Get Updates
Get notified of breaking news, exclusive insights, and must-see stories!

12 ವರ್ಷಗಳ ನಂತರ ಪಾಕಿಸ್ತಾನದಲ್ಲಿಭಾರತ- ಪಾಕ್‌ ಟೆಸ್ಟ್‌!

ನವದೆಹಲಿ : ಆಸ್ಟ್ರೇಲಿಯಾದ ಒಳಾಂಗಣ ಮೈದಾನದಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ ಕ್ರಿಕೆಟ್‌ ಆಡಲು ಒಪ್ಪಿದ್ದ ಭಾರತ ಈಗ ತನ್ನ ಇರಾದೆ ಬದಲಿಸಿದ್ದು, ಅದೇ ತಿಂಗಳಲ್ಲಿ ಪಾಕಿಸ್ತಾನದ ನೆಲದಲ್ಲಿ 12 ವರ್ಷಗಳ ದೀರ್ಘವಿರಾಮದ ನಂತರ ಮೊದಲ ಟೆಸ್ಟ್‌ ಪಂದ್ಯ ಆಡಲಿದೆ ! ಬಿಸಿಸಿಐ ಕಾರ್ಯದರ್ಶಿ ಜಯವಂತ ಲೆಲೆ ಸೋಮವಾರ ಈ ವಿಷಯ ತಿಳಿಸಿದ್ದಾರೆ.

ಸ್ಟೀವ್‌ ವಾ ನೇತೃತ್ವದ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ತಂಡದ ವಿರುದ್ಧ ಮೆಲ್ಬೋರ್ನ್‌ನ ಕೊಲೋನಿಯಲ್‌ ಒಳಾಂಗಣ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್‌ 10ರಿಂದ 16ರವರೆಗೆ ಕ್ರಿಕೆಟ್‌ ಆಡಲು ಬಂದಿದ್ದ ಬುಲಾವಿಗೆ ಭಾರತ ಒಪ್ಪಿತ್ತು. ಸೆಪ್ಟೆಂಬರ್‌ 13ರಿಂದ 17ರವರೆಗೆ ಏಷ್ಯನ್‌ ಟೆಸ್ಟ್‌ ಚಾಂಪಿಯನ್‌ಷಿಪ್‌ ಪಂದ್ಯ ಆಡಲು ಉಭಯ ರಾಷ್ಟ್ರಗಳೂ ಕಳೆದ ವಾರ ಲಾಹೋರಿನಲ್ಲಿ ಒಪ್ಪಿಗೆ ಸೂಚಿಸಿವೆ !

ಆಸ್ಟ್ರೇಲಿಯಾದಲ್ಲಿ ಒಂದು ದಿನದ ಸರಣಿ ಆಡುವುದಕ್ಕಿಂತ ಪಾಕ್‌ ವಿರುದ್ಧ ಟೆಸ್ಟ್‌ ಪಂದ್ಯ ಆಡುವುದೇ ನಮ್ಮ ಆಯ್ಕೆ. ಒಳಾಂಗಣ ಕ್ರಿಕೆಟ್‌ ಆಡಲು ಆಸ್ಟ್ರೇಲಿಯಾಕ್ಕೆ ಬರುತ್ತಿಲ್ಲ ಎಂದು ಸದ್ಯದಲ್ಲೇ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಗೆ ಪತ್ರ ಬರೆಯುತ್ತೇನೆ ಎಂದು ಜಯವಂತ ಲೆಲೆ ಎಎಫ್‌ಪಿಗೆ ತಿಳಿಸಿದ್ದಾರೆ.

ಕಳೆದ ವರ್ಷ ಕೊಲೋನಿಯಲ್‌ ಕ್ರೀಡಾಂಗಣದಲ್ಲಿ ಉದ್ಘಾಟನಾ ಒಳಾಂಗಣ ಕ್ರಿಕೆಟ್‌ ಪಂದ್ಯ ನಡೆದಿತ್ತು. ಆಸ್ಟ್ರೇಲಿಯಾವನ್ನು ದಕ್ಷಿಣ ಆಫ್ರಿಕ ತಂಡ ಎದುರಿಸಿತ್ತು. ಈಚೆಗೆ ತಾನೆ ಭಾರತ ಪ್ರವಾಸ ಮುಗಿಸಿಕೊಂಡು ಹೋದ ಆಸ್ಟ್ರೇಲಿಯಾ, ಒಳಾಂಗಣ ಕ್ರಿಕೆಟ್‌ ಆಡಲು ಭಾರತಕ್ಕೆ ಬುಲಾವು ನೀಡಿತ್ತು. ಭಾರತ ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿತ್ತು.

1989ರ ನಂತರ ಇದೇ ಮೊದಲ ಬಾರಿಗೆ ಭಾರತ, ಪಾಕಿಸ್ತಾನದ ನೆಲದಲ್ಲಿ ಟೆಸ್ಟ್‌ ಕ್ರಿಕೆಟ್‌ ಆಡಲು ಒಪ್ಪಿಗೆ ಸೂಚಿಸಿದೆ ಎಂದು ಕಳೆದ ವಾರ ಏಷ್ಯನ್‌ ಕ್ರಿಕೆಟರ್ಸ್‌ನ ಮುಖ್ಯಸ್ಥರು ಹೇಳಿದ್ದರು. ಭಾರತದ ಈ ನಿರ್ಧಾರದಿಂದಾಗಿ 2 ವರ್ಷಗಳಿಂದ ಪಾಕಿಸ್ತಾನದೊಟ್ಟಿಗೆ ಹಳಸಿಕೊಂಡಿರುವ ಭಾರತದ ಕ್ರಿಕೆಟ್‌ ಸಂಬಂಧ ಉತ್ತಮವಾಗುವ ನಿರೀಕ್ಷೆಯಿದೆ.

ವಿವಿಧ ರಾಷ್ಟ್ರಗಳು ಪಾಲ್ಗೊಳ್ಳುವ ಟೂರ್ನಿಗಳಲ್ಲಿ ಮಾತ್ರ ಪಾಕಿಸ್ತಾನದ ವಿರುದ್ಧ ಭಾರತ ಆಡಬಹುದು ಎಂದು ಭಾರತ ಸರ್ಕಾರ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಪಾಕಿಸ್ತಾನದ ವಿರುದ್ಧ ಭಾರತದ ಸೆಣಸು ಬಹುಶಃ ಕರಾಚಿಯಲ್ಲಿ ನಡೆಯಲಿದೆ.

(ಎಎಫ್‌ಪಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+