ನನಗೆ ಮರ ಸುತ್ತೋದು ಅಂದ್ರೆ ತುಂಬಾ ಇಷ್ಟ - ಜಡೇಜ
ಮುಂಬಯಿ : ಆತ ಆರಾಮಾಗಿದ್ದಾರೆ. ಕಿಂಚಿತ್ತೂ ಕಳಕೊಂಡ ಪ್ರಜ್ಞೆ ಕಾಡುತ್ತಿಲ್ಲ. ಈಗಲೂ ಅದೇ ತುಂಟನಗು. ಕ್ರಿಕೆಟ್‌ನಿಂದ 5 ವರ್ಷ ಕಾಲ ನಿಷೇದಕ್ಕೆ ಒಳಗಾಗಿರುವ ಅಜಯ್ ಜಡೇಜ ವಿಷಯ ಇದು. ಈಗವರು ಬಾಲಿವುಡ್ ನಟ. ಯೂಸಫ್ ಖಾನ್ ಚೊಚ್ಚಲ ನಿರ್ದೇಶನದ, ಇನ್ನೂ ಹೆಸರಿಡದ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
ಕಳೆದ 3 ವರ್ಷಗಳಿಂದ ಸಿನಿಮಾ ಆಫರ್‌ಗಳು ಬರುತ್ತಿದ್ದವು. ಈಗ ನಟಿಸಲು ಸರಿಯಾದ ಸಮಯ ಅಂತ ಸಿನಿಮಾಗೆ ಕಾಲಿಟ್ಟೆ - ಜೆ.ಕೆ.ಟೈರ್ಸ್ ಆಯೋಜಿಸಿದ್ದ ಮೋಟಾರ್ ಕ್ರೀಡೆಯನ್ನು ಲೀ ಮೆರಿಡಿಯನ್ ಹೊಟೇಲಿನಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕ್ರಿಕೆಟ್ಟು ನನ್ನ ಮೊದಲ ಪ್ರೇಮ. ನನ್ನ ಮೇಲೆ ಹೇರಿರುವ ನಿಷೇಧದ ವಿರುದ್ಧ ಶತಾಯಗತಾಯ ಹೋರಾಡುತ್ತೇನೆ ಅನ್ನುತ್ತಾರೆ ಜಡೇಜ.
ಆಕರ್ಷಕ ನಗೆ ಸೂಸುತ್ತಲೇ ಜಡೇಜಾ ಮಾತಾಡಿದರು...
ಜೂನ್‌ನಲ್ಲಿ ಸಿನಿಮಾ ಶೂಟಿಂಗ್ ಶುರುವಾಗುತ್ತೆ. 60 ದಿನ ಮಾತ್ರ ಭಾರತದಲ್ಲಿ ಶೂಟಿಂಗ್. ಆಮೇಲೆ ಲಂಡನ್‌ಗೆ ಹಾರುತ್ತೇವೆ. (ಸಿನಿಮಾ ಹೀರೋಯಿನ್ ಯಾರು ಎಂಬ ಪ್ರಶ್ನೆಗೆ...) ಹಿರೋಯಿನ್ ಯಾರು ಅನ್ನೋದು ಸೀಕ್ರೇಟ್. ನನಗಂತೂ ಮರ ಸುತ್ತೋದು ತುಂಬಾ ಇಷ್ಟ ; ಇದು ಎಲ್ಲರಿಗೂ ಇಷ್ಟ ಅಂತ ಅಂದ್ಕೊಂಡಿದೀನಿ.
(ಮೊದಲ ಸಿನಿಮಾ ಕಷ್ಟ ಅನ್ನಿಸೋದಿಲ್ಲವೇ? ) ನಾನು ಮಾಡಲಿಂಗ್‌ಗೆ ಈಗಾಗಲೇ ಕೆಮೆರಾ ಫೇಸ್ ಮಾಡಿದ್ದೀನಿ. ನಟನೆ ಎಲ್ಲರ ಜೀವನದ ಅಂಗ ಅಲ್ಲವೇ ? ಹೀಗಾಗಿ ಕೆಮೆರಾ ಎದುರಿಸೋದು ನನಗೆ ಕಷ್ಟ ಅಲ್ಲವೇ ಅಲ್ಲ. (ಸಿನಿಮಾ ಕಥೆ ಬಗ್ಗೆ ಹೇಳಿ..) ಇಬ್ಬರು ಸ್ನೇಹಿತರ ಕಥೆಯದು. ಆದರೆ, ರೊಮ್ಯಾಂಟಿಕ್ ಸಿನಿಮಾ ಹೌದೋ, ಅಲ್ಲವೋ ಗೊತ್ತಿಲ್ಲ.
ಮೊನ್ನೆ ತಾನೆ ಮದುವೆಯಾದ ಜಡೇಜ ಹೊಸ ಸಂಸಾರದೊಟ್ಟಿಗೆ ಸಂತಸದ ಕ್ಷಣಗಳ ಕಳೆಯುತ್ತಿದ್ದಾರೆ. ಐ ಎಂಜಾಯ್ ಬೀಯಿಂಗ್ ಮ್ಯಾರೀಡ್. ಸೋ ಫಾರ್ ಸೋ ಗುಡ್ ಅಂತಾರೆ. ಅಂದಹಾಗೆ, ಸಿನಿಮಾಗೋಸ್ಕರ ಡ್ಯಾನ್ಸ್ ಕ್ಲಾಸಿಗೂ ಸೇರಿದ್ದಾರೆ.
(ಯುಎನ್‌ಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications