ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಸ್ನೇಹಿತರಿಂದ ಕಷ್ಟ ನಷ್ಟ ಸಂಭವ. ಮನೆಯಲ್ಲಿದ್ದರೆ ಖಂಡಿತಾ ನೆಮ್ಮದಿ. ಹೊರಗೆ ಹೋದರೆ, ಖರ್ಚು ವಿಪರೀತ ಆದೀತು ಎಚ್ಚರ.ವೃಷಭ : ನಿಮ್ಮ ಶ್ರಮಕ್ಕೆ ಇಂದು ಪ್ರತಿಫಲ ಇದೆ. ಹಿರಿಯರು ನಿಮ್ಮ ಕಾರ್ಯವನ್ನು ಗುರುತಿಸುತ್ತಾರೆ. ಶುಭ ಸಮಾಚಾರ ಸಂಜೆಯ ವೇಳೆಗೆ ಬರಲಿದೆ. ಮಧುರ ಮಿಲನದ ಅನುಭವವೂ ಆಗಲಿದೆ.
ಮಿಥುನ : ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದಲೇ ಎಲ್ಲವನ್ನೂ ಗೆಲ್ಲುತ್ತೀರಿ. ಜೀವನ ಸುಖಮಯವಾಗಿದೆ. ಶತ್ರುಗಳೂ ಮಿತ್ರರಾಗುವ ಕಾಲ ಇದು. ಆದರೂ ಅಶಾಂತಿ ಇರತ್ತೆ ಎಚ್ಚರ.
ಕಟಕ : ಮನಸ್ಸಿನಲ್ಲಿರುವ ವಿಕೃತ ಭಾವನೆಗಳನ್ನು ಬಿಡಲು ಪ್ರಯತ್ನಿಸಿ. ಅನ್ಯರಿಗೆ ತೊಂದರೆ ಕೊಡುವ ಪ್ರವೃತ್ತಿ ಒಳ್ಳೆಯದಲ್ಲ. ಸತ್ಕಾರ್ಯ ಹಾಗೂ ಶುಭ ಚಿಂತನೆಯಿಂದ ಆನಂದ.
ಸಿಂಹ : ನಿತ್ಯದ ದುಡಿಮೆಯಿಂದ ಬಸವಳಿದಿದ್ದೀರಿ. ಇಂದಾದರೂ ವಿಶ್ರಾಂತಿ ಇರಲಿ. ಕೆಲಸ ಇದ್ದದ್ದೇ. ಆರೋಗ್ಯದ ಕಡೆ ಹೆಚ್ಚು ಗಮನ ನೀಡಿ. ಪ್ರಣಯಿಗಳಿಗೆ ಸಂತಸದ ದಿನ.
ಕನ್ಯಾ : ಹಣ ಹೂಡಿಕೆಗೆ ಇಂದು ಕಾಲ ಪಕ್ವವಾಗಿಲ್ಲ. ಚಿಂತೆ ಮಾಡಿ ಹೆಜ್ಜೆ ಇಡಿ. ಅಂದುಕೊಂಡಿದ್ದೆಲ್ಲಾ ಸದಾ ನೆರವೇರುವುದಿಲ್ಲ. ರಿಸ್ಕ್ ಬೇಡ.
ತುಲಾ : ಎಲ್ಲಕ್ಕೂ ಕಾಲವೇ ಉತ್ತರ. ಯಾವುದೂ ನಮ್ಮ ಕೈಯಲ್ಲಿಲ್ಲ. ಕಾಲದ ಅಧೀನರು ನಾವು ಎನ್ನುವುದನ್ನು ಮರೆಯದಿರಿ. ನಿಮಗೂ ಒಂದು ಒಳ್ಳೇ ಕಾಲ ಬಂದೇ ಬರತ್ತೆ.
ವೃಶ್ಚಿಕ : ಪಾಲುಗಾರಿಕೆ ವ್ಯವಹಾರದಲ್ಲಿ ಲಾಭವಿದೆ. ಆನಂದಮಯ ಪ್ರವಾಸದ ಸೂಚನೆ ಇದೆ. ಸಂಗೀತ, ನಾಟಕ ಪ್ರದರ್ಶನ ವೀಕ್ಷಣೆಯಿಂದ ಮನಸ್ಸಿನ ಭಾರ ಕಡಿಮೆ ಆಗಲಿದೆ.
ಧನಸ್ಸು : ಮುಖ್ಯವಾದ ನಿರ್ಧಾರಗಳನ್ನು ಕೈಗೊಳ್ಳಲು ಇಂದು ಸಕಾಲ. ಮನಸ್ಸಿಗೆ ತೋಚಿದ್ದನ್ನು ಮಾಡದೆ, ಸನ್ಮಿತ್ರರೊಂದಿಗೆ ಸಮಾಲೋಚನೆ ಮಾಡಿ. ಹಿರಿಯರ ಅನುಭವ ಇಂದು ನಿಮ್ಮ ನೆರವಿಗೆ ಬರುತ್ತದೆ.
ಮಕರ : ಮನೆಗೆ ಬಂಧು ಬಾಂಧವರು ಬರುತ್ತಾರೆ. ಒಟ್ಟಾರೆ ಸಂತೋಷಕರ ವಾತಾವರಣ. ಧನಲಾಭದ ಮುನ್ಸೂಚನೆ ಸಿಕ್ಕಿದೆ ಅಲ್ಲವೆ? ಸಂತಸವನ್ನು ಸೂರೆ ಮಾಡಿ.
ಕುಂಭ : ನಿದ್ದೆಗೆಟ್ಟಿದ್ದೀರಿ. ಮನದಲ್ಲಿ ಏನೋನೋ ಗೊಂದಲ, ತುಮಲ, ಮನೆಯಲ್ಲಿ ಉಲ್ಲಾಸಕರ ವಾತಾವರಣ, ಹಣಕಾಸಿನ ಸ್ಥಿತಿ ಮಾತ್ರ ಅತೃಪ್ತಿದಾಯಕ.
ಮೀನ : ನಿಮ್ಮ ವಿರೋಧಿಗಳು ಸೋಲುಂಡ ಸುಣ್ಣವಾಗುತ್ತಾರೆ. ಯಶಸ್ಸು ಕಟ್ಟಿಟ್ಟ ಬುತ್ತಿ. ಸ್ತ್ರೀ ಸಂಕುಲವೇ ನಿಮ್ಮ ಬೆಂಬಲಕ್ಕಿದೆ. ಉಪವೃತ್ತಿಯಿಂದ ಲಾಭ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications