Get Updates
Get notified of breaking news, exclusive insights, and must-see stories!

ಶಿಕ್ಷಣ ವಂಚಿತ ಬಡಮಕ್ಕಳಿಗೆ ಸುತ್ತೂರು ಮಠದಿಂದ ‘ವಿದ್ಯಾದಾಸೋಹ’

ಬೆಂಗಳೂರು : ಶಿಕ್ಷಣ ವಂಚಿತರಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸುತ್ತೂರು ಮಠ ಮುಂದೆ ಬಂದಿದ್ದು , ಈ ನಿಟ್ಟಿನಲ್ಲಿ ಒಂದು ಸಾವಿರ ಮಕ್ಕಳಿಗೆ ಉಚಿತ ಊಟ ವಸತಿಯಾಂದಿಗೆ ವಿದ್ಯಾಭ್ಯಾಸ ನೀಡಲು ನಿರ್ಧರಿಸಿದೆ.

ಬಡ ವಿದ್ಯಾರ್ಥಿಗಳ ಪೋಷಕರು ಶ್ರೀಮಠವನ್ನು ಸಂಪರ್ಕಿಸಿ ಮಕ್ಕಳನ್ನು ಸುತ್ತೂರಿನ ಶಾಲೆಗೆ ಸೇರಿಸಬಹುದು. ಪೋಷಕರು ಮಾತ್ರವಲ್ಲದೆ ಬಡ ನಿರಾಶ್ರಿತ ವಿದ್ಯಾರ್ಥಿಗಳನ್ನು ಯಾವುದೇ ನಾಗರಿಕರು ಕರೆ ತಂದು ಶಾಲೆಗೆ ಸೇರಿಸಬಹುದಾಗಿದೆ. ಈ ವಿಷಯವನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆ.ಎಸ್‌.ಎಸ್‌. ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಡಿ. ನಂಜುಂಡಪ್ಪ ತಿಳಿಸಿದರು.

ಮಕ್ಕಳ ಸಂಖ್ಯೆ ಸಾವಿರ ಅಂದುಕೊಂಡಿದ್ದರೂ, ಈ ಸಂಖ್ಯೆ ಮೂರು ಸಾವಿರ ಕೂಡ ಆಗಬಹುದು. ಊಟ, ವಸತಿ, ಶಿಕ್ಷಣ ಸೇರಿದಂತೆ ಪ್ರತಿ ವಿದ್ಯಾರ್ಥಿಗೆ 28 ಸಾವಿರ ರುಪಾಯಿ ಖರ್ಚಾಗುತ್ತದೆ. ಸಾರ್ವಜನಿಕರು ಕೂಡ ವಿದ್ಯಾದಾನದಲ್ಲಿ ತಮ್ಮ ಕೊಡುಗೆ ಸಲ್ಲಿಸಬಹುದು ಎಂದು ನಂಜುಂಡಪ್ಪ ಹೇಳಿದರು.

ಹಂಗರಹಳ್ಳಿ ಜೀತ ವಿಮುಕ್ತರ ಪುನರ್ವಸತಿಗಾಗಿ ಮೈಸೂರಿನಲ್ಲಿ 25 ಮಂದಿಗೆ ಜೆಎಸ್‌ಎಸ್‌ ಸಂಸ್ಥೆ ತರಬೇತಿ ನೀಡುತ್ತಿದೆ. ಐಐಎಸ್‌ ಪರೀಕ್ಷೆಯಲ್ಲಿ ದೇಶಕ್ಕೇ ಮೊದಲ ರ್ಯಾಂಕ್‌ ಗಳಿಸಿದ ಕನ್ನಡತಿ ವಿಜಯಲಕ್ಷ್ಮಿ ಜೆ.ಎಸ್‌.ಎಸ್‌. ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ವಿದ್ಯಾರ್ಥಿನಿ ಎಂದು ನಂಜುಂಡಪ್ಪ ಸಂತಸ ವ್ಯಕ್ತಪಡಿಸಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+