Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಒಂದೆರಡು ತಿರುವುಗಳಲ್ಲಿ ಸಿಟ್ಟು ನಿಯಂತ್ರಿಸಿಕೊಂಡರೆ ಸಂಗಾತಿಯಾಂದಿಗೆ ಸುಂದರ ಸಂಜೆ ನಿಮಗಾಗಿ ಕಾದಿದೆ.

ವೃಷಭ : ಎಲ್ಲಾ ಕೆಲಸಗಳಲ್ಲಿ ನಿರಾಂತಕವಾಗಿ ಕಾಣುತ್ತಿರುವ ಪ್ರಗತಿಯಿಂದಾಗಿ ನೀವು ಖುಷಿಯಾಗಿರುತ್ತೀರಿ. ಅಹಂ ಅನ್ನು ತುಸು ಪಕ್ಕಕ್ಕಿಟ್ಟು ಸಂತೋಷವನ್ನು ಉಳಿಸಿಕೊಳ್ಳಿ.

ಮಿಥುನ : ಸಮಯವೆಲ್ಲಾ ಅತೀ ವೇಗವಾಗಿ ಸರಿಯುತ್ತಿರುವುದರಿಂದ ಸ್ವಲ್ಪ ಖುಷಿ, ಸ್ವಲ್ಪ ಬೇಜಾರು ಅನುಭವಿಸುತ್ತೀರಿ.

ಕಟಕ : ಪ್ರಯಾಣಕ್ಕೆ ಎಲ್ಲ ಸಿದ್ಧತೆಯನ್ನೂ ಮಾಡಿಕೊಳ್ಳುವ ಭರದಲ್ಲಿದ್ದೀರಿ. ಆದರೆ, ನಿಮ್ಮ ಪ್ರಯಾಣ ಮಜಾದಾಯಕವಾದದ್ದಲ್ಲ.

ಸಿಂಹ : ಮನಸ್ಸಿನ ತುಂಬಾ ನೆಮ್ಮದಿ ಇರುವುದರಿಂದ ಹೊಸ ಕೆಲಸಗಳನ್ನು ಆರಂಭಿಸಲು ಇದು ಸುದಿನವೇ ಸರಿ. ಲಕ್ಷ್ಮೀ ಆರಾಧನೆಯಿಂದ ಒಳ್ಳೆಯದಾಗಲಿದೆ.

ಕನ್ಯಾ : ಅಪರೂಪದ ಜನರ ಅದರಲ್ಲಿಯೂ ಸಜ್ಜನರ ಭೇಟಿಯಿಂದ ಜ್ಞಾನವೃದ್ಧಿಯಾಗಲಿದೆ. ಅನನುಕೂಲತೆಗಳನ್ನು ನಿಭಾಯಿಸಿದಲ್ಲಿ ಶುಭವಿದೆ.

ತುಲಾ : ಅನನುಕೂಲ ವಾತಾವರಣ ನಿರ್ಮಾಣವಾದಾಗ ಜಾಣತನದಿಂದ ವರ್ತಿಸಿ ಬಚಾವಾಗಿ. ವ್ಯಾಪಾರ ವ್ಯವಹಾರಗಳಲ್ಲಿ ಮುನ್ನಡೆ ಕಾಣುತ್ತೀರಿ.

ವೃಶ್ಚಿಕ : ಮನಸ್ಸಿನ ಗೊಂದಲಗಳನೇಕ ಇವತ್ತು ಬಗೆಹರಿಯಲಿವೆ. ಮತ್ತು ಅದರಿಂದ ನಿಮಗೆ ತುಸು ನೆಮ್ಮದಿ ಅಂತಲೂ ಅನಿಸುತ್ತದೆ.

ಧನಸ್ಸು : ವ್ಯಾವಹಾರಿಕವಾಗಿ ಅಂತಹ ಒಳ್ಳೇ ದಿನವೇನಲ್ಲ. ಆದರೂ ನಿಮ್ಮ ಹೆಸರಿಗೆ ಮಸಿ ಬಳಿಯುವವರ ಬಗ್ಗೆ ಕಟ್ಟೆಚ್ಚರದಿಂದ ಇರಿ.

ಮಕರ : ಬರೀ ಆರ್ಥಿಕ ಹಾನಿಯಿಂದ ಬಳಲುತ್ತಿರುವ ನಿಮಗೆ ಅಂತಹ ಉತ್ತಮ ಸನ್ನಿವೇಶಗಳೇನೂ ಕಾಣಿಸುವುದಿಲ್ಲ.

ಕುಂಭ : ಆಫೀಸಿನಲ್ಲಿ ಆರಾಮ ವಾತಾವರಣ ಇರುವುದರಿಂದ ತುಂಬಾ ಬಿಡುವು ಸಿಗುತ್ತದೆ. ಅದನ್ನು ಸದುಪಯೋಗಪಡಿಸಿಕೊಳ್ಳಿ.

ಮೀನ : ಎಲ್ಲವೂ ಚೆನ್ನಾಗಿರಲಿ ಎಂದು ಹಾರೈಸುವವರ ಮಧ್ಯೆ ನಿಮ್ಮ ಕೊಂಕು ಬುದ್ಧಿಯಿಂದ ನೀವೇ ನಷ್ಟ ಅನುಭವಿಸುತ್ತೀರಿ. ಧನಲಾಭವಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+