ಕಾಮಣ್ಣರನ್ನು ಮುಗಿಸಿಬಿಡಲು ಮಹಿಳೆಯರಿಗೆ ಡಾ. ರಾಜ್ ಕರೆ
ಮೈಸೂರು : ರಾಜ್‌ಕುಮಾರ್ ಇಳಿ ವಯಸ್ಸಿನಲ್ಲಿ ಅಬಲೆಯರ ನೆರವಿಗೆ ಮುಂದಾಗಿದ್ದಾರೆ. ಅವರ ಉತ್ಸಾಹ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು . ಸಂದರ್ಭ : ಮೈಸೂರು- ಊಟಿ ರಸ್ತೆಯಲ್ಲಿ ಭಾನುವಾರ ಜರುಗಿದ ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿಕೇಂದ್ರ ‘ಶಕ್ತಿಧಾಮ’ದ ಉದ್ಘಾಟನಾ ಸಮಾರಂಭ.
ಕಾಮದಾಹದಿಂದ ಮೇಲೆರಗುವವರನ್ನು ಮುಗಿಸಿಬಿಡಿ. ಆ ಸಂದರ್ಭದಲ್ಲಿ ಬೇಕಾದರೆ ನನ್ನನ್ನು ಕರೆಯರಿ, ಬಂದು ಕೂಡಿಕೊಳ್ಳುತ್ತೇನೆ. ಎಂದು ಹೇಳುವಾಗ ರಾಜ್ ಕಣ್ಣುಗಳಲ್ಲಿ ಇತ್ತೀಚೆಗೆ ಅಪರೂಪವಾಗಿದ್ದ ಹೊಳಪು ಇಣುಕುತ್ತಿತ್ತು . ಎಲ್ಲಿಯವರೆಗೆ ಮಹಿಳೆ ಶೋಷಣೆಯನ್ನು ತಾಳಿಕೊಳ್ಳುತ್ತಾಳೋ, ಅಲ್ಲಿಯವರೆಗೆ ಶೋಷಣೆ ನಡೆಯುತ್ತಲೇ ಇರುತ್ತದೆ. ಶೋಷಣೆಯನ್ನು ಎದುರಿಸಲು ಮಹಿಳೆಯರು ಕುಂಗ್‌ಫೂ, ಕರಾಟೆಗಳಂಥಾ ಆತ್ಮರಕ್ಷಣೆ ವಿದ್ಯೆಗಳನ್ನು ಕಲಿಯಬೇಕೆಂದು, ಆ ಮೂಲಕ ಮಹಿಳೆರು ಪುರುಷರಾಗಬೇಕೆಂದು ರಾಜ್ ಕರೆ ನೀಡಿದರು.
ಶಕ್ತಿಧಾಮದ ಸ್ಥಾಪನೆಗೆ ನೆರವು ನೀಡಿದವರನ್ನು ರಾಜ್ ಸನ್ಮಾನಿಸಿದರು. ಈ ಶಕ್ತಿಧಾಮದ ರೂವಾರಿ ರಾಜ್ ಎಂದು ಹೇಳಲಾಗುತ್ತಿದೆ. ಅದನ್ನು ನಾನು ನಂಬುವುದಿಲ್ಲ . ರಾಜ್‌ಕುಮಾರ್‌ಗೆ ಯಾವತ್ತೂ ಇಷ್ಟು ಒಳ್ಳೆಯ ಬುದ್ಧಿ ಬಂದಿಲ್ಲ . ಹಿಂದೆ ಕೋತಿಗಳು ಆಂಜನೇಯನನ್ನು ಹೊಗಳಿ, ಉಬ್ಬಿಸಿ ಸಮುದ್ರ ಹಾರಿಸಿದಂತೆ, ನನ್ನನ್ನು ಚುಚ್ಚಿ ಚುಚ್ಚಿ ಈ ಕೆಲಸ ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಿರಿಯ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರು, ದಾರಿ ತಪ್ಪಿದ ಹೆಣ್ಣು ಮಕ್ಕಳಿಗೆ ಆಸರೆ ನೀಡುವ ಕೆಲಸ ನಿಮ್ಮಿಂದಾಗಬೇಕೆಂದು ಪ್ರೇರೇಪಿಸಿದರು. ಆದ್ದರಿಂದ ಶಕ್ತಿಧಾಮದ ಕಾರಣಪುರುಷರು ಅವರೇ ಹೊರತು ತಾವಲ್ಲ ಎಂದು ರಾಜ್ ಬಣ್ಣಿಸಿದರು. ಶಕ್ತಿಧಾಮಕ್ಕೆ ಸ್ಥಳದಾನ ನೀಡಿದ ಸುತ್ತೂರು ಸಂಸ್ಥಾನವನ್ನು ಅವರು ಶ್ಲಾಘಿಸಿದರು. ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications