ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೈ ಮಹದೇಶ್ವರನ ವಾರ್ಷಿಕ ಆದಾಯ 5 ಕೋಟಿ 30 ಲಕ್ಷ ರುಪಾಯಿ

By Staff
|
Google Oneindia Kannada News

ಕೊಳ್ಳೇಗಾಲ : ಸುಮಾರು 600 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಪ್ರಸಿದ್ಧ ಪುಣ್ಯಕ್ಷೇತ್ರ ಮಲೈ ಮಹದೇಶ್ವರ ಬೆಟ್ಟಕ್ಕೆ ಬರುವ ಯಾತ್ರಾತ್ರಿಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ. ಅಂತೆಯೇ ದೇವಾಲಯದ ವರಮಾನ ಕೂಡ. ಕಾಡುಗಳ್ಳ ವೀರಪ್ಪನ್‌ ಕರೆನೆರಳಿನಲ್ಲೇ ಅಡಗಿದ್ದ ಈ ಕ್ಷೇತ್ರಕ್ಕೆ ಈಗ ಗತವೈಭವ ಮರುಕಳಿಸಿದೆ.

ಹಿಂದೆಂದೂ ಕಾಣದಷ್ಟು ಆದಾಯ ಈ ಬಾರಿ ದೇವಾಲಯಕ್ಕೆ ಬಂದಿದೆ. ಈ ತಿಂಗಳು ದೇಗುಲದ ಹುಂಡಿಯಲ್ಲಿ 57 ಗ್ರಾಂ ಚಿನ್ನ, 450 ಗ್ರಾಂ ಬೆಳ್ಳಿ, 11,81,987 ರುಪಾಯಿ ನಗದು ಸಂಗ್ರಹವಾಗಿದೆ.

ಒಟ್ಟಾರೆಯಾಗಿ ಈ ವರ್ಷ ದೇವಾಲಯಕ್ಕೆ ಬಂದಿರುವ ಆದಾಯ 5 ಕೋಟಿ 30 ಲಕ್ಷ ರುಪಾಯಿಗೂ ಹೆಚ್ಚು. ದೇವಾಲಯದ ಇತಿಹಾಸದಲ್ಲೇ ಇಷ್ಟೊಂದು ವರಮಾನ ಯಾವ ವರ್ಷವೂ ಬಂದಿರಲಿಲ್ಲ ಎಂದು ದೇವಾಲಯದ ಧರ್ಮದರ್ಶಿ ಪುಟ್ಟಣ್ಣ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ದೇವಾಲಯ ಮಂಡಳಿಯ ಅಧ್ಯಕ್ಷ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳ ಪರಿಶ್ರಮದ ಫಲವಾಗಿ ಇದು ಸಾಧ್ಯವಾಗಿದೆ ಎಂದೂ ಅವರು ಹೇಳಿದರು. ದೇವಾಲಯದ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದರು.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X