‌ ಸಾಹಿತ್ಯದಲ್ಲಿಯೂ ಉಲ್ಲೇಖವಿರುವ ಅಂಜದೀವ್‌ ದ್ವೀಪದಲ್ಲಿ ವಾಸ್ಕೋಡ ಗಾಮ ಕೂಡ ಉಳಿದು, ಇಲ್ಲಿ ದೊರಕುವ ಸಿಹಿನೀರನ್ನು ಕುಡಿದ ಇತಿಹಾಸವಿದೆ. ಆದರೆ, ಈ ಪ್ರದೇಶ ಸೀಬರ್ಡ್‌ ನೌಕಾನೆಲೆ ಯೋಜನೆಗೆ ಸೇರಿದ್ದು ಪ್ರವೇಶ ನಿಷಿದ್ಧ.

ಬೆಂಗಳೂರಿನಿಂದ ಕಾರವಾರಕ್ಕೆ 525 ಕಿ.ಮೀ. ಮಾತ್ರ. ರಾಜ್ಯದ ಬಹುತೇಕ ಎಲ್ಲ ಪ್ರಮುಖ ಪಟ್ಟಣಗಳಿಂದಲೂ ಬಸ್‌ ಸೌಕರ್ಯ ಇದೆ. ಕೊಂಕಣ ರೈಲ್ವೆಯೂ ಇಲ್ಲೇ ಹಾದು ಹೋಗುತ್ತದೆ. ಖಾಸಗೀ ಹಾಗೂ ಸರಕಾರಿ ಇಲಾಖೆಗಳ ಪ್ರವಾಸೋದ್ಯಮದ ಬಸ್‌ ಸೌಕರ್ಯವೂ ಇದೆ.

ಮುಖಪುಟ / ನೋಡು ಬಾ ನಮ್ಮೂರ
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+