ಚಿತ್ತಾಪುರದಲ್ಲಿ ಒಂದು ಸೆಂಟಿ ಮೀಟರ್ ಮಳೆ
ಬೆಂಗಳೂರು : ಬಿಸಿಲ ಬೇಗೆಯಿಂದ ಬೆವೆತಿದ್ದ ಚಿತ್ತಾಪುರದ ಜನತೆಗೆ ಮಂಗಳವಾರ ಸುರಿದ ಮಳೆ ತಂಪು ನೀಡಿತು. ಕಾದಿದ್ದ ಇಳೆ ಕೊಂಚ ತಣ್ಣಗಾಯಿತು. ರಾಜ್ಯದ ಗರಿಷ್ಠ ತಾಪಮಾನ ರಾಯಚೂರು ಹಾಗೂ ಗುಲ್ಬರ್ಗಾದಲ್ಲಿ (42 ಡಿಗ್ರಿ ಸೆಲ್ಸಿಯಸ್) ದಾಖಲಾಗಿತ್ತು. ಚಿತ್ತಾಪುರದಲ್ಲಿ ಒಂದು ಸೆಂಟಿ ಮೀಟರ್ ಮಳೆ ಬಿದ್ದಿದೆ.
ಉತ್ತರ ಒಳನಾಡಿನ ಕೆಲವೆಡೆಯೂ ಹಗುರ ಮಳೆ ಆದ ವರದಿಗಳು ಬಂದಿವೆ. ಮುನ್ಸೂಚನೆಯ ಪ್ರಕಾರ ರಾಜ್ಯದ ಮಧ್ಯ ಭಾಗದಲ್ಲಿ ಮುಂದಿನ 36 ಗಂಟೆಗಳ ಅವಧಿಯಲ್ಲಿ ಮಳೆ ಅಥವಾ ಗುಡುಗು ಸಹಿತ ಸುರಿಮಳೆ ಬೀಳುವ ಸಾಧ್ಯತೆ ಇದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶ ಇದ್ದು, ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರುವ ಸೂಚನೆ ಇದೆ.












Click it and Unblock the Notifications