ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜರ್ಮನಿಯಲ್ಲಿ ಭಾರತದ ಸಾಫ್ಟ್‌ವೇರ್‌ ದೈತ್ಯ ಇನ್ಫೋಸಿಸ್‌ ಹೆಜ್ಜೆ

By Staff
|
Google Oneindia Kannada News

ಬೆಂಗಳೂರು : ಭಾರತೀಯ ಸಾಫ್ಟ್‌ವೇರ್‌ ದೈತ್ಯ ಇನ್ಫೋಸಿಸ್‌ ಟೆಕ್ನಾಲಜೀಸ್‌ ಲಿಮಿಟೆಡ್‌ ತನ್ನ ಚಟುವಟಿಕೆಗಳನ್ನು ಜರ್ಮನಿಯಲ್ಲಿ ವಿಸ್ತರಿಸಲು ನಿರ್ಧರಿಸಿದ್ದು , ಬಿಎಚ್‌ಎಫ್‌ ಬ್ಯಾಂಕ್‌ನ ಸುರಕ್ಷತಾ ಬೇಡಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿದೆ.

ಬಿಎಚ್‌ಎಫ್‌ ಬ್ಯಾಂಕ್‌ ಮಾತ್ರವಲ್ಲದೆ, ಅಡಿಡಾಸ್‌, ಪ್ರೆಸಿಸ್‌24ಡಾಟ್‌ಕಾಂ ಹಾಗೂ ಫ್ರಾಂಕ್ಲಿನ್‌ ಟೆಂಪ್ಲೆಟನ್‌ ಇನ್‌ವೆಸ್ಟ್‌ಮೆಂಟ್ಸ್‌ ಜರ್ಮನಿಯಲ್ಲಿ ಇನ್ಫೋಸಿಸ್‌ಗೆ ದೊರೆತಿರುವ ಇತರ ಗಿರಾಕಿಗಳು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಲಾಢ್ಯವಾಗಿ ಬೆಳೆದಿರುವ ಇನ್ಫೋಸಿಸ್‌ ಕಂಪನಿಯನ್ನು ತನ್ನ ಐಟಿ ಪಾಲುದಾರನನ್ನಾಗಿ ಆರಿಸಿಕೊಳ್ಳುವುದು ಜರ್ಮನಿಗೆ ಆಯ್ಕೆಯಾಗಿತ್ತು ಎಂದು ಇನ್ಫೋಸಿಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ನಂದನ್‌ ನೀಲೇಕಣಿ ತಮ್ಮ ಕಂಪನಿಯ ಜರ್ಮನಿ ಯಾತ್ರೆಯ ವಿಷಯವನ್ನು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೆಮ್ಮೆಯಿಂದ ಬಣ್ಣಿಸಿಕೊಂಡರು.

ವರ್ಷಾಂತ್ಯ ಮಾರ್ಚ್‌ ನಲ್ಲಿ ಇನ್ಫೋಸಿಸ್‌ನ ನಿವ್ವಳ ಆದಾಯ ಪ್ರತಿಶತ 114 ರಷ್ಟಿತ್ತು . ಆದರೆ, ಏಪ್ರಿಲ್‌ ತಿಂಗಳಿನ ಸ್ಲೋಡನ್‌ನಲ್ಲಿ ಕಂಪನಿ ಶೇ 30 ರ ಇಳಿಕೆಯನ್ನು ಕಾಣಬೇಕಾಯಿತು. ಜರ್ಮನಿಯಲ್ಲಿ ಬಿಎಚ್‌ಎಫ್‌ನ ಕಷ್ಟಕರ ಯೋಜನೆಗಳನ್ನು ನಮ್ಮ ತಂತ್ರಜ್ಞರು ಅಭಿವೃದ್ಧಿಪಡಿಸುವರು ಎಂದು ನೀಲೇಕಣಿ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X